ಒಂದಿಷ್ಟು ಹನಿಗಳು

ಒಂದಿಷ್ಟು ಹನಿಗಳು

ಕವನ

*ರುಬಾಯಿ*

ಶಿಕ್ಷಕನ ಹೊಣೆ ನನಗೆ ಎಚ್ಚರದಿ ಕಲಿಸುವೆನು

ಕಲಿವ ಮನಸುಗಳಿಗೆ ಸರಿ ದಾರಿಯ ತಿಳಿಸುವೆನು

ಕಲಿಕೆಯದು ಕುಣಿಕೆಯಾದರೆ ಬದುಕುವುದು ಹೇಗೆ

ಏರಿಳಿತ ಇರಲೆನಗೆ ತಾಳ್ಮೆಯನು ಬಳಸುವೆನು

*******

*ಬೆಲೆ*

ಭೂಮಿ ಬೆಳೆಯದು ಬೆಲೆ ಏರುವುದು

ಚಿನ್ನ ಬೆಳೆಯದು ಬೆಲೆ ಏರುವುದು

ನೀನು ಬೆಳೆದರೂ ಬೆಲೆ ಇರದಣ್ಣ

ದೇಹ ಮಣ್ಣೊಳಗೆ ಹೋಗಿ ಸೇರುವುದು

*******       

*ಆರಾಧನೆ*

ಯಾವ ದೇವರೂ ಮೆಚ್ಚರು ನಿನ್ನ ಆರಾಧನೆ

ಕೇಳಿದರೆ ಅಮ್ಮನ ಕರುಳ ರೋಧನೆ

ಹೆತ್ತವಳ ಮೊದಲು ಮರೆಯದೇ ಆರಾಧಿಸು

ದೇವರು ಮಾಡುವನು ನಿನ್ನ ಗುಣದ ಶೋಧನೆ

*******

 *ಅವಮಾನ*

ಅಭಿಮಾನ ಪಡುವವರನು ಮಾಡದಿರು ಅವಮಾನ

ಬಾಳ ಬಾನಲಿ ಬದಲಾಗುವುದು ಹವಾಮಾನ

ಕಷ್ಟವೋ ಸುಖವೋ ಅವರ ಜೊತೆಯಾಗಿರು

ಎದೆ ಎದೆಯ ನಡುವೆ ನಡೆಯುವುದು ಸನ್ಮಾನ

*******

ಅವಲೋಕನ*

ಸುಮ್ಮನಿರು ನೀ ಮಾಡದಿರು ಪರರ ನಿಂದೆ 

ಬಿಡದು ಅವರ ದುಃಖವು ಬರದೆ ನಿನ್ನ ಹಿಂದೆ

ನಿನ್ನ ಮನೆ ಹುಳುಕು ನಗುವುದನು ನೋಡು

ತೊರೆದುಬಿಡು ಸಣ್ಣತನ ಬೆಳೆಸದಿರು ಕೋಡು

- *ಯಶುಪ್ರಿಯ ಪಕ್ಷಿಕೆರೆ*, ಮಂಗಳೂರು

******

ನಿರ್ವಹಣೆ

 ಪರಿಸರ  ಕಾಳಜಿ ಬರಲಿ

 ಮನುಷ್ಯಗೆ  ನೆಮ್ಮದಿ ತರಲಿ

ಬದುಕಲಿ ಕಲಿಯೋಣ ಶಿಸ್ತು

 ನಿರ್ವಹಣೆ ಚೆನ್ನಾಗಿ ಇರಲಿ

******

ಪ್ರಚಲಿತ

ಪ್ರಚಲಿತದ ಬಾಳಿನೊಳು ಹಗಲಿರುಳು ಒಂದೆ

 ದುಡಿಯುವಾ ಕೈಗಳು ಎರಡಿದ್ದರೂ ಒಂದೆ

ಕಾಲ ನಿಲ್ಲದು ಇನ್ನು ದಂಡಿಸುವುದೊಂದೆ

 ಮಹಾಮಾರಿ ವಿಷವಾಯ್ತು  ಎಲ್ಲಿದ್ದರೊಂದೆ

  - ರತ್ನಾ ಭಟ್ ತಲಂಜೇರಿ

*****

ಟಂಕ

ನನ್ನೊಲವಿನ

ಸವಿಗನಸಿನೊಳು

ನಿನ್ನೊಲವನು

ಸೇರಿಸುತಿರುವಂತೆ

ನನಸಾಯಿತು ಬಾಳು !

-ಹಾ ಮ ಸತೀಶ

ಚಿತ್ರಕೃಪೆ: ಅಂತರ್ಜಾಲದಿಂದ

ಚಿತ್ರ್