ಬಾನಾಡಿಯ ಮೇಳ

ಬಾನಾಡಿಯ ಮೇಳ

ಕವನ

ಬಾನಲಿ ಸಾಗಿದೆ ಹಕ್ಕಿಯ ಗುಂಪು

ಕಲರವದಲ್ಲಿಹ ಹಾಡಿನ  ಇಂಪು

ಬಾನಾಡಿಗಳ ಸೊಬಗನು ನೋಡು

ಒಗ್ಗಟ್ಟಿನ ಬಲವದು ಸಾರಿದ ಜಾಡು.

 

ತೇಲುತ ಸಾಗುವ ವೈಖರಿಯಲ್ಲಿ

ಚಿತ್ತವು ಬಿತ್ತಿತು ಬಗೆಬಗೆಯಲ್ಲಿ

ಚಿತ್ತಾರದ ಚಿತ್ರವು ಕಣ್ಮಣಿಯೊಳಗೆ

ಬಿಂಬವು ತುಂಬಿತು ಮನದೊಳಗೆ.

 

ಹಾರುವ ಹಕ್ಕಿಯ ಹಾವ- ಭಾವ

ಮಾರುತನವನ ಉಸಿರಲಿ ಜೀವ

ನೀತಿಯ ಪಾಠವ ಜಗಕೆ ಸಾರುತ

ಒಲುಮೆ- ಬಲುಮೆಯಲ್ಲದು ಸಾಗುತ

 

ಹಕ್ಕಿಯ ಹಾಡಿದು, ಜೀವದ ಪಾಡಿದು

ಸೃಷ್ಟಿ ದೇವನಾಟದ ಮಹಿಮೆಯಿದು

ಹಾಕಲಾದಿತೇ ತಾಳೆಯು ಈ ಜಗದಲ್ಲಿ

ಮೆರೆದಿದೆ ಭಿನ್ನತೆ ನವೀನತೆಯಲ್ಲಿ !

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

 

ಚಿತ್ರ್