ಚೈತ್ರಾ ಕುಂದಾಪುರ ಮೂಲತಃ ಕುಂದಾಪುರದವರಾಗಿದ್ದು ರಾಷ್ಟ್ರೀಯತೆ ಹಿಂದೂಪರ ಚಿಂತನೆಯಲ್ಲಿ ಮಂಚೂಣಿಯಲ್ಲಿರುವವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಷ್ಟ್ರೀಯ…
ಒಂದಾನೊಂದು ಕಾಲದಲ್ಲಿ ಒಬ್ಬ ವಿಚಿತ್ರ ಸ್ವಭಾವದ ರಾಜನಿದ್ದ. ರಾಣಿ ಮತ್ತು ರಾಜನ ಅಸ್ಥಾನದವರ ಸಹಿತ ಆ ರಾಜ್ಯದ ಎಲ್ಲರಿಗೂ ರಾಜನ ವಿಚಿತ್ರ ಸ್ವಭಾವದ ಬಗ್ಗೆ ವಿಪರೀತ ಭಯ. ಯಾವ ಕ್ಷಣದಲ್ಲಿ ರಾಜ ಏನು ಮಾಡುತ್ತಾನೆಂದು ಯಾರೂ ಊಹಿಸುವಂತಿರಲಿಲ್ಲ.…
೫.ಜಗತ್ತನ್ನು ಬೆರಗಾಗಿಸಿದ ನಾಗರಿಕತೆ: ಭಾರತದ ಸಿಂಧೂ ಕಣಿವೆ ನಾಗರಿಕತೆ
ಸಿಂಧೂ ನದಿಯ ದಡದಲ್ಲಿ ಬೆಳೆದ ಪ್ರಾಚೀನ ನಾಗರಿಕತೆ ಸಿಂಧೂ ಕಣಿವೆ ನಾಗರಿಕತೆ. ಇದು ಸುಮಾರು ಒಂದು ಸಾವಿರ ವರುಷ (ಕ್ರಿ.ಪೂ.೨,೫೦೦ರಿಂದ ಕ್ರಿ.ಪೂ.೧,೫೦೦ ವರೆಗೆ) ಮೆರೆದ…
ತಳುಕು
ಖಾಲಿ ಕೊಡ
ಹಿಡಿದು ಬಂದ
ನೀರೆಯ ವಯ್ಯಾರಕ್ಕೆ
ಪೈಪೇ ಒಡೆದು
ನೀರು ಚಿಮ್ಮಿತು
ಸುತ್ತಲೂ ತಂಪಾಯಿತು !
*****
ತಲೆಗಳು
ಹೆತ್ತವರ ತಲೆಗಳು
ಗಿರಿ ಬೆಟ್ಟ ಶಿಖರಗಳು
ನಡು ನಡುವೆ
ಅಲ್ಲೊಂದು ಇಲ್ಲೊಂದು
ಸಣ್ಣಗೆ ಹರಿಯುವ
ನೀರಿನ ಝರಿಗಳು !
*****…
ಏನು? ತಲೆಬರಹದಲ್ಲಿ ತಪ್ಪಿದೆಯೇ ? "ಯಥಾ ಪ್ರಜಾ ತಥಾ ರಾಜಾ" ? ಅದು "ಯಥಾ ರಾಜಾ ತಥಾ ಪ್ರಜಾ " ಅಲ್ಲವೆ? ಸರಿ, ಸ್ವಾಮೀ. ನಾವೆಲ್ಲ ಹಾಗೆಯೇ ಕೇಳಿದ್ದೇವೆ . ಆದರೆ ರಾಜರ ಕಾಲ ಮುಗಿದಿದೆ ಅಲ್ಲವೇ ? ಈಗ ಪ್ರಜೆಗಳ ಆಳ್ವಿಕೆಯ ಕಾಲ ಅಲ್ಲವೇ ?…
ಡಾರ್ವಿನ್ ನ ವಿಕಾಸವಾದಕ್ಕೆ ಉತ್ತಮ ಉದಾಹರಣೆಯೆಂದರೆ ಜಿರಾಫೆ ಎಂಬ ಪ್ರಾಣಿ. ಅದರ ಉದ್ದದ ಕತ್ತು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಸಹಸ್ರಾರು ವರ್ಷಗಳ ಹಿಂದೆ ಜಿರಾಫೆಯ ಕತ್ತು ಬೇರೆಲ್ಲಾ ಪ್ರಾಣಿಗಳಂತೆಯೇ ಇತ್ತಂತೆ. ನಂತರದ ದಿನಗಳಲ್ಲಿ…
ಸತ್ಯಕ್ಕೆ ಸಾವಿಲ್ಲ ಅಂದವರಾರು?
ಸುಳ್ಳು ಸಾಯಿಸುತ್ತದೆ
ಜನಗಳನ್ನು ಮನಗಳನ್ನು
ಕೊನೆಗೆ ಸತ್ಯವನ್ನೂ
ಸುಳ್ಳು ಆಕರ್ಷಣೀಯ
ಸತ್ಯ ಕಡೆಗಣನೀಯ
ಸುಳ್ಳಂತೂ ವಾಚಾಳಿ
ಸತ್ಯವೋ ಗಂಭೀರ
ಸುಳ್ಳು ಮುದ ನೀಡುವ ಮೆತ್ತೆ
ಸತ್ಯ ಕಾಲಿಗೆ ಚುಚ್ಚುವ ಮುಳ್ಳು…
ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು…
ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಿಂದ ಅನೇಕ (ಸಾವಿರಕ್ಕೂ ಹೆಚ್ಚು) ಪುಸ್ತಕಗಳನ್ನು ಇಳಿಸಿಕೊಂಡಿದ್ದೆನು. ಈಗ ಆ ತಾಣವು ಕೆಲಸ ಮಾಡುತ್ತಿಲ್ಲ. ಅಲ್ಲಿನ ಪುಸ್ತಕಗಳು ಈಗ archive.org ತಾಣದಲ್ಲಿ ಸಿಗಬಹುದು. ಅವುಗಳನ್ನು ಓದುವ…
ಅಳುತಿದೆ ಬಡ ಜೀವ
ತಂದೆ ತಾಯಿಯ ಪ್ರೀತಿ ಸಿಗದೆ
ಬೆಳೆಯುತಿದೆ
ಕಾಣದ ಲೋಕದಲಿ ಕೈಗೊಂಬೆಯಾಗಿ
ತಾಯಿಯಲ್ಲದ ತಾಯಿಯ ಮಡಿಲಿನಲಿ
ಜೀವನದಟ ಶುರುವಾಗಿ
ಬಯಸುತ ಪ್ರೀತಿಯನು
ತಾಯಿಯ ಮೊರೆ ಹೋಗಲು
ಅಲ್ಲಿ ಲ್ಲವೇ ತಾಯಿ
ತಂದೆಯ ಕಾಣಲು
ಓಡೋಡಿ ಬಂದರು
ಸಿಗನು ತಂದೆ…
*ಮೌನ ಕವಿತೆ*
ನೂರಾರು ಕವಿತೆಗಳ ಬರೆಯಬೇಕೆಂಬಾಸೆ
ಶಬ್ದಗಳ ಕೊರತೆಯದು ಒಮ್ಮೊಮ್ಮೆ ನನಗೆ
ಅಂತರಂಗದ ಭಾಷೆ ಅಕ್ಷರದ ರೂಪದಲಿ
ಬಿಳಿ ಹಾಳೆಗಳ ಮೇಲೆ ಬೀಳಲಾರವು ಕೊನೆಗೆ
ತುಸು ಕೋಪ ಬೇಸರವು ಕೆಲವೊಮ್ಮೆ ಆದಾಗ
ಲೇಖನಿಯು ಮೌನವನೆ ವಹಿಸುವುದು ನಿಜಕು…
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಧ್ರುವತಾರೆ ಪಂಡಿತ್ ಜಸರಾಜ್ ೨೦೨೦ ರ ಆಗಸ್ಟ್ ೧೭ ರಂದು ತಮ್ಮ ಬದುಕಿನ ಗಾಯನ ಮುಗಿಸಿ ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ. ೯೦ ವರ್ಷಗಳ ಜೀವಿತಾವಧಿಯ ೮೦ ವರ್ಷಗಳನ್ನು ಸಂಗೀತ ಕಲಾದೇವಿಯ ಆರಾಧನೆಯಲ್ಲೇ ಕಳೆದ…