ಕೆಲವೊಂದು ಹನಿಗಳು…

ಕೆಲವೊಂದು ಹನಿಗಳು…

ಕವನ

 *ಧನ್ಯತೆ*

ಎಲೆ ಮೇಲಿನ ಮಂಜು

ಕರಗಿ ಹರಿಯಿತು

ನೀರು!

ಹೀರಿಕೊಂಡಿತು

ಬೇರು!

*

*ಅವಳು ಮತ್ತು ಬಡತನ*

ಬಡಿಸಿಟ್ಟಳು

ನಾಲ್ಕಾರು

ಬಟ್ಟಲ ತಂಬಾ!

ಮೇಲೆ ಹರಿದ ಛಾವಣಿ

ಇವಳ ಬಟ್ಟಲ ತುಂಬ???

ಚಂದ್ರಬಿಂಬ!

*

 *ಅಭಿ-ರುಚಿ*

ಅದೆಷ್ಟು ಬಾರಿ

ಸುಳಿದಾಡಿತ್ತೋ ಜೇನ್ನೊಣ

ಕಬ್ಬಿನ ಗಿಡದ ಸುತ್ತ. ..!

ಹಿಂಡಿ ಹಿಪ್ಪೆಯಾದ

ಮೇಲಷ್ಟೇ

ಅದಕ್ಕೆ ಪರಿಚಿತ !

*

*ಪರಸ್ಪರ* 

ಮುಳ್ಳಿಗೂ ಇದೆ

ಹೂವಿನ ಮೇಲೆ

ಪ್ರೀತಿ!

ಅದಕ್ಕೇ ಹೂವಿಗಿಲ್ಲ

ಚುಚ್ಚಿಕೊಳ್ಳೋ

ಭೀತಿ!

*

*ಒಲವಿಗಾಗಿ*

ಭಾಸ್ಕರ ತನ್ನ

ಅರಳಿಸಲೆಂದೇ

ನೈದಿಲೆ

ದಿನಾ ಅರಳಿ

ಮತ್ತೆ ಮೊಗ್ಗಾಗುವುದೇ?

*

*ಕಾಂಕ್ರೀಟು ಕಾಡಿನಲಿ* 

ಹಿಂದೆಲ್ಲಾ ಹಂಚಿನ

ಮನೆ

ಮಾಡಿನಲ್ವಿ

ವಾಸಿಸುತಿತ್ತು ಅಳಿಲು!

ಈಗ ಎಲ್ಲಿ ಉಳಿದುಕೊಳ್ಳಲಿ

ಎಂಬುದೇ

ಅದರ ಅಳಲು!

*

*ಮಾತು* 

ಬಿಲ್ಲು ಎದೆಗೇರಿಸಿ

ಬಿಟ್ಟು ಬಾಣ

ನಂಜೇರಬಾರದು ಹೂತು! 

ಎದೆಯಿಂದ ಎದೆಗೆ

ಕಟ್ಟಬೇಕು ಸ್ನೇಹ ಸೇತು!

*

*ಸಹವಾಸ* 

ಮುಳ್ಳಿನೆಡೆಯಲ್ಲಿ

ಹುಟ್ಟಿದರೂ ಕ್ಯಾಕ್ಟಸ್ ಹೂವು!

ನಯವಾಗೇ ಇದೆ

ಇಲ್ಲದೆ ಯಾವ ನೋವು!

*

-*ಪದ್ಮ* 

ಚಿತ್ರ: ಇಂಟರ್ನೆಟ್ ತಾಣ

 

ಚಿತ್ರ್