ಜನಾರ್ದನ ದುರ್ಗಾ ಅವರ ಹನಿಗಳು (ಭಾಗ ೨)

ಜನಾರ್ದನ ದುರ್ಗಾ ಅವರ ಹನಿಗಳು (ಭಾಗ ೨)

ಕವನ

*ಹ(ಒ)ಬ್ಬ* 

 *ವರ್ಷಂಪ್ರತಿ* 

 *ಗಣೇಶೋತ್ಸವವೆಂದರೆ* 

 *ಗೌಜಿ ಗದ್ದಲದ ಹಬ್ಬ..!!* 

 *ಈ ಬಾರಿ ಮಾತ್ರ* 

 *ಕರೋನಾಸುರನಿಂದಾಗಿ* 

 *ಕುಳಿತಿದ್ದಾನೆ ಗಣೇಶ* 

 *ಒಬ್ಬ...!!!* 

*************************

*ವ್ಯತ್ಯಾಸ..!*

ಪ್ರಪಂಚದ ತುಂಬೆಲ್ಲ

ಹೆಚ್ಚುತ್ತಲೆ ಇದೆ

ಸಾಮಾಜಿಕ ಅಂತರ..!!

ಚೈನಾದ ವುಹಾನ್ ನಲ್ಲಿ

ಮಾತ್ರ ಆರಂಭವಾಗಿದೆಯಂತೆ

ಹೊಸ ಮನ್ವಂತರ...!!!

*************************

*ಮೋಡದ ಮರೆಯಲಿ* 

ಮೋಡದ ಮರೆಯಲಿ

ನಿಂದು ನಗುತಿದ್ದನಂದು

ಚಂದ್ರಮ...!

ನಾನು ನೀನು

ಜೊತೆ ಸೇರಿದ ಕಾರಣ

ಆಡಿಸುತಿರುವೆ ಇಂದು

ಕಂದನ...!!

***********************

*ಕಳಚಿದ ಕೈ ಗವಸು.!* 

ದೇಶದಾದ್ಯಂತ

ಹೆಚ್ಚತೊಡಗಿದಂತೆ

ಬಳಸುವುದು

ಮುಖ ಗವುಸು...!

ಇತ್ತ ಧೋನಿ

ಕಳಚಿಯೆ 

ಬಿಡಬೇಕಾಯಿತು

ಧರಿಸಿದ್ದ 

ಕೈ ಗವುಸು...!!!

✍️ *ಜನಾರ್ದನ ದುರ್ಗ*

 

ಚಿತ್ರ್