April 2021

  • April 30, 2021
    ಬರಹ: Ashwin Rao K P
    ಕಳೆದ ಒಂದೆರಡು ದಿನಗಳ ಹಿಂದೆ ಪತ್ರಿಕೆಯನ್ನು ಓದುತ್ತಿದ್ದಾಗ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ತಿಮಿಂಗಿಲದ ವಾಂತಿ ಪತ್ತೆ ಎಂಬ ವರದಿ ನೋಡಿ ಆಶ್ಚರ್ಯವಾಯಿತು. ಏನಿದು ವಾಂತಿಗೂ ಲಕ್ಷಾಂತರ ರೂಪಾಯಿ ಬೆಲೆ ಇದೆಯಾ? ಇದರಲ್ಲಿ ಸತ್ಯ ಎಷ್ಟು? ಈ ವಾಂತಿ…
  • April 30, 2021
    ಬರಹ: Shreerama Diwana
    ರಾಷ್ಟ್ರದ ಸಂಸತ್ತಿನಿಂದ ಹಿಡಿದು ಬೀದಿ ಬದಿಯ ಟೀ ಅಂಗಡಿಯವರೆಗೆ ಒಂದಲ್ಲಾ ಒಂದು ವಿಷಯದ ಬಗೆಗೆ ಚರ್ಚೆಗಳು ಸದಾ ನಡೆಯುತ್ತಲೇ ಇರುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ತನ್ನ ಅರಿವಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಅವರವರ…
  • April 30, 2021
    ಬರಹ: ಬರಹಗಾರರ ಬಳಗ
    ಈ ಮನಸ್ಸು ಒಂದು ಕೋತಿಯ ಹಾಗೆ ಚಂಚಲ. ಕೋತಿಗೆ ಸ್ವಲ್ಪ ಹೆಂಡ ಕುಡಿಸಿದರೆ ಕೇಳುವುದೇ ಬೇಡ. ಅದರ ಚೇಷ್ಟೆಗಳನ್ನು ನಿಯಂತ್ರಿಸಲು ‌ಸಾಧ್ಯವಿಲ್ಲ. ನಮ್ಮ *ಮನಸ್ಸು* ಪರಿಶುದ್ಧವಾದಷ್ಟೂ ನಿಗ್ರಹಿಸಲು ಸುಲಭ. ಮನಸ್ಸಿನ ಆರು ಮಾಲಿನ್ಯಗಳನ್ನು  ದೇಹದಿಂದ…
  • April 30, 2021
    ಬರಹ: ಬರಹಗಾರರ ಬಳಗ
    ಆಪತ್ತು ಬಂದಾಗಿದೆ, ದೀರ್ಘ ಸಮಯದಿಂದ ಕಾಡುತ್ತಿದೆ. ಹಿರಿಯ-ಕಿರಿಯ ತಾರತಮ್ಯವಿಲ್ಲ, ಯಾರಾದರೇನು ಎಂಬ ಭಯವೂ ಇಲ್ಲ. ಬಡವ, ಧನಿಕ ಇಲ್ಲವೇ ಇಲ್ಲ. ಹಿಡಿದು ಹಿಂಡಿ ಹಿಪ್ಪೆ ಮಾಡುತ್ತಿದೆ.(ಬಂಧುಗಳ ಮನೆಯಲ್ಲಿ ಕೇಳಿದ ಘಟನೆ, ಇಬ್ಬರನ್ನೂ ಕಳಕೊಂಡಾಗಿದೆ…
  • April 30, 2021
    ಬರಹ: ಬರಹಗಾರರ ಬಳಗ
    ತಾಯೇ ನಿನ್ನಯ ಒಡಲಿನ ಕಡೆಗಿದೊ ನಡೆಯುತ ಬಂದೆನು ನೋಡೆಯ ಸನಿಹಕೆ ಕರೆಯುತ ಮಡಿಲಲಿ ಮಲಗಿಸಿ ನೆಮ್ಮದಿ ಜೀವನ ನೀಡೆಯ   ಕನ್ನಡ ದೀಪದಿ ಓದುತ ಬೆಳೆದಿಹೆ ಒಲವನು ಬೆಳೆಸುತ ನಿಲ್ಲೆಯ ನಾಡಿನ ಮಣ್ಣಲಿ ನನಸಿನ ಚೆಲುವನು ಹಚ್ಚುತ ಬಿಮ್ಮನೆ ಬಂದೆಯ  
  • April 29, 2021
    ಬರಹ: venkatesh
    ದಶಕಗಳ ಹಿಂದೆ ಕನ್ನಡ  ಚಲನ ಚಿತ್ರವೊಂದರ ನಿರ್ಮಾಣ ಕಾರ್ಯಮುಂಬಯಿನಲ್ಲಿ  ನಡೆಯಲು ಶುರುವಾಗಿತ್ತು. ಆದರೆ ....  ನಮ್ಮ ಬೆಂಗಳೂರಿನವರಿಗೆ ಮತ್ತು ಮದ್ರಾಸಿನವರಿಗೆ/ಆಂಧ್ರದವರಿಗೆ ದಿನವಿಡೀ ಕಾಫಿ ರುಚಿಯಬಗ್ಗೆ ಸುಮಾರು ಅರ್ಧಗಂಟೆಯಾದರೂ…
  • April 29, 2021
    ಬರಹ: Ashwin Rao K P
    ಮಾನವನ ಉಸಿರಾಟಕ್ಕೆ ಅತ್ಯವಶ್ಯಕವಾದದ್ದು ಆಮ್ಲಜನಕ. ಇದು ನಮ್ಮ ಜೀವ ಉಳಿಸುವ ಪ್ರಾಣವಾಯುವೆಂದರೂ ತಪ್ಪಾಗಲಾರದು. ಸಹಜವಾಗಿ ವಾತಾವರಣದಲ್ಲಿ ಸಿಗುವ ಗಾಳಿಯಿಂದ ನಮ್ಮ ಶ್ವಾಸಕೋಶವು ಆಮ್ಲಜನಕವನ್ನು ಸಹಜವಾಗಿಯೇ ಬೇರ್ಪಡಿಸಿಕೊಳ್ಳುತ್ತದೆ.…
  • April 29, 2021
    ಬರಹ: addoor
    ೭೫.ಧ್ಯಾನ್ ಚಂದ್ - ಜಗತ್ತಿನ ಶ್ರೇಷ್ಠ ಹಾಕಿ ಆಟಗಾರ ಧ್ಯಾನ್ ಚಂದ್ "ಹಾಕಿ ಮಾಂತ್ರಿಕ" ಎಂದೇ ಪ್ರಸಿದ್ಧರು. ತನ್ನ ೧೬ನೆಯ ವಯಸ್ಸಿನಲ್ಲಿ ಭಾರತೀಯ ಸೈನ್ಯ ಸೇರಿಕೊಂಡಾಗ ಅವರು ಹಾಕಿ ಆಟವಾಡಲು ಕಲಿತರು. ಅನಂತರ ಅವರು ಹಾಕಿ ಆಟದ ದಂತಕತೆಯಾದರು.…
  • April 29, 2021
    ಬರಹ: Ashwin Rao K P
    ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಹೆಸರು ಸದಾಕಾಲ ಮುಂಚೂಣಿಯಲ್ಲಿ ಇದ್ದೇ ಇರುತ್ತದೆ. ೨೦೦೭ರಲ್ಲಿ ಭಗತ್ ಸಿಂಗ್ ಜನ್ಮಶತಮಾನೋತ್ಸವವನ್ನು ಆಚರಿಸಲಾಗಿತ್ತು. ಈ ಸಮಯದಲ್ಲಿ ಹೊರ ತಂದ ಪುಸ್ತಕವೇ ‘ಧೀರ ಹುತಾತ್ಮ ಭಗತ್ ಸಿಂಗ್'. ಭಗತ್…
  • April 29, 2021
    ಬರಹ: Shreerama Diwana
    ಫೇಸ್ಬುಕ್, ಟ್ವಿಟರ್, ಇಸ್ಟಾಗ್ರಾಂ, ವಾಟ್ಸಾಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳು ನಮ್ಮ ಜ್ಞಾನವನ್ನು ಹೆಚ್ಚಿಸಲಿ, ನಮ್ಮ ಮನೋಭಾವವನ್ನು ವಿಶಾಲಗೊಳಿಸಲಿ, ನಮ್ಮ ಸಂಬಂಧಗಳನ್ನು ಬೆಸೆಯಲಿ, ನಮ್ಮ ಆತ್ಮೀಯತೆಯನ್ನು ಗಾಢವಾಗಿಸಲಿ, ನಮ್ಮ ಸಂಪರ್ಕಗಳನ್ನು…
  • April 29, 2021
    ಬರಹ: ಬರಹಗಾರರ ಬಳಗ
    ಬದುಕು ಮತ್ತು ಇತರರು ಬದುಕಲು ಬಿಡು ಇದು ಜೈನ ಧರ್ಮ ಸಿದ್ದಾಂತ. ಜಗತ್ತಿನ ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನ ಧರ್ಮದ ೨೪ ನೇ ತೀರ್ಥಂಕರ ಮಹಾವೀರ. ಬುದ್ಧ ಜನಿಸಿದ ಬಿಹಾರದ ನೆಲದಿಂದಲೇ ಬಂದ ಮಹಾವೀರ ಹುಟ್ಟಿನಿಂದಲೇ ವರ್ಧಮಾನನೆಂದು ಕರೆಸಿಕೊಂಡ.…
  • April 29, 2021
    ಬರಹ: ಬರಹಗಾರರ ಬಳಗ
    *ಈ ಜಗತ್ತಿನಲ್ಲಿ ಜನರ ಜಡತನ ಹೆಚ್ಚಾಗಿದೆ, ಜಡತನವ ಚಲಿಸುವಂತೆ ಮಾಡಬೇಕು* ಹೇಳುವವರೇ ಹೆಚ್ಚು. ಮೊದಲು ಹೇಳುವವರು ಎಷ್ಟು ಚಲಿಸುತ್ತಾರೆಂದು ನೋಡಬೇಕು. ತಾವು ಸ್ವತಃ ಕ್ರಿಯಾಶೀಲರಾಗಿದ್ದೇವೆ ಎಂಬುದನ್ನು ಪ್ರಪಂಚ ಮುಖಕ್ಕೆ ತೋರಿಸಲಿ. ನಾವು ಸ್ವತಃ…
  • April 28, 2021
    ಬರಹ: Ashwin Rao K P
    ಕಳೆದ ವಾರ ಪ್ರಕಟ ಮಾಡಿದ ಕವಿ ಹಾಗೂ ಗಮಕಿ ಅನಂತಪದ್ಮನಾಭ ರಾವ್ ಅವರ ‘ಕೃಷ್ಣಗಿರಿ ಕೃಷ್ಣರಾಯಗೆ' ಕವನ ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ಈ ವಾರ ನಾವು ಆಯ್ದು ಕೊಂಡ ಕವಿ ಎಲ್. ಗುಂಡಪ್ಪ. ಇವರು ಓರ್ವ ಖ್ಯಾತ ಸಾಹಿತಿ ಹಾಗೂ ಕವಿ. ಇವರ ಪುಟ್ಟ…
  • April 28, 2021
    ಬರಹ: addoor
    ೭.ಭೂಮಿಯಲ್ಲಿರುವ ಒಟ್ಟು ನೀರಿನ ಶೇಕಡಾ ೧.೬ ಭಾಗ ಮಾತ್ರ ತಾಜಾ ಆಗಿದೆ! ಇದರ ಬಹುಪಾಲು ಹಿಮ ಮತ್ತು ಮಂಜುಗಡ್ದೆ ರೂಪದಲ್ಲಿ (ಜೀವಿಗಳು ಉಪಯೋಗಿಸಲು ಆಗದಂತೆ) ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿ ಮತ್ತು ಅತಿ ಎತ್ತರದ ಪರ್ವತಗಳ…
  • April 28, 2021
    ಬರಹ: Shreerama Diwana
    ಉಡುಪಿ ಜಿಲ್ಲೆಯ ಮೂಡುಬೆಳ್ಳೆ - ದೆಂದೂರುಕಟ್ಟೆ ನಡುವೆ ಸಿಗುವ ಕುಂತಳನಗರದ ಹಿಂದಿನ ಹೆಸರು (ಸ್ಥಳನಾಮ) ಕುಂಟಲ ಗುಡ್ಡೆ. ಕುಂತಳನಗರ ಪೇಟೆ, ಕುಂಟಲ ಗುಡ್ಡೆಯ ಪಶ್ಚಿಮ ಭಾಗದ ಬುಡದಲ್ಲಿದೆಯಾದರೆ; ಅಂಗನವಾಡಿ, ಶಾಲೆ, ಒಂದಷ್ಟು ಮನೆಗಳು…
  • April 28, 2021
    ಬರಹ: Shreerama Diwana
    ಪಕ್ಷಗಳ ಪ್ರಣಾಳಿಕೆಗಳನ್ನು ಎಲ್ಲಾ ರೀತಿಯ ಚುನಾವಣೆಗಳ ಸಂಧರ್ಭದಲ್ಲಿ ನಾವು ಗಮನಿಸಿದ್ದೇವೆ. ಭರವಸೆಗಳ ಆಶಾ ಗೋಪುರಗಳೇ ನಮ್ಮ ಮುಂದೆ ಇಡಲಾಗುತ್ತದೆ. ಅದು ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂಬುದು ಪ್ರಶ್ನಾರ್ಹ. ಆದರೆ ಭಾರತದ ಮತದಾರನ ಕೆಲವು…
  • April 28, 2021
    ಬರಹ: ಬರಹಗಾರರ ಬಳಗ
    ೧. ನಂಬುವವರು ಕಪಟಿಗಳ ನಂಬುವವರು ಬೆನ್ನಿಗೆ ಚೂರಿ ಇರಿಯುವವರು ಮನಸುಗಳ ಕದಿಯುವವರು ಪ್ರೀತಿಯನು ಮಾಡುವವರು   ೨. ಜ್ಞಾನ ಬರಿದೆ ಕಣ್ಣಲಿ ನೋಡಿ ವಿಜಯಿ ಎನದಿರಿ ಜನತೆ ಒಳ ಹೊಕ್ಕು ನೋಡುತಲಿ ವಿಷಯ ತಿಳಿಯಲು ಘನತೆ   ೩. ನೋಟ
  • April 28, 2021
    ಬರಹ: ಬರಹಗಾರರ ಬಳಗ
     *ಅಧ್ಯಾಯ. ೧೨*       *ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ ನ ಕಾಂಕ್ಷತಿ/* *ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯ: ಸ ಮೇ ಪ್ರಿಯ://೧೭//* ಯಾರು ಎಂದಿಗೂ ಹರ್ಷಿತರಾಗುವುದಿಲ್ಲವೋ, ದ್ವೇಷಿಸುವುದಿಲ್ಲವೋ,ಶೋಕಿಸುವುದಿಲ್ಲವೋ,…
  • April 27, 2021
    ಬರಹ: Shreerama Diwana
    *ಎಂ. ವಿ. ಬಳ್ಳುಳ್ಳಾಯರ "ನಾಡಪ್ರೇಮಿ"* ತುಳುನಾಡಿನ ಅತೀ ಮುಖ್ಯ ಭಾಗವಾಗಿದ್ದ ಕಾಸರಗೋಡು ಪ್ರದೇಶವನ್ನು ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭದಲ್ಲಿ ಕರ್ನಾಟಕದ ಜೊತೆಗೆ ಸೇರಿಸುವ ಬದಲು ಅನ್ಯಾಯವಾಗಿ, ಮೋಸದಿಂದ ಕೇರಳದ ಜೊತೆಗೆ ಸೇರಿಸಿದಾಗ…
  • April 27, 2021
    ಬರಹ: Ashwin Rao K P
    ಕನಸಿನಲ್ಲಿ ಮೃತರಾದ ಮಕ್ಕಳು ಬೆಸ್ತ ದಂಪತಿಗಳಿಗೆ ವಿವಾಹವಾಗಿ ಅನೇಕ ವರ್ಷಗಳ ನಂತರ ಮಗನು ಜನಿಸಿದನು. ಹುಡುಗನು ತಂದೆ-ತಾಯಿಯರ ಹೆಮ್ಮೆ ಮತ್ತು ಸಂತೋಷಕ್ಕೆ ಕಾರಣವಾಗಿದ್ದನು. ಒಂದು ದಿನ ಅವನು ತೀವ್ರವಾದ ಕಾಯಿಲೆಗೆ ಗುರಿಯಾಗಿ, ಸಾಕಷ್ಟು ಹಣವನ್ನು…