ಬಾಳಿಗೊಂದು ಚಿಂತನೆ - 45

ಬಾಳಿಗೊಂದು ಚಿಂತನೆ - 45

ಏಕಂ ವಿಷರಸೋ ಹಂತಿ ಶಸ್ತ್ರೇಣೈಕಶ್ಚ ಬಾಧ್ಯತೇ/

ಸರಾಷ್ಟ್ರಂ ಸಪ್ರಜಾಂ ಹಂತಿ ರಾಜಾನಂ ಮಂತ್ರವಿಸ್ರವಃ//

ವಿಷ ಎನ್ನುವುದು ಕುಡಿದವನನ್ನು ಮಾತ್ರ ಕೊಲ್ಲಬಹುದು. ಶಸ್ತ್ರದಿಂದ ಒಮ್ಮೆಗೆ ಒಬ್ಬ ಸಾಯಬಹುದು. ಆದರೆ ತಲೆಬುಡವಿಲ್ಲದ ಆಡಳಿತ, ತಪ್ಪು ನಿರ್ಧಾರಗಳು, ಉಪಯೋಗವಿಲ್ಲದ ಸಲಹೆಗಳು, ಒಂದು ರಾಜ್ಯ ಅಥವಾ ದೇಶದಲ್ಲಿದ್ದರೆ, ಇಡೀ ಸಮೂಹವನ್ನೇ ತೆಗೆಯಬಹುದು. ಇಲ್ಲಿ ರಾಷ್ಟ್ರ, ರಾಜ್ಯ, ಪ್ರಜೆಗಳು ಜೊತೆಗೆ ಎಲ್ಲರ  ಮಾತು ಕೇಳಿದ ನಾಯಕ ಸಹ ಹೋದ ಅಂತಲೇ ಲೆಕ್ಕ.

ಅದನ್ನೇ ಹೇಳುವುದು ಮನೆಯ ಯಜಮಾನ ಸರಿ ಇದ್ದರೆ ಮಾತ್ರ ಅದೊಂದು ಮನೆ ಎಂಬುದಾಗಿ.ಎಲ್ಲರೂ ಯಜಮಾನ ಆಗಲು ಹೊರಟರೆ ಅದು ಮನೆ ಹೋಗಿ ಮಸಣ ಆಗಬಹುದು.ಮುಖ್ಯಸ್ಥಾನದಲ್ಲಿ ಕುಳಿತವನ ಹೊಣೆ ಸಾಮಾನ್ಯವಾದುದಲ್ಲ. ಎಲ್ಲರೂ ಹೇಳಿದ್ದನ್ನು ಕೇಳಬೇಕು, ಎಲ್ಲರೂ ಒಪ್ಪುವ ಹಾಗೆ ಒಂದು ನಿರ್ಧಾರ ತೆಗೆದು ಕೊಳ್ಳಬೇಕು. ಇಲ್ಲದೇ ಇದ್ದಲ್ಲಿ ಬಂದದ್ದನ್ನು ಅನುಭವಿಸಬೇಕು.

-ರತ್ನಾ ಭಟ್ ತಲಂಜೇರಿ

(ಆಧಾರ:ಸರಳ ಸುಭಾಷಿತ)