ಮುದ್ದು ಕಂದ
ಕವನ
ಲಿಖಿತವಾಗಿ ದೂರು ಕೊಟ್ಟು
ಚಕಿತಗೊಂಡ ಮನದಿ ಪುಟ್ಟು
ತಾಯಿ ಬಂದು ನೋಡಲೆಂದು
ಬಾಯಿ ಬಿಟ್ಟು ನಗುವನಿಂದು
ಓದಲಾಗದವನ ಬರಹ
ಸಾಧಿಸದೆಯೆ ಬಿಡನು ಕಲಹ
ಗೆರೆಯನೆಳೆದು ಗೀಚಿಕೊಂಡು
ಬರೆದೆನೆಂದು ಹೇಳಿಕೊಂಡು
ಅಕ್ಕನನ್ನು ಹೊಡೆವನಿವನು
ಮಕ್ಕಳಾಟವಲ್ಲವೇನು
ಚಿಕ್ಕ ಪುಟ್ಟ ತಪ್ಪು ಮಾಡಿ
ಸಿಕ್ಕಿ ಬೀಳುತಾನೆ ನೋಡಿ
ಜಗಳ ಮಾಡುತಾನೆ ನಿತ್ಯ
ನಗಲು ಮಾತ್ರವಿಹುದು ಸತ್ಯ
ಕೋಪವೆಲ್ಲ ಬರಿದೆ ನೆಪವು
ಪಾಪು ನಮ್ಮ ಮನೆಯ ಮಗುವು
ತುಂಟನಿವನು ಸಣ್ಣ ಹುಡುಗ
ತಂಟೆಯನ್ನು ನೋಡಿರೀಗ
ಸಿಟ್ಟು ಮಾಡಲಾರೆ ನಾನು
ಪುಟ್ಟು ನಮ್ಮ ಮುದ್ದು ಮಗನು
✍️ಲತಾ ಬನಾರಿ
(ಉತ್ಸಾಹ ರಗಳೆ)
ರೂಪದರ್ಶಿಗಳು: ಹವಿಕ್ಷ್ ಜೊತೆ ಅಕ್ಕ ಮಾಲ್ವಿ
ಚಿತ್ರ್
