ಜೀವದ ಭಾವ

ಜೀವದ ಭಾವ

ಕವನ

ಅಳುತಿದೆ ಬಡ ಜೀವ
ತಂದೆ ತಾಯಿಯ ಪ್ರೀತಿ ಸಿಗದೆ
ಬೆಳೆಯುತಿದೆ
ಕಾಣದ ಲೋಕದಲಿ ಕೈಗೊಂಬೆಯಾಗಿ
ತಾಯಿಯಲ್ಲದ ತಾಯಿಯ ಮಡಿಲಿನಲಿ
ಜೀವನದಟ ಶುರುವಾಗಿ

ಬಯಸುತ ಪ್ರೀತಿಯನು
ತಾಯಿಯ ಮೊರೆ ಹೋಗಲು
ಅಲ್ಲಿ ಲ್ಲವೇ ತಾಯಿ
ತಂದೆಯ ಕಾಣಲು
ಓಡೋಡಿ ಬಂದರು
ಸಿಗನು ತಂದೆ
ಇಬ್ಬರೂ ಕೆಲಸದಲಿ ಮಗ್ನರು
ಮಗುವಿಲ್ಲಿ ತಬ್ಬಲಿಯ ಕಣ್ಣೀರು

ನಾಲ್ಕು ಗೋಡೆಯ ನಡುವೆ
ಬೆಳವಣಿಗೆಯ ಪರ್ವ
ಹೆಸರಿಗೆ ಸಂಬಂಧ
ಉಸಿರಿಗೆ ದಿಗ್ಬಂಧ
ತಾಯಿಯ ಬೇರು ಗಟ್ಟಿಯಾಗದೆ
ಬೆಳೆಯುತಿದೆ ಚಟ್ಟಿಗಿಡ
ಮಣ್ಣಗಿಡವಲ್ಲ

ತಂದೆ-ತಾಯಿ ಇದ್ದರು ಇಲ್ಲದಂತೆ
ಅವರ ಪ್ರೀತಿ ಎಲ್ಲಿ ಸಿಕ್ಕಿತು
ಬದುಕಿನಲಿ ಮುಂದೆ
ಕೊನೆಗೂ ತಾಯಿ 
ಬರುವುದ ಕಾಣದೆ
ಅಳುವು ನಿಂತಿತು
ಕೈತೊಳೆದು ಕಣ್ಣೀರಿನಲಿ

ಹಾ ತೊರೆಯುತಿದೆ ಮಗು
ತಾಯ ಪ್ರೀತಿಗೆ
ತಿಳಿಯದಾಯಿತು ದುಃಖ
ತಂದೆ-ತಾಯಿಗೆ
ಬೆಳೆಯುತಿದೆ ಕಾಣದ ಲೋಕದಲಿ
ಕೈಗೊಂಬೆಯಾಗಿ
ಜೀವನದಾಟ ಶುರುವಾಗಿ