ಸ್ವರ್ಣಗೌರಿಗೆ ನಮನ

ಸ್ವರ್ಣಗೌರಿಗೆ ನಮನ

ಕವನ

ಶಿವನ ಪ್ರಿಯಳು ಅರ್ಧನಾರಿಶ್ವರಿಯು

ದವನ ಸೇಚನ ಜಗದೀಶ್ವರಿ

ಭವದಿ ನೆಲೆಸುತ ಜನರ ಪೋಷಿಸಿ

ಪವನದಂತೆಯೆ ಪರಮೇಶ್ವರಿ...

 

ವರವ ನೀಡುತ ಜಗವ ಪೊರೆಯುತ

ಕರೆಯ ನೀಡುವ ಸಕಲೇಶ್ವರಿ

ಸ್ಫುರಿಸಿ ಹರಿಸುವ ಭುವನ ಪಾಲಿತೆ

ಮೆರೆಸಿ ನಲಿಯುವ ಕಲಾಸಾಗರಿ....

 

ಶರಣು ತಾಯಿಯೆ ನಿನಗೆ ನಮಿಪೆವು

ಬರವ ತೊಲಗಿಸೊ ಮಹೇಶ್ವರಿ

ಕರುಣೆ ತೋರುತ ಲೋಗರನುಳಿಸುವ

ಹರನ ಸತಿಯೆ ನೀ ಈಶ್ವರಿ....

 

ತಮವ ಅಳಿಸುತ ಬೆಳಕ ನೀಡುವ

ಸಮತೆ ಬಿತ್ತುವ ರಾಗೇಶ್ವರಿ

ಘಮದಿ ಈಶನ ಒಡತಿಯೆ ಪಾರ್ವತಿ

ಗಮ್ಯತೆ ತೋರುವ ಗೌರೀಶ್ವರಿ..

 

ಪಾರ್ವತಿ ತನಯನೆ ಗಣಪನು ನೋಡಿರಿ

ಸರ್ವರು ಪೂಜಿಪ ಜ್ಞಾನೇಶ್ವರಿ

ಪರ್ವವು ನಡೆಯುವ ಸುದಿನದ ಘಳಿಗೆಯು

ಗರ್ವವ ಅಡಗಿಸೊ ಗಿರಿಜೇಶ್ವರಿ...

 

ಅಭಿಜ್ಞಾ ಪಿ.ಎಮ್ ಗೌಡ 

 

ಚಿತ್ರ್