ಸೊಪ್ಪಿನ ಬಳಕೆಯ ಮಹತ್ವ

ಸೊಪ್ಪಿನ ಬಳಕೆಯ ಮಹತ್ವ

ಸೊಪ್ಪು ತರಕಾರಿಗಳು ಬಹಳ ಆರೋಗ್ಯದಾಯಕ. ನಾವು ನಮ್ಮ ದೈನಂದಿನ ಆಹಾರ ಬಳಕೆಯಲ್ಲಿ ಹಲವಾರು ಸೊಪ್ಪುಗಳನ್ನು ಬಳಸುತ್ತೇವೆ. ಹರಿವೆ, ಮೆಂತ್ಯೆ, ಕೊತ್ತಂಬರಿ, ಬಸಳೆ, ಪಾಲಕ್, ಪುದೀನಾ, ಗಣಿಕೆ, ಗೋಣಿ, ಕರಿಬೇವು, ಸಬ್ಬಸಿ... ಹೀಗೆ ಹಲವಾರು ಸೊಪ್ಪಿನ ಬಳಕೆಯನ್ನು ನಾವು ಮಾಡುತ್ತಾ ಬಂದಿದ್ದೇವೆ. ಯಾವೆಲ್ಲಾ ಸೊಪ್ಪುಗಳು ಯಾವುದಕ್ಕೆ ಉತ್ತಮ ಎಂಬ ಪುಟ್ಟ ವಿವರ ಇಲ್ಲಿದೆ. ಗಮನಿಸಿ

ಸೊಪ್ಪುಗಳ ಹೆಸರು ಮತ್ತು ಅವುಗಳ ಪ್ರಯೋಜನ:

ಮುದ್ದೆ ಬಸ್ಸಾರಿಗೆ ಹರಿವೇ ಚಿಲಕರಿವೆ ಸೊಪ್ಪು..

ಬಾಯಿ ಹುಣ್ಣಿಗೆ ಬಸಳೇ ಸೊಪ್ಪು.

ಮಧುಮೇಹಿಗಳಿಗೊಳಿತು ಮೆಂತ್ಯ ಸೊಪ್ಪು... 

ತಂಪಾಗಲು ಬಳಸಿ ದಂಟಿನ‌‌ ಸೊಪ್ಪು... 

ಅಪರೂಪಕೆ ಬಳಸಿ ಗೋಣಿ‌ ಸೊಪ್ಪು.. 

ಕೆಮ್ಮು ಶೀತ ನೆಗಡಿಗೆ ಗಣಿಕೆ ಸೊಪ್ಪು...

ಉಪ್ಪು ಸಾರಿಗೆ ಬಳಸಿ ಕೀರೆ ಸೊಪ್ಪು...

ಬೆರಕೆ ಮಾಡಿ ಬಳಸಲು ಸೀಗೆ ಸೊಪ್ಪು...

ಕಣ್ಣಿಗೆ ಒಳ್ಳೇದು ಹೊನಗೊನೆ ಸೊಪ್ಪ...

ಕರುಳಿಗೆ ಒಳ್ಳೇದು ಕಸವೇ ಸೊಪ್ಪು...

ಕಾಮಾಲೆಗೆ ಮದ್ದು ಹಸಿರು ಸೊಪ್ಪು...

ಎಲ್ಲಾ ಜ್ವರಕ್ಕೆ ಮದ್ದು ಪರಂಗಿ ಸೊಪ್ಪು...

ಚೆಂದ ಕಾಣಲು ತಿನ್ನಿ ಚಕೋತ ಸೊಪ್ಪು...

ಘಮ ಘಮ ಅಡುಗೆಗೆ ಪುದೀನ ಸೊಪ್ಪು...

ಮೊಸೊಪ್ಪಿಗೆ ಚೆನ್ನ ಕುಂಬಳ ಸೊಪ್ಪು...

ಸರ್ವ ರೋಗಗಳಿಗೂ ಜಾಗಡಿ ಸೊಪ್ಪು... 

ವಡೆ ಪಕೋಡಕ್ಕೆ ಸಬ್ಬಕ್ಕಿ ಸೊಪ್ಪು...

ಒಗ್ಗರಣೆಗೆ ಬೇಕು ಕರಿಬೇವಿನ‌ ಸೊಪ್ಪು... 

ನೆನಪಿನ‌ ಶಕ್ತಿ ಹೆಚ್ಚಲು ಸರಸ್ವತಿ ಸೊಪ್ಪು... 

ಪಚನವಾಗಲು ಸಬ್ಬಸಿಗೆ ಸೊಪ್ಪು... 

ನಮ್ಮಜ್ಜಿ‌ ಇಷ್ಟದ ಕನ್ನೇ ಸೊಪ್ಪು... 

ಬೆನ್ನೆಲುಬು ಕಾಯಲು ಅಣ್ಣೆ ಸೊಪ್ಪು...

ಎಲ್ಲರಿಗೂ ಇಷ್ಟದ ಪಾಲಕ್ ಸೊಪ್ಪು... 

ನೆನಪಿಗೆ ತಿನ್ನಿ ಒಂದೆಲಗದ ಸೊಪ್ಪು... 

ಉತ್ತರ ಕರ್ನಾಟಕ ಜನ ಚಟ್ನಿಗೆ ಹಾಕ್ತಾರೆ ಪುಂಡಿ ಸೊಪ್ಪು... 

ಮಲಬದ್ಧತೆಗೆ ಒಳಿತಂತೆ ಆಕ್ರಿಕಿ ಸೊಪ್ಪು

ಬಹುಸೊಪ್ಪುಗಳನಾಕಿ ಮಾಡುವ ಹುಣ್ಷೆಪ್ಪು...

ಪಲ್ಯಕೆ ಇರಲಿ ಈರುಳ್ಳಿ ಸೊಪ್ಪು,...

ಕಬ್ಬಿಣದಂಶ ಹೆಚ್ವಿರುವ ನುಗ್ಗೇ ಸೊಪ್ಪು...

"ಸಿ" ಜೀವಸತ್ವ ಹೆಚ್ಚಿರುವ ಹುಳಿ ಸೊಪ್ಪು... 

ನಾರಿನಂಶಕೆ ಬಳಸಿ ಬಗೆಬಗೆಯ ಸೊಪ್ಪು... 

ಗೊಜ್ಜಿಗೆ ಬೇಕೇ ಬೇಕು ಗೋಂಗುರು ಸೊಪ್ಪು... 

ಹುಡುಕಿ ತಂದು ತಿನ್ನಿ ಅಡುಕು ಪುಡುಕನ ಸೊಪ್ಪು... 

ಸರ್ವ ರೋಗಗಳಿಗೂ ಅಮೃತಬಳ್ಳಿ ಸೊಪ್ಪು...

ಸಕ್ಕರೆ ಖಾಯಿಲೆಗೆ ಮಧುನಾಶಿನಿ ಸೊಪ್ಪು... 

ಬಹೂಪಯೋಗಿ ಚಕ್ರಮುನಿ ಸೊಪ್ಪು,... 

ಆಗೊಮ್ಮೆ ಹೀಗೊಮ್ಮೆ ಬಳಸಿ ಮೂಲಂಗಿ ಸೊಪ್ಪು,... 

ಘಮಘಮ್ಮೆನ್ನುವ ಕಸ್ತೂರಿ ಸೊಪ್ಪು,... 

ದೇವಪೂಜೆಗೆ ತುಳಸಿ ಮರುಗದ ಸೊಪ್ಪು... 

ಮೊಳೆರೋಗಕ್ಕೆ ತಿನ್ನಿ ಮುಟ್ರುಮುನಿ ಸೊಪ್ಪು..

ಕಸೂರಿ‌ ಮೇಥಿ ಘಮ್ಮೆನ್ನುವ ಸೊಪ್ಪು... 

ಮರೆತೇ ಬಿಟ್ಟಿದ್ದೆ ನೋಡಿ ಕೊತ್ತಂಬರಿ ಸೊಪ್ಪು... 

ಕೆಮ್ಮಿಗೆ ಕಂಡಿರಾ ದೊಡ್ಡಪತ್ರೆ ಸೊಪ್ಪು!

ಕಾಲುನೋವಿಗೆ ಬಳಸಿ ನರಳೆ ಕಡ್ಡಿ ಸೊಪ್ಪು.

ರಕ್ತವೃಧ್ಧಿಗೆ ಅರಸಿ ಪಲ್ಯ ಮಾಡಿ ತಿನ್ನಿ ಅಗಸೆ ಸೊಪ್ಪು!!

ಜಾಂಡೀಸ್ ಗೆ ರಸ ತೆಗೆದು ಕುಡಿಯಬೇಕು ನೆಲ ನೆಲ್ಲಿ ಸೊಪ್ಪು.

ಈಗಲೇ ಬೆಳೆಸಿ,ಬಳಸಿ,ಉಳಿಸಿ ಈ‌ ಸೊಪ್ಪುಗಳನ್ನು... ರೋಗಗಳಿಂದ ಮುಕ್ತರಾಗಿ.

ಸಂಗ್ರಹ  : ಪರಿಸರ ಪರಿವಾರ