ವಿಘ್ನ ವಿನಾಶಕ ಗಣೇಶನ ಭಕ್ತಿಗೇತೆಗಳು

ವಿಘ್ನ ವಿನಾಶಕ ಗಣೇಶನ ಭಕ್ತಿಗೇತೆಗಳು

ಕವನ

ಗಜಾನನ

ಮೂಷಿಕ ವಾಹನ ಪಾರ್ವತಿ ತನಯನೆ

ಕರಗಳ ಜೋಡಿಸಿ ವಂದಿಪೆನು

ಹರ್ಷದ ಹೊಳೆಯನು ಧರೆಯಲಿ ಹರಿಸುತ

ಭಕುತರ ರಕ್ಷಿಸು ಗಜಾನನ||

 

ಚೌತಿಯ ಚಂದಿರ ನೋಡುತ ನಕ್ಕನು

ಶಾಪವ ನೀಡಿದೆ ಗಜಾನನ

ಕುಬೇರ ದೇವನ ಗರ್ವವ ಚಣದಲಿ

ಅಳಿಸಿದ ಬಾಲನೆ ಗಜಾನನ||

 

ಶಿವಸುತ ಗಣೇಶ ಮೋದಕ ಪ್ರಿಯನಿವ

ಗರಿಕೆಗೆ ಒಲಿಯುವ ಗಜಾನನ

ನವನವ ಚೇತನ ತನುವಲಿ ತುಂಬುತ

ಸಂಕಟ ಕಳೆಯುವ ಗಜಾನನ||

 

ಕಾರ್ಯಾರಂಭದಿ ಪೂಜಿತ ಗಜಮುಖ

ವಿಘ್ನವ ನೀಗಿಸು ಗಜಾನನ

ಸೂರ್ಯನ ಕಾಂತಿಯು ನಾಚಿಸೊ ಸುಂದರ

ಮೂರುತಿ ನಲ್ಮೆಯ ಗಜಾನನ||

 

ಗಣಗಳ ನಾಥನೆ ಗಣಾಧಿಪತಿಯೇ

ಕರ್ಪೂರ ದಾರತಿ ಮಾಡುವೆನು

ಸದ್ಗುಣ ಸನ್ಮತಿ ಕರುಣಿಸಿ ಪಾಲಿಸು

ಪುಷ್ಪವ ಪಾದಕೆ ಅರ್ಪಿಸುವೆ||

 

*ಶ್ರೀ ಈರಪ್ಪ ಬಿಜಲಿ* 

*****************************

ವಿಘ್ನವಿನಾಶಕ ಗಣೇಶ

ವಿನಾಯಕಾಯ ವಿದ್ಮಯೆ ನಮೋ

ವಿಸ್ಮಯ ಲೋಕದ ವಿರಚಿತನೆ

ವಿಸ್ತೃತ ವರದಿಯ ಬೆಳಕಿನ ಭರವಸೆ

ವಿದ್ಯಾದಾಯಕ ಪೂರಕನೆ .!

 

ವಿದ್ರುಮ ರೂಪದ ಪೂರಕ ಗಣಪತಿ

ವಿತರ್ಕ ಶತ್ರುಪ ವಿಘಾತಿಯೇ

ವಿಜೃಂಭಿಸೋ ಲಂಬೋದರ ಗಜಾನನ

ವಿಘ್ನವಿನಾಶಕ ವಿಘ್ನೇಶ್ವರನೆ .!

 

ವಿಘಟಿಸಿ ಮೆರೆಯುವ ವಿಶಾರದನೆ

ವಿಜಯಸಾಧಕ ಹೇರಂಬನೆ

ವಿಚ್ಛುರಿತ ಮನಸಿಗೆ ಖುಷಿಯ ನೀಡೋ

ವಿಚಾರವಂತ ವಿಧೇಯಕನೆ.!

 

ವಿಕೃತಿ ಮನಸಿಗೆ ಆಕೃತಿ ಒದಗಿಸೋ

ವಿದ್ಯಾ ಸಕರ್ಮಿದಾಯಕನೆ

ವಿಗ್ರಹ ರೂಪದ ವಿನಯ ಆಮೋದಃನೆ

ವಿಕ್ಲಬ ನೀಗಿಸೋ ಮೂರ್ತಿಯೆ !

 

ವಿಕಸನಗೊಳ್ಳುವ ವಿಕರಣ ಗಣಪತಿ

ವಿನಂತಿ ಮಾಡುವೆ ಗಣಬನ್ಧನೆ

ವಿನತಿದೊಳು ಜಪಿಸುತ  ನಮಿಪೆವು

ವಿನಮ್ರತೆ ಮೆರೆವ ವಿಧಿಗಣನೆ.!

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್