ಬಾಂಧವ್ಯ

Submitted by Shreerama Diwana on Fri, 07/31/2020 - 13:56
ಬರಹ

ನನ್ನ ನಿನ್ನ ಸ್ನೇಹಕ್ಕೆ ಹೊಸ ಭಾಷ್ಯ ಬರೆಯಲು

ಈ ಮನುಜನಿಂದ ಎಂದೂ ಆಗದು

 

ನಾವಿಬ್ಬರೂ ಬೇರೆ ಬೇರೆ ಜಾತಿ ಆದರೂ ಒಗ್ಗಟ್ಟಿನಿಂದ ಆಡುವೆವು

ಮನುಜನೇಕೆ ಜಾತಿ ಒಂದಾದರು ದ್ವೇಷದಿಂದ ಸಾಯುವನು

 

ಬಾಯಿ ಬರದ ಪ್ರಾಣಿಗಳಿಗಿಲ್ಲದ

ಮತ್ಸರ

ಮನುಜನನ್ನೇಕೆ ಕಾಡುವುದು

 

ನಮ್ಮಲ್ಲಿ ಪ್ರೀತಿಗೆ ಕೊರತೆ ಇಲ್ಲ

ಓಡಾಡುವೆನು ಮೈಮೇಲೆಲ್ಲಾ

ಮನುಜನೇಕೆ ಹೊಡೆದಾಡುವನು

 

ನಾವು ಹಂಚಿ ತಿಂದು ನಲಿದಾಡುವೆವು

ಮನುಜನೇಕೆ ಕೂಡಿಟ್ಟು ಹಾಳು ಮಾಡುವನು

 

ನಮ್ಮಿಬ್ಬರ ಪ್ರೀತಿಗೆ ದ್ವೇಷದ ಬಿಸಿ ಇಲ್ಲ

ಮನುಜನೇಕೆ ಸದಾ ಕೆಂಡ ಕಾರುವವನು

 

ಬಾಂಧವ್ಯದ ನೆರಳಲ್ಲಿ ಬಾಳಲು ಅನುದಿನ

ಜಗವದು ಸುಂದರ ಪ್ರತಿದಿನ

 

ಆದ ತಿಳಿಯದೆ ಮೂಡನಾಗದಿರು ಮನುಜ

ನೆಮ್ಮದಿಯು ಮರೀಚಿಕೆ ಆಗುವುದು ನಿನ್ನಿಂದ...

 

ಸುಮ ಭಂಡಾರಿ 

 

ಚಿತ್ರ್