ಮಾವಿನಕಾಯಿ ಗೊಜ್ಜು

ಬೇಕಿರುವ ಸಾಮಗ್ರಿ
ಬಲಿತ ಮಾವಿನಕಾಯಿ ೨, ಬೆಲ್ಲ ಸಣ್ಣ ಉಂಡೆ, ಹಸಿಮೆಣಸು ೨, ಉಪ್ಪು ರುಚಿಗೆ, ಒಗ್ಗರಣೆಗೆ ಒಣಮೆಣಸು ೧, ಬೆಳ್ಳುಳ್ಳಿ ೫ ಎಸಳು, ಸಾಸಿವೆ ೧ ಚಮಚ, ಎಣ್ಣೆ ೨ ಚಮಚ, ಕರಿಬೇವಿನ ಎಸಳು.
ತಯಾರಿಸುವ ವಿಧಾನ
ಮಾವಿನಕಾಯಿಯನ್ನು ನೀರಿನಲ್ಲಿ ಬೇಯಿಸಿ ಕಿವುಚಿ ರಸ ತೆಗೆದಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ನೀರು, ಉಪ್ಪು, ಹಸಿಮೆಣಸು, ಬೆಲ್ಲ ಹಾಕಿ ಸೌಟಿನಲ್ಲಿ ತಿರುವಿ. ಬೆಳ್ಳುಳ್ಳಿ, ಕರಿಬೇವು ಎಸಳಿನ ಒಗ್ಗರಣೆ ಕೊಡಿ. ಅನ್ನಕ್ಕೆ ಕಲಸಿಕೊಂಡು ತಿನ್ನಿ.
-ಸಹನಾ ಕಾಂತಬೈಲು, ಮಡಿಕೇರಿ