ಪ್ರೇಮಪಾಶ

ಪ್ರೇಮಪಾಶ

ಪುಸ್ತಕದ ಲೇಖಕ/ಕವಿಯ ಹೆಸರು
ಚೈತ್ರಾ ಕುಂದಾಪುರ
ಪ್ರಕಾಶಕರು
ಮುದ್ರಣ : ತ್ವರಿತ ಮುದ್ರಣ, ಗದಗ
ಪುಸ್ತಕದ ಬೆಲೆ
ರೂ.೧೦೦.೦೦ ಮುದ್ರಣ: ೨೦೨೦

ಚೈತ್ರಾ ಕುಂದಾಪುರ ಮೂಲತಃ ಕುಂದಾಪುರದವರಾಗಿದ್ದು ರಾಷ್ಟ್ರೀಯತೆ ಹಿಂದೂಪರ ಚಿಂತನೆಯಲ್ಲಿ ಮಂಚೂಣಿಯಲ್ಲಿರುವವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಹಲವಾರು ಸಾಮಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಪತ್ರಿಕೆಯಲ್ಲಿ, ಸುದ್ದಿ ವಾಹಿನಿಗಳಲ್ಲಿ, ಕಾಲೇಜು ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಅತ್ಯಂತ ಚಿಕ್ಕ ಪ್ರಾಯದಲ್ಲಿ ಯುವ ಮಾಧ್ಯಮ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಚೈತ್ರಾ ಕುಂದಾಪುರ ಇವರು ಲವ್ ಜಿಹಾದ್ ಕುರಿತು ಬರೆದ ಪುಸ್ತಕವೇ ಪ್ರೇಮಪಾಶ. ಪ್ರೀತಿಯೆಂಬ ಜಿಹಾದಿನ ಪರದೆಯ ಮೂಲಕ ಹಿಂದೂ ಧರ್ಮದ ಹುಡುಗಿಯರನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡುವ ರೀತಿಯನ್ನು ಸವಿವರವಾಗಿ ಈ ಪುಸ್ತಕದಲ್ಲಿ ವಿವರಿಸುತ್ತಾ ಹೋಗುತ್ತಾರೆ. ೧೮ ಅಧ್ಯಾಯಗಳಿರುವ ಈ ಪುಸ್ತದಲ್ಲಿ ಲವ್ ಜಿಹಾದ್ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಬಂದ ವರದಿಗಳ ಉಲ್ಲೇಖಗಳಿವೆ. ಹಲವಾರು ಭಾವಚಿತ್ರಗಳಿವೆ. 

ಪೋಸ್ಟ್ ಕಾರ್ಡ್ ಮೀಡಿಯಾದ ಸಂಸ್ಥಾಪಕರಾದ ಮಹೇಶ್ ವಿಕ್ರಮ್ ಹೆಗ್ಡೆ ಇವರು ತಮ್ಮ ಬೆನ್ನುಡಿಯಲ್ಲಿ ಬರೆಯುತ್ತಾರೆ ‘ ಲವ್ ಜಿಹಾದ್ ಮಾಧ್ಯಮಗಳಲ್ಲಿ, ರಾಜಕೀಯ ವಲಯಗಳಲ್ಲಿ ಬಹುಚರ್ಚಿತ ವಿಷಯ. ಬಹುಷಃ ಹಿಂದೂ ಧರ್ಮ ಎದುರಿಸುತ್ತಿರುವ ಅತೀ ಕ್ಲಿಷ್ಟಕರ ಸಮಸ್ಯೆ ಇದುವೇ ಎಂದರೆ ತಪ್ಪಾಗಲಾರದು. ಈ ವಿಷಯವಾಗಿ, ತಮ್ಮ ಅಧ್ಯಯನ ಶೀಲ ವರದಿಯನ್ನು ಚೈತ್ರ ಪುಸ್ತಕವಾಗಿಸಿದ್ದಾರೆ. ಅದೆಷ್ಟೋ ನಿದರ್ಶನಗಳೊಂದಿಗೆ, ಘಟನೆಯೊಂದರ ಹಿಂದಿನ ಸತ್ಯಾಸತ್ಯತೆಯನ್ನು ವಿಶ್ಲೇಷಿಸಿ, ಪ್ರೀತಿಯ ಮುಸುಕಿನಲ್ಲಿ, ಭಯೋತ್ಪಾದನೆ, ಮತಾಂತರವನ್ನು ಪ್ರೋತ್ಸಾಹಿಸುವವರ ಮುಖವಾಡ ಕಳಚಿದ್ದಾರೆ. ಸಮಸ್ಯೆಗಳಿಗೆ ಕಣ್ಣು ಪಟ್ಟಿ ಕಟ್ಟಿಕೊಂಡು ಕುರುಡಾದರೆ, ಮುಂದೊಂದು ದಿನ ಅದೇ ಸಮಸ್ಯೆ ನಮ್ಮನ್ನು ಬಾಯ್ದೆರೆದು ನುಂಗುವಾಗ ಪ್ರತಿಭಟಿಸುವ ಶಕ್ತಿಯೂ ಇಲ್ಲದೇ ಹೋಗಬಹುದು ಎಂಬ ಎಚ್ಚರಿಕೆಯೂ ಇದೆ'

ಸುಮಾರು ೧೨೪ ಪುಟಗಳಿರುವ ಈ ಪುಸ್ತಕವನ್ನು ಚೈತ್ರಾ ಕುಂದಾಪುರ ಅವರು ತಮ್ಮ ಅಪ್ಪ-ಅಮ್ಮನಿಗೆ ಹಾಗೂ ತಾಯಿಯಂತಹ ಸಂಘಟನೆಗೆ ಅರ್ಪಿಸಿದ್ದಾರೆ.