ಇದೊಂದು ಅತ್ಯುತ್ತಮ ಅವಕಾಶ…

ಫೇಸ್ಬುಕ್, ಟ್ವಿಟರ್, ಇಸ್ಟಾಗ್ರಾಂ, ವಾಟ್ಸಾಪ್ ಇತ್ಯಾದಿ ಸಾಮಾಜಿಕ ಜಾಲತಾಣಗಳು ನಮ್ಮ ಜ್ಞಾನವನ್ನು ಹೆಚ್ಚಿಸಲಿ, ನಮ್ಮ ಮನೋಭಾವವನ್ನು ವಿಶಾಲಗೊಳಿಸಲಿ, ನಮ್ಮ ಸಂಬಂಧಗಳನ್ನು ಬೆಸೆಯಲಿ, ನಮ್ಮ ಆತ್ಮೀಯತೆಯನ್ನು ಗಾಢವಾಗಿಸಲಿ, ನಮ್ಮ ಸಂಪರ್ಕಗಳನ್ನು ವಿಸ್ತರಿಸಲಿ, ನಮ್ಮ ನೋವುಗಳನ್ನು ಕಡಿಮೆಗೊಳಿಸುವ ಔಷಧಿಯಾಗಲಿ, ನಮ್ಮ ಸಂತೋಷ ಹೆಚ್ಚಿಸುವ ಸಾಧನವಾಗಲಿ, ನಮ್ಮ ಪ್ರತಿಭೆ ಅನಾವರಣಗೊಳಿಸುವ ವೇದಿಕೆಯಾಗಲಿ, ನಮ್ಮ ಕಲಿಕೆಯ ತಾಣಗಳಾಗಲಿ, ನಮ್ಮ ನೆನಪುಗಳನ್ನು ಹಂಚಿ ಕೊಳ್ಳುವ ಸ್ಹೇಹಿತರ ಕೂಟವಾಗಲಿ, ನಾವು ಬೆಳೆಯುವ ಅನುಭವ ಮಂಟಪಗಳಾಲಿ, ಆ ಮುಖಾಂತರ…
ನಮ್ಮಲ್ಲಿ ಸಮಾನತೆಯ ಭಾವ ಬಿತ್ತಲಿ, ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಲಿ, ನಮ್ಮಲ್ಲಿನ ಮೌಡ್ಯ ತೊಲಗಿಸಲಿ, ನಮ್ಮಲ್ಲಿನ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಲಿ, ನಮ್ಮನ್ನು ವಿಶ್ವಮಾನವತೆಯೆಡೆಗೆ ಮುನ್ನಡೆಸಲಿ, SOCIAL SMART CITY
ನಿರ್ಮಾಣವಾಗಲು ಇವು ಪ್ರೇರಣೆಯಾಗಲಿ. ಇದೊಂದು ಅತ್ಯುತ್ತಮ ಅವಕಾಶವೆಂದು ಪರಿಗಣಿಸಿ, ನಮ್ಮೆಲ್ಲರಲ್ಲೂ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಲು ಇದನ್ನು ಉಪಯೋಗಿಸಿಕೊಳ್ಳೋಣ, ಸಿನಿಕತನದಿಂದ ದೂರವಾಗೋಣ,
ಅನಾವಶ್ಯಕ ಗೊಂದಲ ಗಲಭೆಗಳಿಗೆ ಆಸ್ಪದ ಕೊಡದೆ ಭದ್ರ ಮತ್ತು ನೆಮ್ಮದಿಯ ಬದುಕು ರೂಪಿಸಿಕೊಳ್ಳವ ವೇದಿಕೆಯಾಗಿಸೋಣ. ಅದಕ್ಕಾಗಿ ಎಲ್ಲರ ಸಹಕಾರ ನಿರೀಕ್ಷಿಸುತ್ತಾ....
- ಜ್ಞಾನ ಭಿಕ್ಷಾ ಪಾದಯಾತ್ರೆಯ 177 ನೆಯ ದಿನ ಉತ್ತರ ಕನ್ನಡ ಜಿಲ್ಲೆಯ ಉಮ್ಮಚಗಿ ಗ್ರಾಮದಲ್ಲಿ ವಾಸ್ತವ್ಯ.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ: ಇಂಟರ್ನೆಟ್ ಕೃಪೆ