ಮಾನಿನಿಯ ನೋಟ

ಮಾನಿನಿಯ ನೋಟ

ಕವನ

ನೋಟ ಬೀರುತಲಿ

ಕಾಟ ಕೊಡುತಿಹಳು

ದಾಟಿ ಬಂಧದಲಿ ಬೆರೆಯುತಿಹಳು|

ಮೀಟಿ ಹೃದಯವನು

ಕೋಟಿ ರಾಗದಲಿ

ಸಾಟಿಯಿಲ್ಲದಿಹ ಮಾನಿನಿಯಳು||

 

ಕಲ್ಲ ಮನವನ್ನು

ಮೆಲ್ಲ ನುಡಿಯಲ್ಲಿ

ನಲ್ಲೆ ಬಳಿಯಲ್ಲಿ ನಿಂದಿರುವೆನು|

ಒಲ್ಲೆಯೆನ್ನದಿರು

ಚೆಲ್ಲಿ ಕುಸುಮವನು

ನಲ್ಲ ನಾನಾಗಿ ಬಳಿಯಿರುವೆನು||

 

ವನದ ಸುಮದಂತೆ

ಮನದ ದೇವಿಯದು

ವಿನಯ ತೋರುತ್ತಲಿ ಮೋದದಲಿಯೆ|

ತನುವ ಬಳಿಸಾರಿ

ಮನವು ಬಂದಂತೆ

ದಿನದ ಸುಖಕಿಂದು ಬರುವಳಲ್ಲ||

 

ಋಣವ ಬಂಧವದು

ಗುಣವ ನೋಡಿದೆನು

ಚಣದ ಮಾತಿನಲಿ ಜೊತೆಯಾದೆವು|

ಪಣದ ಹೃದಯದಲಿ

ಹಣದ ಬಯಕೆಯದು

ಕಣವ ತೊಡಿಸುವೆನು ತನುವಿಗಿಂದು||

(ಪಂಚೇಷು ಷಟ್ಪದಿ)

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್