July 2020

 • July 31, 2020
  ಬರಹ: Shreerama Diwana
  ನನ್ನ ನಿನ್ನ ಸ್ನೇಹಕ್ಕೆ ಹೊಸ ಭಾಷ್ಯ ಬರೆಯಲು ಈ ಮನುಜನಿಂದ ಎಂದೂ ಆಗದು   ನಾವಿಬ್ಬರೂ ಬೇರೆ ಬೇರೆ ಜಾತಿ ಆದರೂ ಒಗ್ಗಟ್ಟಿನಿಂದ ಆಡುವೆವು ಮನುಜನೇಕೆ ಜಾತಿ ಒಂದಾದರು ದ್ವೇಷದಿಂದ ಸಾಯುವನು   ಬಾಯಿ ಬರದ ಪ್ರಾಣಿಗಳಿಗಿಲ್ಲದ ಮತ್ಸರ ಮನುಜನನ್ನೇಕೆ…
 • July 31, 2020
  ಬರಹ: Ashwin Rao K P
  ನಿಮಗೆಲ್ಲಾ ಮಹಾಭಾರತದಲ್ಲಿ ಕರ್ಣ ಗೊತ್ತು. ಆದರೆ ಅವನ ಪತ್ನಿಯರ ಬಗ್ಗೆ ಗೊತ್ತಾ? ಪಾಂಡವರ ಪತ್ನಿ ದ್ರೌಪದಿ, ಅರ್ಜುನನ ಪತ್ನಿಯರಾದ ಸುಭದ್ರ, ಉಲೂಪಿ, ಚಿತ್ರಾಂಗದ ಹಾಗೂ ಭೀಮನ ಪತ್ನಿಯಾದ ಹಿಡಿಂಬೆಯ ಬಗ್ಗೆ ಎಲ್ಲಾ ಕೇಳಿ ಅಥವಾ ಚಿತ್ರಗಳಲ್ಲಿ ನೋಡಿ…
 • July 31, 2020
  ಬರಹ: Shreerama Diwana
  ಲಿಖಿತವಾಗಿ ದೂರು ಕೊಟ್ಟು ಚಕಿತಗೊಂಡ ಮನದಿ ಪುಟ್ಟು ತಾಯಿ ಬಂದು ನೋಡಲೆಂದು ಬಾಯಿ ಬಿಟ್ಟು ನಗುವನಿಂದು   ಓದಲಾಗದವನ ಬರಹ ಸಾಧಿಸದೆಯೆ ಬಿಡನು ಕಲಹ ಗೆರೆಯನೆಳೆದು ಗೀಚಿಕೊಂಡು ಬರೆದೆನೆಂದು ಹೇಳಿಕೊಂಡು   ಅಕ್ಕನನ್ನು ಹೊಡೆವನಿವನು…
 • July 30, 2020
  ಬರಹ: ವಿಶ್ವನಾಥ ಎನ್. …
  ಕಡಲನ್ನು ಹುಚ್ಚೆಬ್ಬಿಸಿದ ಚಂದ್ರಮ ಮತ್ತೆ ಒಂದು ತಿಂಗಳು        ನಾಪತ್ತೆ ************************************** ಮಗು ಹುಟ್ಟಿತು ತಂದೆಯೂ ಹುಟ್ಟಿದ ತಾಯಿ ಮತ್ತೆ ಹುಟ್ಟಿದಳು ************************************** ಹೂವರಳುವಿಕೆ…
 • July 30, 2020
  ಬರಹ: Shreerama Diwana
  ಒಂದೇ ಚಿತ್ರಕ್ಕೆ ಎರಡು ಕವನಗಳನ್ನು ಕವಯತ್ರಿ ಶ್ರೀಮತಿ ಲತಾ ಬನಾರಿ ಹಾಗೂ ಶ್ರೀ ಶಂಕರಾನಂದ ಹೆಬ್ಬಾಳ ಇವರು ರಚಿಸಿದ್ದಾರೆ. ಚಿತ್ರ ಒಂದೇ ಆದರೂ ಕವನಗಳ ಭಾವಗಳು ಬೇರೆ ಬೇರೆ. ಕವನ ೧ *ಕುಂಬಾರನ ಬದುಕು* ಖಂಡ ಪರಶುವ ಮನದಿ ನೆನೆಯುತ ಮಂಡಿಯೂರುತ…
 • July 29, 2020
  ಬರಹ: Shreerama Diwana
  ಚೆಲುವಿನ ಸಿರಿಯಾಗಿ ವದನದಲಿ ನಗುವನು ಹರಿಸುವೆ | ಒಲವಿನ ಬುಗ್ಗೆಯಾಗಿ ನಯನದಲಿ ಕಾಂತಿಯನು ಹೊಮ್ಮಿಸುವೆ ||   ಬಳಿಯಲ್ಲಿ ನೀನಿರಲು ಸುರಲೋಕವೆ ಅಂಗೈಯಲ್ಲಿ ಕುಣಿದಿದೆ| ಇಳೆಯಲಿ ಕೊನರಿದ ಹಸಿರಿನ ತರುವನು ಬಣ್ಣಿಸುವೆ ||   ನಾದದಲಿ ಆಲಾಪವ ಮಾಡುತಲಿ…
 • July 29, 2020
  ಬರಹ: Ashwin Rao K P
  ಅಜಮಿಳ ಎಂಬ ಪಾತ್ರವು ನೇರವಾಗಿ ಮಹಾಭಾರತದ ಕತೆಗೆ ಸಂಬಂಧಿಸಿದಲ್ಲದೇ ಇದ್ದರೂ ವೇದವ್ಯಾಸರು ರಚಿಸಿದ ಭಾಗವತ ಪುರಾಣಗಳಲ್ಲಿ ಅದರ ಉಲ್ಲೇಖವಿದೆ. ಅಜಮಿಳ ಎಂಬ ಪಾತ್ರವು ನಮಗೆ ನಮ್ಮ ಜೀವನದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು, ಸತ್ಕರ್ಮಗಳನ್ನು…
 • July 29, 2020
  ಬರಹ: Ashwin Rao K P
  ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ರೋಹಿತ್ ಅವರ ಬರಹಗಳು…
 • July 28, 2020
  ಬರಹ: ರಘುರಾಮ ರಾವ್ ಬೈಕಂಪಾಡಿ
  ಬದುಕಿಗೆ ಕಣ್ಣನಿತ್ತೆ ಬೆಳಕನಿತ್ತೆ    ಬಣ್ಣ ಬೆಡಗು ಸಂಭ್ರಮ! ಬೆರೆಸಿ ಮಣ್ಣ ನೀರು ಗಾಳಿ    ಹೂವು ಹಣ್ಣು ಘಮಘಮ!   ಹಿಡಿಯುವಷ್ಟು ಸುರಿಯುತಿರುವೆ    ತೆರೆದ ಎದೆಯ ಬೊಗಸೆಗೆ ಮೇರೆಯೆಲ್ಲಿ  ನಿನ್ನ  ಒಡಲ   ಕಂ ಪು  ಸೊಂಪು ಸೊಗಸಿಗೆ!?   ತೀರದಂಥ…
 • July 28, 2020
  ಬರಹ: Ashwin Rao K P
  ಅರ್ಜುನ ಮತ್ತು ನಾಗ ಕನ್ಯೆ ಉಲೂಪಿಯ ಮಗನೇ ಇರಾವಣ್. ಇವನಿಗೆ ಐರಾವಣ, ಅರಾವಣ ಎಂಬ ಹೆಸರುಗಳೂ ಇವೆ. ನೀವು ಈಗಾಗಲೇ ಅರ್ಜುನ ಮತ್ತು ಉಲೂಪಿಯ ವಿವಾಹದ ಕತೆಯನ್ನು (ಭಾಗ ೭) ಓದಿರುತ್ತೀರಿ. ಅವರ ಮಗನೇ ಇರಾವಣ್. ಇವನು ಅತ್ಯಂತ ಸಮರ್ಥ ವೀರ ಯೋಧ ಹಾಗೂ…
 • July 28, 2020
  ಬರಹ: Shreerama Diwana
  ಇಲಕಲ್ಲ ಸೀರಿ ಉಟ್ಕೊಂಡ ನಾರೀರು  ಮದುವಿ ಛತ್ರಕ ಹೊಂಟಾರ ಹೆಣ್ಣಿನ ಕಡಿ ಮಂದಿಯೆಲ್ಲ  ಕಣ್ ಕಣ್ ಬಿಟ್ಕಂಡ ನೋಡ್ಯಾರ   ಮದುವಣಗಿತ್ತಿ ಮೊಗದಾ ನಾಚಿಕಿ  ಇವರಾ ಮಾರಿಗಿ ಬಂದಾವ ನಾಗರದಷ್ಟಕ ಉದ್ದದ ವೇಣಿಯು  ಬೆನ್ನಿಲಿ ನಾಟ್ಯ ಆಡ್ಯಾವ   ಹತ್ತಿರ…
 • July 27, 2020
  ಬರಹ: addoor
  ಟುನಾ ಮತ್ತು ಟುನಿ ಎಂಬ ಹೆಸರಿನ ಎರಡು ಟುವ್ವಿ ಹಕ್ಕಿಗಳಿದ್ದವು. ಅವು ಹಲಸು ಮರದಿಂದ ಪೇರಲೆ ಮರಕ್ಕೆ, ಅಲ್ಲಿಂದ ನೇರಳೆ ಮರಕ್ಕೆ - ಹೀಗೆ ಮರದಿಂದ ಹಾರುತ್ತಾ ದಿನಗಳೆಯುತ್ತಿದ್ದವು. ಯಾವಾಗಲೂ “ಫ್ರುಟ್ ಫ್ರುಟ್, ಫ್ರುಟ್ ಫುಟ್" ಎಂದು…
 • July 27, 2020
  ಬರಹ: shreekant.mishrikoti
  ಮಲೆಯಾಳಂ ಭಾಷೆಯಲ್ಲಿ  ಗಾಯಕ ಜೇಸುದಾಸ್ ಅವರ ಒಂದು ಇಂಪಾದ ಹಾಡು -  'ನೀರ್ಮಿಳಿ ಪೀಲಿಯಲ್ ನೀರ್ಮಣಿ ತುಳುಂಬಿ'.     ಇದನ್ನು  ಇಲ್ಲಿ ಕೇಳಿ - https://youtu.be/kgLN-Z_YhzI ಇದರ ಅರ್ಥ  ಇಂಗ್ಲೀಷಿನಲ್ಲಿ  https://lyricstranslate.com/…
 • July 27, 2020
  ಬರಹ: Ashwin Rao K P
  ಉಲೂಪಿ ಜೊತೆ ಜೊತೆಯಲ್ಲೇ ಸಾಗಿ ಬರುವ ಇನ್ನೊಂದು ಮಹಾಭಾರತದ ಪಾತ್ರವೆಂದರೆ ಚಿತ್ರಾಂಗದ. ಅರ್ಜುನನ ಮೂರನೇ ಪತ್ನಿ. ಇವಳನ್ನೂ ಅರ್ಜುನ ಅವನ ದೇಶಾಂತರದ ತೀರ್ಥಯಾತ್ರೆಯ ಸಮಯದಲ್ಲೇ ಮದುವೆಯಾಗುತ್ತಾನೆ. ಇವಳಿಂದ ಭಬ್ರುವಾಹನ ಎಂಬ ಮಗನನ್ನೂ…
 • July 25, 2020
  ಬರಹ: shreekant.mishrikoti
  ಡಾ. ಸರಜೂ ಕಾಟ್ಕರ್  ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.    ಇದೇ ಕಥೆಯ ಚಲನಚಿತ್ರವನ್ನು ನೀವು ಹಿಂದಿ ಭಾಷೆಯಲ್ಲಿ ನೋಡಿರಬಹುದು. ಮರಾಠ ಸಾಮ್ರಾಜ್ಯದ  ಬ್ರಾಹ್ಮಣ ಪೇಶ್ವೆ ಬಾಜಿರಾಯನು ಶೂರ ಧೀರ.…
 • July 25, 2020
  ಬರಹ: ರಘುರಾಮ ರಾವ್ ಬೈಕಂಪಾಡಿ
  ಕಲಕಲ ಚಲಚಲ ಝಳಝಳವೆನ್ನುತ     ಹರಿದಿದೆ ನಿರ್ಝರ ಧಾರೆ ಥಳ ಥಳ ಪಳ ಪಳ ಹೊಳೆದಿವೆ ಬಾನೊಳು     ಸಾಸಿರ ಹೀರಕ ತಾರೆ!   ರುಮು ರುಮು ರುಮು ರುಮು ಬೀಸಿದೆ    ಬಯಲಲಿ    ತಂಗಾಳಿಯ ತನಿ ಲಹರಿ ಕಾನನ    ಕಾನನ ಹೆಣೆದಿರುಳಿನ ಹೂ    ಬೆಳುದಿಂಗಳ…
 • July 25, 2020
  ಬರಹ: Ashwin Rao K P
  ನಾವು ಕೇಳಿದ, ಓದಿದ ಮಹಾಭಾರತದ ಕಥೆಗಳಲ್ಲಿ ಉಲೂಪಿ ಅಥವಾ ಉಲ್ಲೂಪಿಯ ನೇರ ಉಲ್ಲೇಖಗಳು ಕಂಡು ಬರುವುದು ಕಮ್ಮಿ. ಆದರೆ ಉಲೂಪಿಯ ಬಗ್ಗೆ ವಿಷ್ಣು ಪುರಾಣ ಹಾಗೂ ಭಾಗವತ ಪುರಾಣಗಳಲ್ಲಿ ಉಲ್ಲೇಖವಿದೆ. ಉಲೂಪಿ ಓರ್ವ ನಾಗ ಕನ್ಯೆ. ನಾಗ ರಾಜ ಕೌರವ್ಯನ ಮಗಳು…
 • July 24, 2020
  ಬರಹ: addoor
  (“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್. ಕರ್ನಾಟಕ ಸರಕಾರದ ಕಾನೂನು…
 • July 24, 2020
  ಬರಹ: Ashwin Rao K P
  ಕೆಲವು ವರ್ಷಗಳ ಹಿಂದೆ ಭರತಬಾಲಾ ನಿರ್ದೇಶನದಲ್ಲಿ ‘ವರ್ಚುವಲ್ ಭಾರತ್’ ಎಂಬ ಸಂಸ್ಥೆ ಸಾವಿರ ಚಿತ್ರಗಳ ಪ್ರಯಾಣ (A 1000 film journey, one story at a time) ಎಂಬ ಕಿರು ಸಾಕ್ಷ್ಯ ಚಿತ್ರಗಳ ಸರಣಿಯನ್ನು ಪ್ರಾರಂಭಿಸಿತ್ತು. ಈ ಸರಣಿಯಲ್ಲಿ…
 • July 24, 2020
  ಬರಹ: Ashwin Rao K P
  ಆಕರ್ಷಕವಾದ ಹೆಸರನ್ನು ಹೊಂದಿರುವ ೫ ಪೈಸೆ ವರದಕ್ಷಿಣೆ ಎಂಬ ಪುಸ್ತಕವು ವಸುಧೇಂದ್ರ ಇವರ ಸುಲಲಿತ ಪ್ರಬಂಧಗಳ ಸಂಗ್ರಹ. ಸುಲಲಿತ ಪ್ರಬಂಧಗಳನ್ನು ಬರೆಯುವುದರಲ್ಲಿ ವಸುಧೇಂದ್ರ ಇವರದ್ದು ಎತ್ತಿದ ಕೈ. ಈ ಪುಸ್ತಕದಲ್ಲಿ ೨೪ ಪುಟ್ಟ ಪುಟ್ಟ ಪ್ರಬಂಧಗಳಿವೆ…