ಆನಿಯನ್ ಚೀಸ್ ಬ್ರೆಡ್

ಆನಿಯನ್ ಚೀಸ್ ಬ್ರೆಡ್

ಬೇಕಿರುವ ಸಾಮಗ್ರಿ

ಬ್ರೆಡ್ ಹಾಳೆಗಳು (ಸ್ಲೈಸ್) ೬, ಚೀಸ್ ಹಾಳೆ (ಸ್ಲೈಸ್) ೬, ಮೆದು ಬೆಣ್ಣೆ ಕಾಲು ಕಪ್, ಉದ್ದಕ್ಕೆ ಹೆಚ್ಚಿದ ಈರುಳ್ಳಿ ಕಾಲು ಕಪ್, ಗಸಗಸೆ ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಹರಿತವಾದ ಚೂರಿಯಿಂದ ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಪ್ರತಿ ಹಾಳೆಯನ್ನು ಒಂದು ಇಂಚು ಅಂತರಕ್ಕೆ ಕೆಳಗಿನವರೆಗೆ ಸೀಳಿರಿ. ಚೀಸ್ ಹಾಳೆಗಳನ್ನು ಮುಕ್ಕಾಲು ಇಂಚು ಉದ್ದಕ್ಕೆ ತುಂಡು ಮಾಡಿ, ಸೀಳಿದ ಬ್ರೆಡ್ ನ ಮಧ್ಯೆ ಸೇರಿಸಿರಿ. ಓವನ್ ಬಿಸಿ ಮಾಡಲು ಇಡಿ. ಒಂದು ಓವನ್ ಟ್ರೇ ಮೇಲೆ ಅಲ್ಯುಮೀನಿಯಂ ಫಾಯಿಲ್ ಬಿಡಿಸಿ ಅದರ ಮೇಲೆ ಬ್ರೆಡ್ ಹಾಳೆಗಳನ್ನು ಜೋಡಿಸಿ. ಬೆಣ್ಣೆ, ಹೆಚ್ಚಿಟ್ಟ ಈರುಳ್ಳಿ ಮತ್ತು ಗಸಗಸೆಯನ್ನು ಚೆನ್ನಾಗಿ ಬೆರೆಸಿ. ಓವನ್ ಟ್ರೇ ಮೇಲೆ ತಯಾರಿಸಿಟ್ಟ ಬ್ರೆಡ್ ಹಾಳೆಗಳ ಮೇಲೆ ಹರಡಿ. ಮೇಲಿನಿಂದ ಇನ್ನೊಂದು ಅಲ್ಯೂಮಿನಿಯಂ ಹಾಳೆಯಿಂದ ಮುಚ್ಚಿರಿ. ಬಿಸಿ ಮಾಡಿದ ಓವನ್ ನಲ್ಲಿ ೩೫೦ ಡಿಗ್ರಿಯಲ್ಲಿ ೧೫ ರಿಂದ ೨೦ ನಿಮಿಷ ಕಾಯಿಸಿರಿ. ಬಿಸಿ ಬಿಸಿ ಚಹಾದೊಂದಿಗೆ ಸೇವಿಸಲು ಬಹಳ ರುಚಿಕರ.