ತರಕಾರಿ ಕಟ್ಲೇಟ್

ತರಕಾರಿ ಕಟ್ಲೇಟ್

ಬೇಕಿರುವ ಸಾಮಗ್ರಿ

ಆಲೂಗೆಡ್ಡೆ - ೨, ಕತ್ತರಿಸಿದ ಈರುಳ್ಳಿ ಅರ್ಧ ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೪ ಚಮಚ, ಕತ್ತರಿಸಿದ ಪುದೀನಾ ಸೊಪ್ಪು - ೨ ಚಮಚ, ಮೆಣಸಿನ ಹುಡಿ - ೧ ಚಮಚ, ಎಣ್ಣೆ - ೧ ಕಪ್, ಅರಸಿನ - ಅರ್ಧ ಚಮಚ, ಬಟಾಣಿ ಕಾಳುಗಳು - ಅರ್ಧ ಕಪ್, ಕಡಲೆ ಹಿಟ್ಟು - ೧ ಕಪ್, ಅಕ್ಕಿ ಹಿಟ್ಟು ಅರ್ಧ ಕಪ್, ಜೀರಿಗೆ ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ

ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಮಸೆದಿಟ್ಟುಕೊಂಡಿರಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ ಕ್ರಮವಾಗಿ ಅರಸಿನ, ಜೀರಿಗೆ, ಮೆಣಸಿನ ಹುಡಿ, ಈರುಳ್ಳಿ, ಬಟಾಣಿ ಕಾಳುಗಳನ್ನು ಹಾಕಿ ಬಾಡಿಸಿ. ಈ ಮಿಶ್ರಣಕ್ಕೆ ಬೇಯಿಸಿದ ಆಲೂಗೆಡ್ಡೆ, ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಉಪ್ಪು ಸೇರಿಸಿ ಕಲಕಿ ಒಲೆಯಿಂದ ಕೆಳಗಿಳಿಸಿ.

ತಣಿದ ಮೇಲೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಸೇರಿಸಿ ನೀರು ಹಾಕಿ ವಡೆಯ ಹದಕ್ಕೆ ಕಲಸಿ. ಮಿಶ್ರಣದಿಂದ ಸ್ವಲ್ಪ ಹಿಟ್ಟು ತೆಗೆದು ಚಿಕ್ಕ ಚಿಕ್ಕ ಉಂಡೆಗಳನ್ನು ವಡೆಯಾಕಾರದಲ್ಲಿ ತಟ್ಟಿ ಕಾದ ಕಾವಲಿಯ ಮೇಲೆ ಎಣ್ಣೆ ಸವರಿ ಎರಡು ಬದಿಗಳನ್ನು ಹೊಂಬಣ್ಣ ಬರುವವರೆಗೆ ಬೇಯಿಸಿದರೆ ಗರಮಾ ಗರಮ್ ಕಟ್ಲೆಟ್ ರೆಡಿ. ಟೊಮೆಟೋ ಸಾಸ್ ಅಥವಾ ಪುದೀನಾ ಚಟ್ನಿ ಜೊತೆ ಸವಿಯಲು ಹಿತಕರ.