ನುಗ್ಗೆ ಸೊಪ್ಪಿನ ಚಿತ್ರಾನ್ನ

ನುಗ್ಗೆ ಸೊಪ್ಪಿನ ಚಿತ್ರಾನ್ನ

ಬೇಕಿರುವ ಸಾಮಗ್ರಿ

ಬೆಳ್ತಿಗೆ ಅನ್ನ ೨ ಕಪ್, ನುಗ್ಗೆ ಸೊಪ್ಪು ೧/೨ ಕಪ್, ತೆಂಗಿನ ತುರಿ ೧/೨ ಕಪ್, ಈರುಳ್ಳಿ ೧, ಹಸಿಮೆಣಸಿನಕಾಯಿ ೩, ಒಣಮೆಣಸು ೨, ಸಾಸಿವೆ ೧ ಚಮಚ, ಅರಸಿನ ಪುಡಿ ೧/೨ ಚಮಚ, ಎಣ್ಣೆ ೪ ಚಮಚ, ನೆಲಗಡಲೆ ೨ ಚಮಚ, ಕರಿಬೇವು ೨ ಎಸಳು, ನಿಂಬೆರಸ ೧ ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ

ನುಗ್ಗೆ ಸೊಪ್ಪು, ತೆಂಗಿನ ತುರಿ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆ ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ, ಒಣಮೆಣಸು, ನೆಲಕಡಲೆ, ಈರುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ಹುರಿದು ಅರಸಿನ, ಕರಿಬೇವು, ರುಬ್ಬಿದ ಮಿಶ್ರಣ ಹಾಕಿ ಫ್ರೈ ಮಾಡಿ. ನಂತರ ಅನ್ನ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ನಿಂಬೆರಸ ಹಾಕಿ ಮಗುಚಿ ಕೆಳಗಿಳಿಸಿ. ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಈ ಚಿತ್ರಾನ್ನ ಆರೋಗ್ಯಕ್ಕೆ ತುಂಬ ಒಳ್ಳೆಯದು.

-ಸಹನಾ ಕಾಂತಬೈಲು, ಮಡಿಕೇರಿ