ಶಂಕರಾನಂದ ಹೆಬ್ಬಾಳರ 'ಗಝಲ್'

Submitted by Shreerama Diwana on Wed, 07/29/2020 - 10:45
ಬರಹ

ಚೆಲುವಿನ ಸಿರಿಯಾಗಿ ವದನದಲಿ

ನಗುವನು ಹರಿಸುವೆ |

ಒಲವಿನ ಬುಗ್ಗೆಯಾಗಿ ನಯನದಲಿ

ಕಾಂತಿಯನು ಹೊಮ್ಮಿಸುವೆ ||

 

ಬಳಿಯಲ್ಲಿ ನೀನಿರಲು ಸುರಲೋಕವೆ

ಅಂಗೈಯಲ್ಲಿ ಕುಣಿದಿದೆ|

ಇಳೆಯಲಿ ಕೊನರಿದ ಹಸಿರಿನ

ತರುವನು ಬಣ್ಣಿಸುವೆ ||

 

ನಾದದಲಿ ಆಲಾಪವ ಮಾಡುತಲಿ

ಪ್ರೇಮಗೀತೆ ಹಾಡುವೆನು|

ಮೋದದಲಿ ಷೋಡಸಿಗೆ ಓಲೆಯನು

ಹೃದಯದಿ ಕಳಿಸುವೆ ||

 

ಕಡಲಿನ ಅಲೆಯದು ಉಕ್ಕುತಲಿ

ಭಾವದಲ್ಲಿ ಏರುತಿದೆ|

ಒಡಲಿನ ಪ್ರೀತಿಯನು ಕಂಗಳಂಚಿನ

ನೋಟದಲಿ ತಿಳಿಸುವೆ ||

 

ಇಂದ್ರಲೋಕ ನಾಚುತಿದೆ ತನುವಿನ

ಪ್ರಕಾಶದ ಬೆಳಕಿಗೆ|

ಚಂದ್ರಿಕೆಯಂತೆ ಗಗನದಿ ಹೊಳೆಯುತ

ಅಭಿನವನ ಕುಣಿಸುವೆ||

 

ಶಂಕರಾನಂದ ಹೆಬ್ಬಾಳ. 

 

ಚಿತ್ರ್