ವಿಧ: ಪುಸ್ತಕ ವಿಮರ್ಶೆ
January 27, 2025
ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾದ ಸ್ವಾಮಿ ಅಖಂಡಾನಂದ ಇವರು ಬಂಗಾಳಿ ಭಾಷೆಯಲ್ಲಿ ಬರೆದ ಪುಸ್ತಕವನ್ನು ಡಾ. ನರೇಂದ್ರನಾಥ ಬಿ. ಪಾಟೀಲ್ ಆಂಗ್ಲಭಾಷೆಗೆ (In the Lap of the Himalayas) ಅನುವಾದ ಮಾಡಿದ್ದರು. ಆ ಕೃತಿಯ ಮಹತ್ವ ಹಾಗೂ ಸಾರವನ್ನು ಕನ್ನಡ ಬಲ್ಲ ಓದುಗರಿಗಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಹೆಚ್. ರಾಮಚಂದ್ರಸ್ವಾಮಿ. ಸ್ವಾಮಿ ಅಖಂಡಾನಂದ ಅವರ ಹಿಮಾಲಯದ ಅನುಭವಗಳನ್ನು ನಿರೂಪಿಸುವ ಕೃತಿ ಇದು.
ಗಂಗಾಧರ ಮಹಾರಾಜ್ ಎಂದೂ ಬಾಬಾ ಎಂದೂ ಆಪ್ತವಲಯದಲ್ಲಿ ಪ್ರಸಿದ್ಧರಾಗಿರುವ…
ವಿಧ: ರುಚಿ
January 27, 2025
ಬ್ರೆಡ್ ಸ್ಲೈಸ್ ಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ಅದನ್ನು ಮೊಸರಿನೊಂದಿಗೆ ಚೆನ್ನಾಗಿ ಬೆರೆಸಿ. ನಂತರ ಹಸಿರು ಮೆಣಸಿನಕಾಯಿ, ಉಪ್ಪು, ಕರಿ ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ. ಒಂದು ಸಣ್ಣ ಕಾವಲಿಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ಬ್ರೆಡ್ಡಿನ ಮಿಶ್ರಣದ ಮೇಲೆ ಸುರಿಯಿರಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಅಂಗೈಯಿಂದ ಉಂಡೆಗಳನ್ನು ಮಾಡಿ ಇಡ್ಲಿ ಆಕಾರಕ್ಕೆ ತನ್ನಿ. ನಾಲ್ಕು ಇಡ್ಲಿಗಳನ್ನು ತಯಾರಿಸಬಹುದು…
ವಿಧ: ಪುಸ್ತಕ ವಿಮರ್ಶೆ
January 24, 2025
ಬಹುವೇಗದಲ್ಲಿ ಬೆಳೆಯುತ್ತಿರುವ ನಗರ ಎಂದೇ ಹೆಸರಾದ ಬೆಂಗಳೂರು ಬಗ್ಗೆ ಮಾಲಿನಿ ಗೋಯಲ್ ಹಾಗೂ ಪ್ರಶಾಂತ್ ಪ್ರಕಾಶ್ ಅವರು ಆಂಗ್ಲಭಾಷೆಯಲ್ಲಿ ಬರೆದ ‘ಅನ್ ಬಾಕ್ಸಿಂಗ್ ಬೆಂಗಳೂರು’ ಎನ್ನುವ ಕೃತಿಯು ಅದೇ ಹೆಸರಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಲೇಖಕಿ ಪ್ರತಿಭಾ ನಂದಕುಮಾರ್. ಬೆಂಗಳೂರು ನಗರವನ್ನು ಹೊಸ ಆರಂಭಗಳ ನಗರ ಎಂದು ಹೆಸರಿಸಿದ್ದಾರೆ. ಪ್ರತಿಭಾ ನಂದಕುಮಾರ್ ಅವರು ತಮ್ಮ ಅನುವಾದಕಿಯ ಮಾತುಗಳಲ್ಲಿ ಹೇಳಿದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಮಾಲಿನಿ ಗೋಯಲ್ ಮತ್ತು ಪ್ರಶಾಂತ್…
ವಿಧ: ರುಚಿ
January 24, 2025
ಟೊಮೆಟೋ, ಬದನೆಕಾಯಿ, ಹಸಿಮೆಣಸಿನಕಾಯಿ, ಆಲೂಗಡ್ಡೆ ಸಣ್ಣಗೆ ಹೆಚ್ಚಿ ಬೇಯಿಸಿಕೋಳ್ಳಬೇಕು. ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, ಬೆಳ್ಳುಳ್ಳಿ, ಕಡಲೆಬೀಜ, ಉಪ್ಪು, ಹುಣಸೆಹಣ್ಣು, ಬೇಯಿಸಿದ ತರಕಾರಿಗಳನ್ನು ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ದಪ್ಪ ತಳದ ಬಾಣಲೆಗೆ ಎಣ್ಣೆ, ಸಾಸಿವೆ, ಸಣ್ಣ ಹೆಚ್ಚಿದ ಉಳಿದ ಅರ್ಧ ಈರುಳ್ಳಿಯನ್ನು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ರುಬ್ಬಿರುವ ಹಾಕಿ ಕುದಿಸಬೇಕು. ಸ್ವಲ್ಪ ವಿಭಿನ್ನವಾದ ಈ ಚಟ್ನಿಯನ್ನು ಚಪಾತಿ, ರೊಟ್ಟಿ, ಅನ್ನದೊಂದಿಗೆ ಸವಿಯಬಹುದು.
-ಅರುಂಧತಿ ಎಸ್,…
ವಿಧ: ಬ್ಲಾಗ್ ಬರಹ
January 24, 2025
ಭಾಸನ ನಾಟಕವಾದ 'ಪಂಚರಾತ್ರ'ವು ಗದ್ಯ ಪದ್ಯಗಳಿಂದ ಕೂಡಿದ್ದುದರಿಂದ ತಿಳಿದುಕೊಳ್ಳಲು ಸುಲಭವಾಗಲಿ ಎಂದು ಒಬ್ಬರು ಪೂರ್ತಿ ಗದ್ಯದಲ್ಲಿ ನಾಟಕವನ್ನು ಬರೆದಿದ್ದಾರೆ. ಇದು ನನಗೆ archive.org ತಾಣದಲ್ಲಿ ಸಿಕ್ಕಿತು.
ಸುಮಾರು 90 ಪುಟಗಳ ಈ ನಾಟಕದಲ್ಲಿ ಮಹಾಭಾರತದ ಸಂಗತಿ ಇದೆ. ಪಾಂಡವರು ವಿರಾಟ ರಾಜನ ಆಸ್ಥಾನದಲ್ಲಿ ಮಾರು ವೇಷದಿಂದ ತಮ್ಮ ವನವಾಸದ ಅಜ್ಞಾತವಾಸದ ಸಮಯವನ್ನು ಕಳೆಯುತ್ತಿರುವರು.
ಅತ್ತ ದ್ರೋಣನು ದುರ್ಯೋಧನನಲ್ಲಿ ಪಾಂಡವರ ರಾಜ್ಯವನ್ನು ಅವರಿಗೆ ಮರಳಿಸಲು ಹೇಳುವುದು. ಆಗ ದುರ್ಯೋಧನನು…
ವಿಧ: ಬ್ಲಾಗ್ ಬರಹ
January 23, 2025
ಈ ಪುಸ್ತಕವು archive.org ತಾಣದಲ್ಲಿ ಇದ್ದು, 'ಶ್ರೀ ರಾಮಚಂದ್ರ' ಎಂದು ಹುಡುಕಿ ಪಡೆಯಬಹುದು.
ಇದರಲ್ಲಿ ರಾಮಾಯಣದ ಕಥೆಯು ತುಂಬಾ ಸರಳವಾಗಿ 120 ಪುಟಗಳಲ್ಲಿ ಶ್ರೀ ರಾಮನು ರಾವಣನನ್ನು ಕೊಂದು ಸೀತೆಯನ್ನು ಕರೆದುಕೊಂಡು ಅಯೋಧ್ಯೆಗೆ ಬಂದು ಅಧಿಕಾರವನ್ನು ವಹಿಸಿಕೊಂಡವರೆಗೆ ಕಥೆಯನ್ನು ಹೇಳಿದ್ದಾರೆ. ಬಹುಶ: ವಾಲ್ಮೀಕಿ ರಾಮಾಯಣವೇ ಇದಕ್ಕೆ ಆಧಾರವಾಗಿರಬೇಕು. ಇದರಲ್ಲಿ ಯಾವುದೇ ಮುನ್ನುಡಿ ಇಲ್ಲದ್ದರಿಂದ ಈ ಬಗ್ಗೆ ಏನೂ ತಿಳಿಯುವದಿಲ್ಲ.
ರಾಮಾಯಣದ ಕಥೆ ನನಗೆ ಈಗಾಗಲೇ ಗೊತ್ತಿತ್ತಾದರೂ ಈ ಪುಸ್ತಕದಲ್ಲಿ…
ವಿಧ: ಪುಸ್ತಕ ವಿಮರ್ಶೆ
January 22, 2025
ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಮುಂಜಾವಿನ ರತ್ನಗಳು’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ನುಡಿಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ಸಾಲುಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ನುಡಿಗಳಿಗಿವೆ. ಕೆಲವು ನುಡಿಗಳು ೨ ವಾಕ್ಯದಲ್ಲೇ ಮುಗಿದರೆ, ಕೆಲವು ೧೫-೨೦ ವಾಕ್ಯಗಳಿಗೆ ಹಿಗ್ಗಿವೆ. ತಮ್ಮ ಮನದಾಳದ ನುಡಿಗಳನ್ನು ರತ್ನಾ ಭಟ್ ಅವರು…
ವಿಧ: ಪುಸ್ತಕ ವಿಮರ್ಶೆ
January 21, 2025
ನಾ. ಕಸ್ತೂರಿ ಅವರು ಕನ್ನಡದ ಸುಪ್ರಸಿದ್ಧ ಹಾಸ್ಯ ಲೇಖಕರು. ಅವರ ಪೂರ್ಣ ಹೆಸರು ಕಸ್ತೂರಿ ರಂಗನಾಥ ನಾರಾಯಣ ಶರ್ಮ. ಅವರ ಹಾಸ್ಯ ಬರಹಗಳು ಸುಲಭಲಭ್ಯವಿಲ್ಲದ ಸಮಯದಲ್ಲಿ, ಅವರ ಉತ್ತಮ ಹಾಸ್ಯಬರಹಗಳನ್ನು ವೈ. ಎನ್. ಗುಂಡೂರಾಯರು ಆಯ್ದು “ಬೆಸ್ಟ್ ಆಫ್ ಕಸ್ತೂರಿ” ಎಂಬ ಪುಸ್ತಕವಾಗಿ ಹಾಸ್ಯಪ್ರಿಯರ ಕೈಗಿತ್ತಿದ್ದಾರೆ.
ಇದರಲ್ಲಿವೆ ನಾ. ಕಸ್ತೂರಿಯವರ ಹಾಸ್ಯ ಬರಹಗಳು, ಕವನಗಳು, ಅನರ್ಥಕೋಶ, ನಗೆ ಚಟಾಕಿಗಳು ಮತ್ತು ಒಂದು ನಾಟಕ.
ಉದ್ಯೋಗ ಹುಡುಕಿ, ಕರ್ನಾಟಕಕ್ಕೆ ಬಂದ ನಾ. ಕಸ್ತೂರಿಯವರು ಕನ್ನಡ ಕಲಿತು,…
ವಿಧ: ಪುಸ್ತಕ ವಿಮರ್ಶೆ
January 20, 2025
ತಮಿಳು ಭಾಷೆಯ ಖ್ಯಾತ ಕವಿ ಸೀನು ರಾಮಸಾಮಿಯವರ ಆಯ್ದ ಕವನಗಳನ್ನು ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಮಲರ್ ವಿಳಿ ಕೆ. ಮಧುಮಿತ. ಇವರ ಈ ಕವನ ಸಂಕಲನಕ್ಕೆ ಡಾ. ಶೀಲಾದೇವಿ ಎಸ್ ಮಳೀಮಠ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ಬರೆದ ಮುನ್ನುಡಿಯ ಆಯ್ದ ಭಾಗಗಳು…
“ಸೀನು ರಾಮಸಾಮಿಯವರ ಕವಿತೆಗಳ ಅನುವಾದಿತ ಕವಿತೆಗಳು "ಮಳೆ ಕುಡಿವ ನಗರ" ಅನುವಾದಕಿ, ಡಾ.ಮಲರ್‌ವಿಳಿ.ಕೆ, ಮಧುಮಿತ ಅವರು ಅತ್ಯಂತ ಸರಳ ಸಜ್ಜನಿಕೆಯ ಕವಯತ್ರಿ. ಅವರ ಅನುವಾದದಲ್ಲಿ ಓದುಗರನ್ನು ಒಮ್ಮೆಲೆ ಸೆಳೆಯುವ…
ವಿಧ: ರುಚಿ
January 19, 2025
ಬೆಣ್ಣೆಹಣ್ಣಿನ ತಿರುಳು ತೆಗೆದು ಚೆನ್ನಾಗಿ ಕಿವುಚಿ. ಮೊಸರು, ಉಪ್ಪು ಸೇರಿಸಿ. ಜೀರಿಗೆ, ಬಾಳಕದ ಮೆಣಸಿನಕಾಯಿ ಒಗ್ಗರಣೆ ಹಾಕಿ. ಬೆಣ್ಣೆಹಣ್ಣು ಪೌಷ್ಟಿಕಾಂಶಗಳಿಂದ ಕೂಡಿದ್ದು ಗರ್ಭಿಣಿಯರಿಗೆ ತುಂಬ ಒಳ್ಳೆಯದು.
- ಸಹನಾ ಕಾಂತಬೈಲು, ಮಡಿಕೇರಿ