March 2017

  • March 31, 2017
    ಬರಹ: addoor
    ತಿಂಗಳ ಮಾತು: ರೈತರಿಗೆ ಬೇಕು  ಸೂಕ್ತ ಕೃಷಿ ಸಾಲ  ವ್ಯವಸ್ಥೆಮುನ್ನೋಟ: ಮೂರು  ದಿನಗಳ ರಾಷ್ಟ್ರೀಯ ಸಾವಯವ ಉತ್ಪನ್ನ  ಮತ್ತು ಸಿರಿಧಾನ್ಯ ಮೇಳ ಮಾವು  ಬಿಸಿನೀರು ಸಂಸ್ಕರಣಾ ಘಟಕ  ತಿಂಗಳ ಬರಹ: ಕಾನೂನಿನೊಳಗೆ ನಲುಗುತ್ತಿರುವ "ಕಲ್ಪರಸ"ಕ್ಕೆ …
  • March 30, 2017
    ಬರಹ: ಕನ್ನಡತಿ ಕನ್ನಡ
    'ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ' ಎಂಬ ನಾಣ್ನುಡಿಯಂತೆ ನಮ್ಮ ಸಮ ಶೀತೋಷ್ಣ ವಲಯದ ಭಾರತ ದೇಶಕ್ಕೆ ಅದರಲ್ಲೂ ಕರ್ನಾಟಕಕ್ಕೆ ರಾಗಿಯ ತಿನಿಸುಗಳು ಆರೋಗ್ಯ ವರ್ಧಕ. ಹೊಟ್ಟೆಗೆ ತಂಪು. 'ದಿನಕ್ಕೊಮ್ಮೆ ರಾಗಿ ತಿಂದರೆ ಆಗುವನು ನಿರೋಗಿ'…
  • March 30, 2017
    ಬರಹ: nvanalli
      ಅವರು ಬೆಳಾಲಿನ ಗೊಲ್ಲ ಮಾಸ್ತರು. ಗೋಪಾಳಕೃಷ್ಣ ಗೊಲ್ಲ ಅವರ ಹೆಸರು. ಕಪ್ಪಗೆ-ಉದ್ದಕ್ಕೆ, ಸಣಕಲು ದೇಹಿ, ಸಟಸಟ ಓಡಾಟ, ಪಟಪಟ ಮಾತು. ಅಚ್ಚ ಬಿಳಿ ಪಂಚೆ- ಅಂಗಿ, ಊರವರು ಹೇಳುವ ಹಾಗೆ- ಗೊಲ್ಲ ಮಾಸ್ತರರು ಯಾವತ್ತೂ ಹೀಗೇ!   ಬೆಳಾಲು ಬೆಳ್ತಂಗಡಿ…
  • March 29, 2017
    ಬರಹ: kiran_hallikar
    ಯುಗಾದಿ - ಚೈತ್ರ ಮಾಸದ ಮೊದಲ ದಿನ . ಹಿಂದೂಗಳಿಗೆ ಹೊಸ ವರುಷದ ಹರುಷ. ಜ್ಯೋತಿಷ್ಯ ಶಾಸ್ತ್ರದ  ಪ್ರಕಾರ ಇಂದು ಅಶ್ವಿನಿ ನಕ್ಷತ್ರಕ್ಕೆ ಸೂರ್ಯ ಪ್ರವೇಶಿಸಿದಾಗ ಭೂಮಿಯ ಮೇಲಿನ ಗಿಡ ಮರಗಳು ಚಿಗುರೊಡೆಯಲಾರಂಭಿಸುತ್ತವೆ. ಹಾಗಾಗಿ ಈ ದಿನವನ್ನು…
  • March 29, 2017
    ಬರಹ: santhosha shastry
      ಈಚೆಗೆ  ಭಾರೀ ಸುದ್ದಿ ಮಾಡುತ್ತಿರುವುದು – ಮಾಧ್ಯಮ  ಹಾಗೂ ರಾಜಕಾರಣಿಗಳ ಹಗ್ಗ-ಜಗ್ಗಾಟ. ಈರ್ವರದ್ದೂ ತಾವು ಸುಭಗರೆಂಬ ವಾದ-ಪ್ರತಿವಾದ.  ನಿಜ ಹೇಳಬೇಕೆಂದರೆ, ಇಬ್ಬರೂ ಸರಿ ಹಾಗೂ ಇಬ್ಬರೂ ತಪ್ಪು ! ಹೇಗಂತೀರೋ? ಹೇಗೆ ಎಲ್ಲಾ ರಾಜಕಾರಣಿಗಳೂ…
  • March 29, 2017
    ಬರಹ: shreekant.mishrikoti
    ನಿಮಗೆ ಗೊತ್ತಿರಬಹುದು - ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣಗಳಲ್ಲಿ ಕನ್ನಡದ ನಾಲ್ಕೈದು ಸಾವಿರ ಪುಸ್ತಕ ಸೇರಿದಂತೆ ಅನೇಕ ಭಾಷೆಗಳ ಲಕ್ಷಾಂತರ ಪುಸ್ತಕಗಳು ಇವೆ. ಅವುಗಳನ್ನು PDF ರೂಪದಲ್ಲೇ ಇಳಿಸಿಕೊಳ್ಳುವುದು ಹೇಗೆ? ಹಿಂದೆ ಈ ಬಗ್ಗೆ ನಾನು…
  • March 28, 2017
    ಬರಹ: H.N Ananda
    ನನಗೆ ದೇವರಲ್ಲಿ ನಂಬಿಕೆ ಇಲ್ಲದಿರಬಹುದು. ಆದರೆ ಅವನ ಹೆಸರಿನಲ್ಲಿ ನೀಡುವ ಪ್ರಸಾದದಲ್ಲಿ ಅಚಲ ನಂಬಿಕೆ ಇದೆ. "ದೇವನೊಬ್ಬ ನಾಮ ಹಲವು" ಎಂದಿದ್ದರೂ ದೇವರುಗಳು ಹಲವಾರು ಇದ್ದಂತೆ ಪ್ರಸಾದಗಳೂ ಹಲವು ಬಗೆ - ರುಚಿಯಲ್ಲಿ, ಗಾತ್ರದಲ್ಲಿ, ಬಣ್ಣದಲ್ಲಿ.…
  • March 27, 2017
    ಬರಹ: Na. Karantha Peraje
    ಕಸ್ತೂರಿ ವರದರಾಯ ಪೈಗಳು ಸುರತ್ಕಲ್ ಮೇಳದ ಯಜಮಾನ. ಮೇಳದ ಗಾಥೆಗೆ ಹತ್ತಿರ ಹತ್ತಿರ ಅರ್ಧ ಶತಮಾನ. ಯಜಮಾನಿಕೆಗೂ ‘ಅರ್ಹತೆಯಿದೆ’ ಮತ್ತು ‘ಅರ್ಹತೆ ಬೇಕು’ ಎಂದು ಅನುಷ್ಠಾನಿಸಿ ತೋರಿಸಿದವರು. ಅಭಿಮಾನಿಗಳನ್ನು ಅರ್ಹತೆಯ ಬಲದಿಂದ ಹೊಂದಿದವರು.…
  • March 25, 2017
    ಬರಹ: kannadakanda
    ಅಭಿವಾದನಶೀಲಸ್ಯ ನಿತ್ಯಂ ವೃದ್ಧೋಪಸೇವಿನ: ಚತ್ವಾರಿ ತಸ್ಯ ವರ್ಧಂತೇ ಆಯುರ್ವಿದ್ಯಾಯಶೋಬಲಮ್||೧||   ವಿನಯ ಗೌರವದಿಂದ ಹಿರಿಯರ ಸೇವೆ ಮಾಡುವವನಿಗೆ ಆಯುಸ್ಸು ವಿದ್ಯೆ ಯಶಸ್ಸು ಮತ್ತು ಬಲ ಈ ನಾಲ್ಕು ವರ್ಧಿಸುತ್ತವೆ.   ಯಥಾ ಖನನ್ ಖನಿತ್ರೇಣ…
  • March 25, 2017
    ಬರಹ: srilakshmi
    ರಮ್ಯ ಈಗ ಹತ್ತನೆಯ ತರಗತಿ. ಪರೀಕ್ಷೆ ಮುಗಿದ ನಂತರ ಮುಂದೇನು ಎಂಬ ಚಿಂತೆ. ಯಾವ ಕೋರ್ಸ್, ಯಾವ ಕಾಲೇಜ್ ಹೀಗೇ ನೂರಾರು ಚಿಂತೆ ಮನಸ್ಸಿನಲ್ಲಿ. ತಲೆಯ ತುಂಬಾ ನೂರಾರು ಕಾಲೇಜ್, ಕೋರ್ಸ್ ಗಳು ಗಿರಕಿ ಹೊಡೆಯುತ್ತಿವೆ. ಇದು ಕೇವಲ ಒಬ್ಬರ ಸಮಸ್ಯೆಯಲ್ಲ.…
  • March 25, 2017
    ಬರಹ: addoor
    ಮಕ್ಕಳ ಆರೋಗ್ಯ ಸ್ವಲ್ಪ ಹೆಚ್ಚುಕಡಿಮೆಯಾದರೂ, ಈಗ ತಂದೆತಾಯಿ ಧಾವಿಸುವುದು ಆಲೋಪಥಿ ವೈದ್ಯರ ದವಾಖಾನೆಗೆ. ಮನೆಯ ವಯಸ್ಕರಿಗೆ ಮತ್ತು ವೃದ್ಧರಿಗೆ ಅನಾರೋಗ್ಯ ಆದಾಗಲೂ ಇದೇ ಅಭ್ಯಾಸ. ಆಲೋಪಥಿ ಡಾಕ್ಟರು ಅನಾರೋಗ್ಯ ನಿವಾರಣೆಗೆ ಕೊಡುವುದು ರಾಸಾಯನಿಕ…
  • March 25, 2017
    ಬರಹ: addoor
    ಚೇರ್ಕಾಡಿ ರಾಮಚಂದ್ರ ರಾಯರ ಹೆಸರು ಮತ್ತೆಮತ್ತೆ ಕೇಳಿ ಬರುತ್ತದೆ - ಸುಸ್ಥಿರ ಕೃಷಿಯ ಮಾತು ಬಂದಾಗೆಲ್ಲ. ಯಾಕೆಂದರೆ ಸುಸ್ಥಿರ ಕೃಷಿಯೇ ಅವರ ಉಸಿರಾಗಿತ್ತು. ಒಂಭತ್ತು ದಶಕಗಳು ಮಿಕ್ಕಿದ ತುಂಬು ಬದುಕು ಮುಗಿಸಿ, ಅವರು ನಮ್ಮನ್ನಗಲಿದ್ದು ೨೧…
  • March 25, 2017
    ಬರಹ: santhosha shastry
      ಕಛೇರಿಯಲ್ಲಿ  ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ, ಸಂತೃಪ್ತಿಗೊಳಿಸಲಾಗದ ಏಕೈಕ  ಇಸಮು ಅಂದರೆ, ಅದು ನಿಮ್ಮ ಬಾಸ್. ನಿಮ್ಮ ಕೆಲಸದಲ್ಲಿ ತಪ್ಪು ಹುಡುಕುವ ಏಕೈಕ ಉದ್ದೇಶಕ್ಕೆ ಜನಿಸಿರುವ ಮಹಾನುಭಾವನೇ  ಈ ನಮ್ಮ ಬಾಸ್.  200% ಸರಿಯಾದ  assignment…
  • March 24, 2017
    ಬರಹ: shivaram_shastri
    ಆತ್ಮೀಯರೇ, ನನ್ನ ತಂದೆ ವೇದಮೂರ್ತಿ ಸುಬ್ರಹ್ಮಣ್ಯ ಶಿವರಾಮ ಶಾಸ್ತ್ರಿಗಳು ಮಾರ್ಚ್ ೮, ೨೦೧೭ ರಂದು ಉಂಚಗೇರಿ, ಹೊನ್ನಾವರದಲ್ಲಿ ತಮ್ಮ ಕೊನೆಯುಸಿರೆಳೆದರು. ನಾನು ಕಳೆದ ಆರೇಳು ತಿಂಗಳಿಂದ ಅವರ ಜೊತೆಯೇ ಇದ್ದೆ. ಕೊನೆಯ ಕೆಲವು ದಿನಗಳಲ್ಲಿ ಅವರ…
  • March 23, 2017
    ಬರಹ: nvanalli
    ಬೆಳ್ತಂಗಡಿಯ ತಹಸೀಲ್ದಾರರು ಒಮ್ಮೆ ಕೇಳಿದರು. "ಏಳ್ನೀರಿಗೆ ಬರುತ್ತೀರಾ" ಅಂತ. "ಏನು ವಿಶೇಷ" ಅಂದೆ. "ಅದೊಂದು ತ್ರಿಶಂಕು ಸ್ವರ್ಗ" ಎಂದರು!   ಒಂದು ರೀತಿಯಲ್ಲಿ ಅದು ಸ್ವರ್ಗವೇ. ಎಲ್ಲಿ ನೋಡಿದರೂ ಹಸಿರಿನ ಕಣಿವೆಗಳು. ಜಾರಿ ಜಾರಿ ಬೀಳುವ…
  • March 22, 2017
    ಬರಹ: Sachin LS
    ಇತ್ತೀಚಿನ ದಿನಗಳಲ್ಲಿ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಗಳು ಮೂಡುತ್ತಿರುವ ವಿಷಯ ಎಲ್ಲರ ಗಮನಕ್ಕೂ ಬಂದಿರುತ್ತದೆ. ಒಂದೊಂದಾಗಿ ಅಪ್ಪಳಿಸುತ್ತಿರುವ ಅಲೆಗಳಲ್ಲಿ, ಇದೀಗ ನಮ್ಮನ್ನು ಮುಟ್ಟಿರುವ ಅಲೆ 'ಶುದ್ಧಿ'. ಸಮಾಜವನ್ನು ಶುದ್ದೀಕರಿಸುವ…
  • March 22, 2017
    ಬರಹ: H.N Ananda
    "ಕೌನ್ ಬನೇಗ ಕ್ರೋರ್ ಪತಿ?" ಎಲ್ಲರಿಗೂ ಗೊತ್ತು. ಆದರೆ "ಕೌನ್ ಬನಾಯೇಗಾ ಕ್ರೋರ್‍ಪತಿ?" ಎಂದರೆ ಉತ್ತರಕ್ಕೆ ತಡಕಾಡಬೇಕಿಲ್ಲ. ಈಮೇಲ್ ಮತ್ತು ಎಸ್.ಎಂ.ಎಸ್.ಗಳು ನಮ್ಮನ್ನು ಆಗಾಗ್ಗೆ ಕ್ರೋರ್‍ಪತಿಗಳನ್ನಾಗಿ ಮಾಡುತ್ತವೆ. ಅಥವಾ ಮಾಡುವ…
  • March 20, 2017
    ಬರಹ: nandakishore_bhat
    http://epaper.udayavani.com/home.php?edition=Mahila%20Sampada&date=2017-... ಈ ಲೇಖನದಲ್ಲಿ ನನ್ನ ಗೆಳೆಯ ಗಣೇಶ್ ಸರ್ಕಾರಿ ಕನ್ನಡ ಶಾಲೆಗಳ ದುರವಸ್ಥೆಯನ್ನು ಮನಂಬುಗುವಂತೆ ವಿವರಿಸಿದ್ದಾರೆ. ನಾನು ವಾಸವಿರುವುದು ಮಂಗಳೂರಿನ…
  • March 18, 2017
    ಬರಹ: nageshtalekar
    ಬಾನ ಹಾದಿಯಲ್ಲಿ ಸೂರ್ಯ ನಿಧಾನವಾಗಿ ಮೇಲೆ ಬರುವಂತೆ, ಸಕಾರಾತ್ಮಕ ಆಲೋಚನೆ ಹೊಂದವರು ನಿಧಾನವಾಗಿ ಒಂದೊಂದಾಗಿ ಯಶಸ್ಸಿನ ಮೆಟ್ಟಲನ್ನು ಏರುತ್ತಾರೆ. ಆತ್ಮ ವಿಶ್ವಾಸ , ನಿರ್ದಿಷ್ಟ ಗುರಿ, ಸಾಧಿಸುವ ಛಲ ಹಾಗೂ ಸತತ ಪ್ರಾಮಾಣಿಕ ಪ್ರಯತ್ನ ಬೇಕು. -…
  • March 18, 2017
    ಬರಹ: nageshtalekar
    ಅಕ್ಕ ಪಕ್ಕ ಅರಳಿದ ಹೂ ಗಳಿಗೆ ಪರಸ್ಪರ ಪೈಪೋಟಿ ಇರುವದಿಲ್ಲ. ಮಹಿಳೆಯರು ಯಾಕೆ ಮತ್ತೊಬ್ಬ ಮಹಿಳೆಯ ಸೌಂದರ್ಯ ನೋಡಿ ಅಸೂಯೆ ಪಡುತ್ತಾರೆ ? - ನಾಗೇಶ್ ತಳೇಕರ್