ಜನಗಳ ಮನ (ಭಾಗ ೩)

ಜನಗಳ ಮನ (ಭಾಗ ೩)

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು-೫೬೦೦೦೯
ಪುಸ್ತಕದ ಬೆಲೆ
ರೂ. ೮೫.೦೦, ಮೊದಲ ಮುದ್ರಣ: ನವೆಂಬರ್ ೨೦೦೮

ಜನಗಳ ಮನ ಪತ್ರಕರ್ತ ವಿಶ್ವೇಶ್ವರ ಭಟ್ ಇವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿರುವ ಸಮಯದಲ್ಲಿ ಬರೆದ ಅಂಕಣಗಳ ಸಂಗ್ರಹ. ಈಗಾಗಲೇ ೨ ಭಾಗ ಮಾರುಕಟ್ಟೆಗೆ ಬಂದಿದ್ದು, ಇದು ಆ ಸರಣಿಯ ಮೂರನೇ ಭಾಗ. ಅಂಕಣಕಾರನ ಒಂದು ಚೌಕಟ್ಟಿನಿಂದ ಹೊರಗೆ ಬಂದು ಯಾವ ವಿಷಯದ ಮೇಲಾದರೂ ಬರೆಯುವ ಸ್ವಾತಂತ್ರ್ಯದಿಂದ ಬರೆದ ಲೇಖನಗಳು ಇವು. ಇದರಲ್ಲಿ ಇಷ್ಟೇ ಬರೆಯ ಬೇಕೆಂಬ ಒತ್ತಾಯವಿಲ್ಲ, ಎಷ್ಟೇ ಬರೆದರೂ ಆಗಬಹುದು. ಹೀಗಾಗಿ ಈ ಪುಸ್ತಕದ ಬರಹಗಳಿಗೆ ಒಂದು ನಿರ್ದಿಷ್ಟ ಚೌಕಟ್ಟಿಲ್ಲ, ವೈವಿಧ್ಯಗಳಿಗೆ ಚೌಕಾಶಿಯೂ ಇಲ್ಲ. ದೀರ್ಘ ಪ್ರಯಾಣಕ್ಕೆ ಹೊರಟ ಅಲೆಮಾರಿ ಮಾಡಿಕೊಳ್ಳುವ ನೋಟ್ಸ್ ಗಳಂತೆ ಕೇಳಿದ್ದು, ಕಂಡದ್ದು ಎಲ್ಲಾ ಗೀಚಿದ್ದು ಇದರಲ್ಲಿ ಉಲ್ಲೇಖಿಸಿದ್ದಾರೆ. 

ಪುಸ್ತಕದಲ್ಲಿ ಹಲವಾರು ರಾಜಕೀಯ ವ್ಯಕ್ತಿಗಳ ಬಗ್ಗೆ, ಅವರ ಜೀವನದ ಘಟನೆಗಳ ಬಗ್ಗೆ ಉಲ್ಲೇಖವಿದೆ. ಝೆನ್ ಕಥೆಯೂ ಇದೆ, ದಾಂಪತ್ಯ ಯಶಸ್ಸಿನ ಬಗ್ಗೆಯೂ ಬರೆದಿದ್ದಾರೆ. ಎಲ್ಲಾ ವಿಷಯಗಳು ಇರುವುದರಿಂದ ಎಲ್ಲರೂ ಓದಬಹುದು. ಒಂದಾದರೂ ನಿಮ್ಮ ಆಯ್ಕೆಯ ಲೇಖನ ಓದಲು ಸಿಗುವುದೆಂಬ ಭರವಸೆ ಇದೆ. ಪುಟ್ಟ ಪುಟ್ಟ ಲೇಖನಗಳಾಗಿರುವುದರಿಂದ ಓದಲು ತುಂಬಾ ಸಮಯವೇನೂ ಬೇಕಾಗುವುದಿಲ್ಲ.