ಪುಸ್ತಕನಿಧಿ: - 7. 'ಲಾವಣ್ಯವತಿ' ಎಂಬ ಹೆಸರಿನ ಐತಿಹಾಸಿಕ ಕಾದಂಬರಿ

ಪುಸ್ತಕನಿಧಿ: - 7. 'ಲಾವಣ್ಯವತಿ' ಎಂಬ ಹೆಸರಿನ ಐತಿಹಾಸಿಕ ಕಾದಂಬರಿ

ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಿಂದ ಅನೇಕ  (ಸಾವಿರಕ್ಕೂ ಹೆಚ್ಚು) ಪುಸ್ತಕಗಳನ್ನು ಇಳಿಸಿಕೊಂಡಿದ್ದೆನು.   ಈಗ ಆ ತಾಣವು ಕೆಲಸ ಮಾಡುತ್ತಿಲ್ಲ. ಅಲ್ಲಿನ  ಪುಸ್ತಕಗಳು ಈಗ  archive.org  ತಾಣದಲ್ಲಿ ಸಿಗಬಹುದು.  ಅವುಗಳನ್ನು ಓದುವ ಕಾಲವು ನನ್ನ ಪಾಲಿಗೆ ಕೂಡಿ ಬಂದ ಹಾಗಿದೆ. :)

ಈ ದಿನ  'ಲಾವಣ್ಯವತಿ' ಎಂಬ ಹೆಸರಿನ ಐತಿಹಾಸಿಕ ಕಾದಂಬರಿ ಓದಿದೆನು . ಪೆನುಗೊಂಡೆ,  ನಿಡುಗಲ್ಲು  ಸ್ಥಳಗಳಿಗೆ ಸಂಬಂಧಪಟ್ಟಿದುದು ಇದು . 
ಎಂ. ಕೆ. ನಾಗಪ್ಪ ಎಂಬುವವರು ಬರೆದ  ಈ ಕಾದಂಬರಿಯು   https://archive.org/details/in.ernet.dli.2015.364694 ಈ ಕೊಂಡಿಯಲ್ಲಿ ನಿಮಗೆ ಸಿಗುತ್ತದೆ.  ಇಂಥ ಹಳೆಯ ಕನ್ನಡ ಪುಸ್ತಕ ಹುಡುಕಲು pustaka.sanchaya.net ತಾಣವನ್ನು ಬಳಸಬಹುದು. 

ಕತೆಯು ಚೆನ್ನಾಗಿದ್ದು ಓದಿಸಿಕೊಂಡು ಹೋಗುವುದು . ಅಂದಿನ ಶೈಲಿಯ ಬರವಣಿಗೆಯ ಕೆಲವು ಸಾಲುಗಳನ್ನು , ಪದಪುಂಜಗಳನ್ನು  ಇಲ್ಲಿ ಕೆಳಗೆ ಸಂಗ್ರಹಿಸಿದ್ದೇನೆ . ನನಗೆ ಮೆಚ್ಚಿಗೆ ಆದವು, ನಿಮಗೂ  ಮೆಚ್ಚಿಗೆ ಆಗಬಹುದು.

 

ನಾಥನ ಕಣ್ದಾವರೆಗಳನ್ನು  ಅತಿ ಕೋಮಲವಾದ ತನ್ನ ಕರಕಮಲಗಳಿಂದ ಮುಚ್ಚಿದಳು. 

ಆನಂದಬಾಷ್ಪಗಳನ್ನೂ ದುಃಖಾಶ್ರುಗಳನ್ನೂ ಕಣ್ಣೆಂಬ ಪಾತ್ರೆಗಳಲ್ಲಿ ಧರಿಸಿ ಪತಿಯ ಚರಣಕಮಲಗಳನ್ನು  ತೊಳೆಯಲಾರಂಭಿಸಿದಳು. 

ತನ್ನ ಮುಖಚಂದ್ರನ ಕಿರಣಗಳಿಂದ ಪತಿಯ ನೇತ್ರಕಮಲಗಳನ್ನು ಅರಳಿಸಿದಳು. 

ಆಕೆಯ ಪ್ರಾಣಪ್ರಿಯನೂ ಪ್ರಾಣಪದಕವೂ ಆದ ಅವನು...

ಚಿಂತಾಸಾಗರಮಗ್ನನಾದ ಮನೋವಲ್ಲಭನ ಮುಖವೈಖರಿಯನ್ನು ನೋಡಿ....

ಮನೋನೇತ್ರದಿಂದ ಕಂಡುಕೊಂಡಳು.

ಕಲಿಸದೆ ಬರ್ಪುದು ಕುಶಲಂ ಇಳೆಯೊಳ್ ಪೆಣ್ ಜಾತಿಗೆ

ಪಾಪದ ಆಲೋಚನೆಗೆ ಅವಕಾಶವಿತ್ತದ್ದಕ್ಕೆ ಕ್ಷಮಿಸೆಂದು ದೇವರಲ್ಲಿ ಪ್ರಾರ್ಥನೆ ಮಾಡಿರಿ.

ಪಾರವಿಲ್ಲದ ಪಾಪವಾರಿಧಿಯಲ್ಲಿ ಪತಿಯು ಬೀಳುವಾಗ ಕೈಹಿಡಿದು ಕಾಪಾಡುವುದು ಪತ್ನಿಯ ಕರ್ತವ್ಯವು. 

ಶಿಫಲವಾದ ಕೋಟೆ, ಜೀರ್ಣವಾದ ದೇವಾಲಯ , ಚೂರ್ಣವಾದ ಅರಮನೆ, ನಿರ್ಮಾನುಷವಾದ ರಾಜಬೀದಿಗಳು.

ದಾರನ್ನು = ಯಾರನ್ನು

ಗರ್ಭಜಾತೆ - ಮಗಳು
- - ಪ್ರಾಣಕಾಂತೆ ಸಹಧರ್ಮಚಾರಿಣಿ
- - ನೀಚ ಕುಲೋದ್ಭವ

ಅಡಿದಾವರೆ
ದಿವ್ಯ ಪಾದ ಸರೋಜಂಗಳು
ಮುಖಕಮಲ

ಆತ್ಮವಲ್ಲಭ

ನೇತ್ರ ಕಮಲ ,  ಪಾದ ಕಮಲ, ಮುಖಕಮಲ   :)

ಸರಸಿಜಾನನೆ

ಮನ್ಮನೋಹಾರಿಣಿ

ಸ್ನೇಹವನ್ನೂ ಬಾಂಧವ್ಯವನ್ನೂ ಕದನವನ್ನೂ ಸರೀಕರಲ್ಲಿ ಮಾಡಬೇಕು.

ಧರ್ಮವೂ ಸತ್ಕೀರ್ತಿಯೂ ಶಾಶ್ವತವೇ ಹೊರತು ರಾಜ್ಯ ಗೀಜ್ಯಗಳಲ್ಲ.

ಭೋಗಪ್ರದಾಯಿನಿ

ರೂಪದಲ್ಲಿ ರತಿ , ಬುದ್ಧಿಯಲ್ಲಿ ಸರಸ್ವತಿ , ಪೌರುಷದಲ್ಲಿ ವೀರಾಧಿವೀರರನ್ನು ತಲೆಬಾಗಿಸುವಂಥವಳು.

ಅವಳು ರೂಪದ ರಾಶಿ, ಮೋಹದ ಗಣಿ, ವಿದ್ಯೆಯ ಆಕಾರ, ಪ್ರೇಮದ ಪುಂಜ. 

ರಾಜ್ಯಹೀನನಾದರೂ ಮನೋರಾಜ್ಯದ ಮೇಲಿನ ಅಧಿಕಾರವನ್ನು ಕಳೆದುಕೊಳ್ಳಕೂಡದು . 

ಸದ್ಗುಣಗಳೆಂಬ ರತ್ನಗಳ ರಾಶಿ ಇರುವಾಗ ಧನಹೀನ ಎಂಬ ಚಿಂತೆಯೇಕೆ ?

ಅವಳು ಇವನ ಭಾಗ್ಯದ ಸಾರ.

ಇದು ದಾವ ಸ್ಥಳ?

 

 

 

Rating
Average: 4 (1 vote)