ಕೈಯಲ್ಲಿ ಕೋಟಿ ಇದ್ದರು ಹಿರಿಯರು ಕಂಡೊಡನೆ ಕಾಲಿಗೆ ಬೀಳೋದು ಸಂಸ್ಕಾರ..
ರಾತ್ರಿಯೆಲ್ಲಾ ಗಂಡನ ಜೊತೆ ಇದ್ದರು ಹಗಲೊತ್ತು ಗಂಡ ಕಂಡೊಡನೆ ತಲೆಮೇಲೆ ಸೆರಗಾಕಿಕೊಳ್ಳೋದು ಸಂಸ್ಕಾರ..!
ಎಷ್ಟೇ ಆಧುನಿಕತೆ ಬಂದರು ಹಣೆಯ ಮೇಲಿನ ಬೊಟ್ಟು…
ಸಮುದ್ರ ಒಂದು ಅದ್ಭುತ ಕೌತುಕಗಳ ಆಗರ. ನೀವು ಸಾಗರದೊಳಗೆ ಹೊಕ್ಕರೆ ನಿಮಗೆ ಸಿಗುವ ಜಲಚರಗಳು ಒಂದೋ ಎರಡೋ, ಅವು ಕೋಟ್ಯಾಂತರ. ನಾವು ಸಮುದ್ರದ ಜಲಚರಗಳ ಬಗ್ಗೆ ತಿಳಿದುಕೊಂಡಿರುವುದು ಸ್ವಲ್ಪವೇ ಸ್ವಲ್ಪ. ಏಕೆಂದರೆ ನಮಗೆ ಸಮುದ್ರದ ಆಳಕ್ಕೆ ಹೋಗಲು…
ಝೆನ್ ಗುರು ಮಕುಗೆನ್ ಮುಖದಲ್ಲಿ ನಗು ಮೂಡಿದ್ದೇ ಇಲ್ಲ. ಅವರು ನಕ್ಕದ್ದು ಒಂದೇ ಒಂದು ಸಲ. ಅದು ಯಾವಾಗ ಎಂಬುದೇ ಚಿಂತನೆಯ ಸಂಗತಿ.
ತನ್ನ ಬದುಕಿನ ಅಂತಿಮ ದಿನ, ದೇಹತ್ಯಾಗ ಮಾಡುವ ಸಮಯ ಹತ್ತಿರವಾದಂತೆ, ಗುರು ಮಕುಗೆನ್ ತಮ್ಮ ಶಿಷ್ಯರನ್ನು ಕರೆದು…
ಬನ್ನಿ ಹಾಡೋಣ ಇಂದು
ಈ ಬೆಳಕಿನುತ್ಸವಕೆ ಬಂದು|
ಮಗು ಮುಗ್ಧ ಬೆರಗಿನಲಿ
ಬಾಳ ನಿತ್ಯೋತ್ಸವಕೆ
ಎದೆಯ ತೆರೆಯೋಣ ಇಂದು
ನಾವಾಗಿ ಬೆಳಕೊಳೊಂದು!
ಈ ತೆರೆದೆದೆಯ ಬೆಳಕಿನಲ್ಲಿ
ತೋರೀತು ಇರವೆ ಅರಳಿ
ನಮ್ಮಂತರಾಳದೊಳ
ಬಾಳ ಬೆಳಕಿನ ಹಾಡೆ
…
ಮನುಷ್ಯನ ನಾಗರಿಕತೆ ಬೆಳೆಯುತ್ತಿದ್ದಂತೆ ಪರಿಸರ ಅವನ ಮೇಲೆ ಮುನಿಸಿಕೊಳ್ಳುವುದು ಹೆಚ್ಚುತ್ತಿದೆ. ಪ್ರಾಕೃತಿಕ ಅವಘಡಗಳ ಮೂಲಕ ಮನುಷ್ಯನ ಮೇಲೆ ಗುದ್ದು ನೀಡುವ ಪ್ರಕೃತಿಯ ನಡೆ ಯಾಕೆ ಈ ರೀತಿ ರೌದ್ರವಾಗುತ್ತದೆ ಎಂಬ ಬಗ್ಗೆ ಕೆಲವೊಂದು ಊಹೆಗಳು…
ಸತ್ಯೊದ ತುಳುನಾಡ್
ತೂಲೇ ತೂಲೇ ಈ ಪುಣ್ಯೊದ ನಾಡ್ ತೂಲೆಗೇ
ತೂಲೇ ತೂಲೇ ಉಂದು ಸತ್ಯೊದ ತುಳುನಾಡ್ ಗೆ
ಪರಶುರಾಮನಾ ಸೃಷ್ಟಿ
ಬೂರುಂಡ್ ಕಣ್ಣ್ ದ ದಿಟ್ಟಿ
ಪತ್ತ್ ಲೆ ಕೈ ಗಟ್ಟಿ
ತೂಲೇ ತೂಲೇ ಈ ಪುಣ್ಯೊದ ನಾಡ್ ತೂಲೆಗೇ
ತೂಲೇ ತೂಲೇ ಉಂದು ಸತ್ಯೊದ…
ಗಝಲ್ ೧
ದತ್ತಪದ:ಪಯಣ
ಪಯಣವೆಲ್ಲಿಗೋ ಯಾರಿಗೂ ತಿಳಿಯದು ಏಕಾಂಗಿ ನಾನು
ಬದುಕೆಲ್ಲಿಗೋ ನನಸಿಗೂ ಅರಿಯದು ಏಕಾಂಗಿ ನಾನು
ಕನಸಿನ ಬುತ್ತಿಯೆನ್ನುವ ದೋಣಿಯಲಿ ಸಾಗುತಿರುವೆನೆಂದೂ
ದ್ವೇಷದ ಅಲೆಗಳ ಹೊಡೆತವದು ಏಕಾಂಗಿ ನಾನು
ತಂಪಿನ ಆತ್ಮದಿ ಬೆಂಕಿಯ…
ನಾವು ನಮ್ಮ ಸುತ್ತಮುತ್ತಲಿನಲ್ಲಿ ಹಲವಾರು ಪ್ರಾಣಿ ಪಕ್ಷಿಗಳನ್ನು ಕಾಣುತ್ತೇವೆ. ಕೆಲವು ಸಲ ಅಪರೂಪದ ಪಕ್ಷಿಗಳೂ ಕಾಣ ಸಿಗುವುದುಂಟು. ಕೆಲವು ಪಕ್ಷಿಗಳು ತನ್ನ ಧ್ವನಿಯಿಂದಲೂ, ಕೆಲವು ಮೈ ಬಣ್ಣದಿಂದಲೂ ಗಮನ ಸೆಳೆದರೆ ಈ ಭೀಮರಾಜನೆಂಬ ಹಕ್ಕಿಯು ತನ್ನ…
ಹಲವಾರು ವರುಷಗಳ ಹಿಂದೆ ಹಿಮಪುರವೆಂಬ ಹಳ್ಳಿಯಲ್ಲಿ ಗೋಪಣ್ಣ ಎಂಬ ಸೌದೆ ಕಡಿಯುವವನಿದ್ದ. ಪರ್ವತದ ತಪ್ಪಲಿನಲ್ಲಿದ್ದ ಆ ಹಳ್ಳಿಯ ಅಂಚಿನಲ್ಲಿ ದಟ್ಟ ಕಾಡು. ಗೋಪು ದಿನದಿನವೂ ಕಾಡಿಗೆ ಹೋಗಿ ಕಟ್ಟಿಗೆ ತಂದು ಮಾರುತ್ತಿದ್ದ.
ಅದೊಂದು ದಿನ ತಾನು…
ಜನಗಳ ಮನ ಪತ್ರಕರ್ತ ವಿಶ್ವೇಶ್ವರ ಭಟ್ ಇವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿರುವ ಸಮಯದಲ್ಲಿ ಬರೆದ ಅಂಕಣಗಳ ಸಂಗ್ರಹ. ಈಗಾಗಲೇ ೨ ಭಾಗ ಮಾರುಕಟ್ಟೆಗೆ ಬಂದಿದ್ದು, ಇದು ಆ ಸರಣಿಯ ಮೂರನೇ ಭಾಗ. ಅಂಕಣಕಾರನ ಒಂದು ಚೌಕಟ್ಟಿನಿಂದ ಹೊರಗೆ…
೩.ಯೋಗ - ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆ
ಸಂಸ್ಕೃತದ “ಯುಜ್" ಎಂಬ ಮೂಲಶಬ್ದದಿಂದ “ಯೋಗ" ಪದ ಮೂಡಿ ಬಂದಿದೆ. ಇದರ ಅರ್ಥ “ಜೊತೆಗೂಡುವುದು”. ಇದು ವ್ಯಕ್ತಿಯ ಶರೀರ ಮತ್ತು ಆತ್ಮದ ಸಂಯೋಗವನ್ನು ಸಂಕೇತಿಸುತ್ತದೆ.
ಯೋಗವೆಂದರೆ ಕೇವಲ ಯೋಗಾಸನಗಳ…
ಮಳೆಗಾಲ ಪ್ರಾರಂಭವಾದೊಡನೆಯೇ ನಮಗೆ ಕಪ್ಪೆಗಳ ದನಿ ಕೇಳಲು ಪ್ರಾರಂಭವಾಗುತ್ತದೆ. ಮಳೆ ಬಂತೆಂದರೆ ಕಪ್ಪೆಗಳಿಗೆ ಹರ್ಷವೋ ಹರ್ಷ. ನಮ್ಮ ದೇಶದ ಬಹುತೇಕ ಕಪ್ಪೆಗಳು ಅಪಾಯಕಾರಿಯಲ್ಲ, ಬದಲಿಗೆ ಹಲವಾರು ಕೀಟಗಳನ್ನು ಭಕ್ಷಿಸಿ ನಮಗೆ ಉಪಕಾರವನ್ನು ಮಾಡುತ್ತವೆ…