ಅರುಣನ ಆಗಮನ

ಅರುಣನ ಆಗಮನ

ಕವನ

(ತಲ ಷಟ್ಪದಿ)

ಅರುಣಬಂದು

ವರವ ಕೊಡಲು

ಕರವ ಮುಗಿದೆ ಚಣದಲಿ|

ಶರಣನೆಂದು

ಶಿರವಬಾಗಿ

ಚರಣಕೆರಗಿ ನೋಡಲಿ||

 

ಕೆಂಪಿನಲ್ಲಿ

ತಂಪುಯಿಲದೆ

ಕಂಪು ಬೀರಿ ಹೊರಟನು|

ಪಂಪನಂತೆ

ಸೊಂಪಿನಲ್ಲಿ

ಚಂಪಮಾಲೆ ಬರೆದೆನು||

 

ಹಕ್ಕಿಯಿಂದು

ಪಕ್ಕದಲ್ಲಿ

ಕೊಕ್ಕು ಚಾಚಿ ನಿಲ್ಲಲು|

ಮಿಕ್ಕ ಕಾಳು

ಹೆಕ್ಕಿತಂದು

ಕುಕ್ಕಿ ತಾನು ತಿನ್ನಲು||

 

ನಮನ ಸಲಿಸಿ

ಗಮನವಿರಿಸಿ

ಶಮನ ಮಾಡಿ ನೋವನು|

ವಿಮಲ ಮನದಿ

ಕಮಲ ನೋಡಿ

ರಮಣನಾದ ದೇವನು||

 

ಉಸಿರ ಕೊಡಲು

ಹಸಿರ ಸಿರಿಯು

ಹೆಸರ ಹೇಳಿ ವನದಲಿ|

ಕಸುವಿನಲ್ಲಿ

ಹೊಸದು ಕನಸು

ದೆಸೆಯ ನೋಡಿ ಮನದಲಿ||

-ಶಂಕರಾನಂದ ಹೆಬ್ಬಾಳ 

 

ಚಿತ್ರ್