May 2021

 • May 31, 2021
  ಬರಹ: Ashwin Rao K P
  ಬಹಳ ವರ್ಷಗಳ ಹಿಂದೆ ಆರೋಗ್ಯ ಸಂಬಂಧಿ ಜಾಹೀರಾತೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರ ಹೆಸರು ‘Second hand smoke kills’. ಆ ಚಿತ್ರದಲ್ಲಿ ಇದ್ದದ್ದು ತಲೆಯ ಮೇಲೆ ಕೈಯಿಟ್ಟು ಚಿಂತಾಕ್ರಾಂತವಾಗಿ ನಿಂತಿದ್ದ ಓರ್ವ ಕುದುರೆ ಸವಾರ ಹಾಗೂ…
 • May 31, 2021
  ಬರಹ: Shreerama Diwana
  ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು, ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ. ಪ್ರೀತಿಯಲ್ಲಿ ದ್ವೇಷವನ್ನು, ದ್ವೇಷದಲ್ಲಿ ಪ್ರೀತಿಯನ್ನು ಹುಡುಕುವ…
 • May 31, 2021
  ಬರಹ: ಬರಹಗಾರರ ಬಳಗ
  ಯಾವ ತೆರದಲಿ ಬೇಡುತಿರುವೆನೊ ಶಂಕರ ನಾರಾಯಣ ರಕ್ಷಿಸು ಕರುಣೆಯಿಲ್ಲದೆ ಕ್ರಿಮಿಯ ಬಿಟ್ಟಿಹ ದೂರ್ತರನು ನೀ ಸಂಹರಿಸು   ಮೌನವಾಗಿಹ ದೇಹದೊಳಗಡೆ ವಿಷವ ಬಿಟ್ಟಿಹ ಮಾರಿಯ ಹೊಡೆದು ಓಡಿಸಿ ಸೌಖ್ಯ ನೀಡುತ ನಮ್ಮನೆಲ್ಲರ ಪೊರೆಯುತ   ಉಸಿರು ಚೆಲ್ಲಿಹ ನಮ್ಮ…
 • May 31, 2021
  ಬರಹ: ಬರಹಗಾರರ ಬಳಗ
  ಎಲ್ಲಿ *ಹೇಡಿತನ, ಅಂಜಿಕೆ ಮತ್ತು ದ್ವೇಷ*  ಇದೆಯೋ ಅಲ್ಲಿ ಭಗವಂತ ಸಹ ನಿಲ್ಲಲಾರನಂತೆ, ಹೀಗೆ ಹೇಳಿದವರು ಶ್ರೀ ರಾಮಕೃಷ್ಣ ಪರಮಹಂಸರು. ಹೌದಲ್ವಾ ಸ್ನೇಹಿತರೇ. ಹೇಡಿತನ ಇದ್ದವನಿಗೆ ನಾವೆಷ್ಟು ಹೇಳಿದರೂ ಪ್ರಯೋಜನವಿಲ್ಲ. ಅಂಜಿಕೆ ಸಹ ಅಷ್ಟೆ. ಇವೆರಡೂ…
 • May 30, 2021
  ಬರಹ: ಬರಹಗಾರರ ಬಳಗ
  ಬಾನಲಿ ಸಾಗಿದೆ ಹಕ್ಕಿಯ ಗುಂಪು ಕಲರವದಲ್ಲಿಹ ಹಾಡಿನ  ಇಂಪು ಬಾನಾಡಿಗಳ ಸೊಬಗನು ನೋಡು ಒಗ್ಗಟ್ಟಿನ ಬಲವದು ಸಾರಿದ ಜಾಡು.   ತೇಲುತ ಸಾಗುವ ವೈಖರಿಯಲ್ಲಿ ಚಿತ್ತವು ಬಿತ್ತಿತು ಬಗೆಬಗೆಯಲ್ಲಿ ಚಿತ್ತಾರದ ಚಿತ್ರವು ಕಣ್ಮಣಿಯೊಳಗೆ ಬಿಂಬವು ತುಂಬಿತು…
 • May 30, 2021
  ಬರಹ: Shreerama Diwana
  ಬುದ್ಧಿವಂತಿಕೆ, ಅರಿವು, ತಿಳಿವಳಿಕೆ, ಜ್ಞಾನ ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ ಸಂಪನ್ಮೂಲಗಳು ಎಂಬ ಬಗ್ಗೆ ಸದಾ ಎಚ್ಚರವಿರಲಿ. ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾಡಿಕೊಂಡಿದ್ದೇನೆ, ನನ್ನ…
 • May 29, 2021
  ಬರಹ: addoor
  ಒಂದಾನೊಂದು ಕಾಲದಲ್ಲಿ ಸ್ಪೇಯ್ನ್ ದೇಶದ ಗ್ರಾನಡಾ ಎಂಬಲ್ಲಿ ಎರಡು ದೊಡ್ಡ ಅರಮನೆಗಳಿದ್ದವು. ನಗರದಿಂದ ದೂರದ ಎರಡು ಗುಡ್ಡಗಳಲ್ಲಿದ್ದ ಆ ಅರಮನೆಗಳಲ್ಲಿ ಒಂದನ್ನು ಕೆಂಪು ಕಲ್ಲುಗಳಿಂದ ಇನ್ನೊಂದನ್ನು ಹಳದಿ ಕಲ್ಲುಗಳಿಂದ ಕಟ್ಟಲಾಗಿತ್ತು. ಹಳದಿ…
 • May 29, 2021
  ಬರಹ: Ashwin Rao K P
  ‘ನೀವೇ ರೇಟು ಬಗೆಹರಿಸಿಕೊಳ್ಳಿ!’ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಗೆಳೆಯ ಸದಾನಂದ ನಿವೃತ್ತಿ ಹೊಂದಿದ. ಬಳಿಕ ಸ್ವಂತ ಮನೆ ಕೂಡಾ ಕಟ್ಟಿಸಿಕೊಂಡ. ಅವನ ಮನೆಯ ಮುಂದೆ ಕಂಪೌಂಡಿನೊಳಗೆ ಆರು ಅಡಿ ಬಯಲು ಜಾಗವಿತ್ತು. ವಿವಿಧ ಬಣ್ಣಗಳ ಗುಲಾಬಿ,…
 • May 29, 2021
  ಬರಹ: Ashwin Rao K P
  ಸ್ಮಶಾನದ ಹುಲಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ…
 • May 29, 2021
  ಬರಹ: venkatesh
  ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಬಯಿನಗರ ಒಂದು ಪ್ರಮುಖಪಾತ್ರ ವಹಿಸಿತ್ತು. ಗಾಂಧೀಜಿಯವರು ಈ ನಗರದ ಒಬ್ಬ ಹೆಮ್ಮೆಯ ನಾಗರೀಕರಾಗಿದ್ದರು. ಬೊಂಬಾಯಿಗೆ ಬಂದಾಗಲೆಲ್ಲ ಅವರು 'ಮಣಿಭವನ'ದಲ್ಲೇ ತಂಗುತ್ತಿದ್ದರು.  ಸ್ವಾತಂತ್ರ್ಯ…
 • May 29, 2021
  ಬರಹ: Shreerama Diwana
  ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ. ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ. ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ. ಆದರೆ ಬುದ್ದನನ್ನು ಹುಡುಕುವುದೆಲ್ಲಿ, ಒಳಗೋ…
 • May 29, 2021
  ಬರಹ: ಬರಹಗಾರರ ಬಳಗ
  ‘ಮಾತು ಆಡಿದರೆ ಹೋಯಿತು ; ಮುತ್ತು ಒಡೆದರೆ ಹೋಯಿತು' ಎಂಬುವುದು ಹಳೆಯ ಗಾದೆ ಮಾತು. ಯಾವುದೇ ಸಮಯಕ್ಕೂ ಪ್ರಸ್ತುತವೆನಿಸುವ ಈ ಮಾತು ನಮಗೆ ನಮ್ಮ ಮಾತುಗಳು ಹೇಗೆ ಇರಬೇಕು ಎನ್ನುವುದನ್ನು ತಿಳಿಸಿಕೊಡುತ್ತದೆ. ಒಬ್ಬರ ಬಗ್ಗೆ ಮಾತನಾಡುವಾಗ ತುಂಬಾ…
 • May 29, 2021
  ಬರಹ: ಬರಹಗಾರರ ಬಳಗ
   *ಧನ್ಯತೆ* ಎಲೆ ಮೇಲಿನ ಮಂಜು ಕರಗಿ ಹರಿಯಿತು ನೀರು! ಹೀರಿಕೊಂಡಿತು ಬೇರು! * *ಅವಳು ಮತ್ತು ಬಡತನ* ಬಡಿಸಿಟ್ಟಳು ನಾಲ್ಕಾರು ಬಟ್ಟಲ ತಂಬಾ! ಮೇಲೆ ಹರಿದ ಛಾವಣಿ
 • May 28, 2021
  ಬರಹ: Ashwin Rao K P
  ನಮಗೆ ಭಾಧಿಸುವ ಬಹಳಷ್ಟು ಕಾಯಿಲೆಗಳಿಗೆ ನಾವು ತಿನ್ನುವ ಆಹಾರವೇ ಕಾರಣವಾಗಿರುತ್ತದೆ. ರಾತ್ರಿ ಊಟ ಮಾಡಿ ಮಲಗಿದವನು ಬೆಳಿಗ್ಗೆ ಏಳುವಾಗ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾನೆ. ತಂಪು ಪಾನೀಯ ಕುಡಿದ ಕೂಡಲೇ ತಲೆ ನೋವು ಬರುತ್ತದೆ, ಕೆಲವರಿಗೆ ಮಾಂಸಹಾರ…
 • May 28, 2021
  ಬರಹ: Shreerama Diwana
  8 ವರ್ಷದ ಮಗು ಅಪ್ಪನನ್ನು ಕೇಳುತ್ತದೆ, " ಅಪ್ಪಾ ನೀನ್ಯಾರು "  ನಾನು ನಿಮ್ಮಪ್ಪ ಕಣೋ, " ಅದಲ್ಲಪ್ಪ ನೀನ್ಯಾರು " - ನಾನು ನನ್ನ ಅಪ್ಪ ಅಮ್ಮನ ಮಗ, " ಅದೂ ಅಲ್ಲಪ್ಪ ನೀನ್ಯಾರು"  ನಾನು ನಿಮ್ಮಮ್ಮನ ಗಂಡ, "ಅಲ್ಲಪ್ಪ ನೀನ್ಯಾರು "  ನಾನು ಒಬ್ಬ…
 • May 28, 2021
  ಬರಹ: Kavitha Mahesh
  ಪದ್ದೀ...ಪದ್ದೀ.....ಲೇ ಪದ್ದಿ" "ಏನ್ರೀ ಯಾಕೆ ಹಾಗೆ ಕೂಗ್ತಾ ಇದೀರಾ"? ಅದೇ ಕಣೇ" ನಮ್ಮ  ಮಗಳು ಸಿಂಚನಾಗೆ ಒಂದು ಒಳ್ಳೆಯ ಸಂಬಂಧ ಬಂದಿದೆ" "ಹೌದೇ ? ಯಾರದು ? ಯಾವ ಊರಿನವನು ? "ಎಂದು ಪ್ರಶ್ನೆಯ ಸುರಿಮಳೆ ಸುರಿಸಿದರು ಪದ್ಮಾ ಹುಡುಗ…
 • May 28, 2021
  ಬರಹ: ಬರಹಗಾರರ ಬಳಗ
  ಏಕಂ ವಿಷರಸೋ ಹಂತಿ ಶಸ್ತ್ರೇಣೈಕಶ್ಚ ಬಾಧ್ಯತೇ/ ಸರಾಷ್ಟ್ರಂ ಸಪ್ರಜಾಂ ಹಂತಿ ರಾಜಾನಂ ಮಂತ್ರವಿಸ್ರವಃ// ವಿಷ ಎನ್ನುವುದು ಕುಡಿದವನನ್ನು ಮಾತ್ರ ಕೊಲ್ಲಬಹುದು. ಶಸ್ತ್ರದಿಂದ ಒಮ್ಮೆಗೆ ಒಬ್ಬ ಸಾಯಬಹುದು. ಆದರೆ ತಲೆಬುಡವಿಲ್ಲದ ಆಡಳಿತ, ತಪ್ಪು…
 • May 28, 2021
  ಬರಹ: ಬರಹಗಾರರ ಬಳಗ
  ಸೊಪ್ಪು ತರಕಾರಿಗಳು ಬಹಳ ಆರೋಗ್ಯದಾಯಕ. ನಾವು ನಮ್ಮ ದೈನಂದಿನ ಆಹಾರ ಬಳಕೆಯಲ್ಲಿ ಹಲವಾರು ಸೊಪ್ಪುಗಳನ್ನು ಬಳಸುತ್ತೇವೆ. ಹರಿವೆ, ಮೆಂತ್ಯೆ, ಕೊತ್ತಂಬರಿ, ಬಸಳೆ, ಪಾಲಕ್, ಪುದೀನಾ, ಗಣಿಕೆ, ಗೋಣಿ, ಕರಿಬೇವು, ಸಬ್ಬಸಿ... ಹೀಗೆ ಹಲವಾರು ಸೊಪ್ಪಿನ…
 • May 28, 2021
  ಬರಹ: ಬರಹಗಾರರ ಬಳಗ
  ಪುಟ್ಟನು ಹೋದನು ಅಜ್ಜನ ಮನೆಗೆ  ಸಂತೆಗೆ ನಡೆದನು ಮಾಮನ ಜೊತೆಗೆ ಗಿರಿಗಿರಿ ತಿರುಗುವ ಗಿರಗಟೆ ಕಣ್ಣಿಗೆ ಬೀಳಲು ಆಸೆಯು ಮಗುವಿನ ಮನಸ್ಸಿಗೆ   ಅಂಗಡಿ ಮುಂದೆ ತುತ್ತೂರಿ ನೋಡಲು ಸೆಳೆಯಿತು ಆ ಕಡೆ ದೃಷ್ಟಿ ನಾಟಲು ಮಾಮನ ಕೈಯನು ಹಿಡಿದು ಎಳೆಯಲು…
 • May 28, 2021
  ಬರಹ: venkatesh
  ಈ ಮಾತುಗಳ ಹಿನ್ನೆಲೆಯಲ್ಲಿ ಒಂದು ಘಟನೆ, ನಮ್ಮ ವಠಾರದಲ್ಲಿ ನಡೀತು ನೋಡಿ.  ಬಾಲ್ಯದ  ಅದೊಂದು ಘಟನೆಯ ಅನುಭವ ನನ್ನ  ನೆನಪಿನಲ್ಲಿ ಅತ್ಯಂತ ಗಟ್ಟಿಯಾಗಿ ಉಳಿದಿರುವ  ಸಂಗತಿಗಳಲ್ಲೊಂದು.  ಅದ್ಯಾಕೊ ನನಗೆ ಆಕೆಯ ಛಲ ಅಷ್ಟು ಮುಖ್ಯವೇ, ಅಥವಾ ನಾವು…