ಶಂಕರಾನಂದ ಹೆಬ್ಬಾಳರ ಎರಡು ಕವನಗಳು

ಶಂಕರಾನಂದ ಹೆಬ್ಬಾಳರ ಎರಡು ಕವನಗಳು

ಕವನ

*ನಾಟ್ಯ ಸುಂದರಿ (ವನಮಂಜರಿ ವೃತ್ತ)*

ಫಾಲದಿ ನಲ್ಲೆಯು ಹಚ್ಚಿದ ಕುಂಕುಮ ಬಿಂದುವು ಕಂಗಳ ನೋಟವದೂ|

ಹಾಲಿನ ಕೆನ್ನೆಯ ಸಿಂಹದ ಟೊಂಕದಿ ಕಿಂಕಿಣಿ ನೃತ್ಯದ ಜಾದುವದೂ|

ಕಾಲಿನ ಗೆಜ್ಜೆಯು ಘಲ್ಲೆನಲಲ್ಲಿಯೆ ಕೃಷ್ಣನ ಹಾಗೆಯೆ ನಾಕುಣಿದೇ|

ನೀಲಿಯ ಕಂಗಳ ಕಾಡಿಗೆ ಕಪ್ಪದು ಚಂದದಿ:ನಾಚಿದೆ ಲಕ್ಷ್ಯದಲೀ||

 

ಅಂದದ ಗೀತವು ಗಾನವ ಪಾಡಿದೆ ದೇಗುಲ ವೀಣೆಯ ತಂತಿಯಲೈ|

ಬಂಧವ ಕೂಡಿಸಿ ಕಂಕಣ ಲಗ್ನದಿ ಮಂಟಪದಲ್ಲಿಯೆ ತಾನಿರುವೈ|

ಮಂದಿರ ರಾಧೆಯ ಭೈತಲೆ ಚಿನ್ನದ ಪುಷ್ಪವು ವಾಲಿದೆ ಕೃಷ್ಣನ ನೋಡುತಲೀ|

ನಂದಕವಾಗಿದೆ ಹೃನ್ಮನವಿಂದೆಯೆ ಚೆಲ್ವಿನ ಜನ್ನನ ಕಾಣುತಲೀ||

 

ತೋಷದಿ ಮಾನಿನಿ ದುಂದುಭಿ ನಾದವ ಕೇಳುತ

ನಿಂತಳು ದೇಗುಲದೊಳ್|

ಕೇಶವ ಕಟ್ಟುತ ಚಿಂತೆಯಮಾಡದೆ ಕಾಂತನ ತಾವಡಿ ಮೈಮನವೂ|

ದೇಶವ ಸುತ್ತಲು ಶಂಖದ ವಾದ್ಯವನೂದುತ

ಬಂದನು ಮನ್ಮಥನೂ|

ಹಾಸದ ವಿಷ್ಠದಿ ವಿಷ್ಟಪ ಪಾಲಿಪ ಕೃಷ್ಣನು ಮೂಜಗ ವಂದಿತನೊಳ್||

 

****

*ಬೆಡಗಿನ ನಾರಿ(ವನಜದಳ ವೃತ್ತ)*

 

ನಯನ ಹೊಳೆದು ಚೆಲುವ ತೆರೆದು ಮನದಿಬಾರೈ|

ಶಯನ ರಮಣಿ ನಿಲುವ ತಳೆದು ತನುವ ನೋಡೈ|

ಭಯವ ಬಿಡುತ ಹೃದಯ ಗೆಲುವೆ ತರುಣಿಯೇನೀ|

ಜಯದ ಕವಿತೆ ಬರೆವೆ ಪುಟದ ಗೆರೆಗಳಲ್ಲಿಂ||

 

ಕನಸ ಕೊಲುತ ಮನವ ಬನದ ಕುಕಿಲಮಾಡೈ|

ಜನಕಸುತಳು ಕುವರಿ ಸಹನ ಲಕುಮಿಯೇ ನೀ|

ವಿನಯ ನಯನ ಸರಳ ಚೆಲುವ ವದನದಲ್ಲಿಂ|

ಮನದಿ ಕನಸ ಹಡಗ ಕೊಳುತ ಬರುವೆ ನೀನೈ||

 

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್