ಬೆಳಕಿನ ಹಾಡು (ಬೆಳ್ಳಕ್ಕಿ ಹಾಡು)

ಬೆಳಕಿನ ಹಾಡು (ಬೆಳ್ಳಕ್ಕಿ ಹಾಡು)

ಕವನ

ಬದುಕಿಗೆ

ಕಣ್ಣನಿತ್ತೆ ಬೆಳಕನಿತ್ತೆ

   ಬಣ್ಣ ಬೆಡಗು ಸಂಭ್ರಮ!

ಬೆರೆಸಿ ಮಣ್ಣ ನೀರು ಗಾಳಿ

   ಹೂವು ಹಣ್ಣು ಘಮಘಮ!

 

ಹಿಡಿಯುವಷ್ಟು ಸುರಿಯುತಿರುವೆ

   ತೆರೆದ ಎದೆಯ ಬೊಗಸೆಗೆ

ಮೇರೆಯೆಲ್ಲಿ  ನಿನ್ನ  ಒಡಲ

  ಕಂ ಪು  ಸೊಂಪು ಸೊಗಸಿಗೆ!?

 

ತೀರದಂಥ  ಬಯಕೆ  ಕೂಸು

   ಬೆಳೆದು  ಬೆಳೆದು  ಭರದಲಿ

ಜಗ್ಗುತಿಹುದು  ನಿನ್ನ  ಸೆರಗ

   ನೂರು  ನೂರು  ತರದಲಿ!

 

ಕೊಡುವ  ಕೈಯ್ಯ  ನಡೆಸಿ ನಲಿವ

    ಒಲವಸೀಮ  ಕಾಣದೆ

ಸವಿದ ಸೊಗದ ಗುಂಗಿನೊಳಗೆ

   ಜೀವ  ಬಂದಿ ತುಡಿದಿದೆ!

 

ಮಡಿಲೊಳಿರುವ ಮಗುವು ತಾಯ

   ಮೊಗವ  ತಾನೆ ನೋಡದೆ

ಮಮತೆಯೂಡುತಿರುವ ಹಾಲ

   ಹದುಳಕನ್ಯವಾಗಿದೆ!

 

 ಒಳಗೊಳಗೆ ತಾ ಸೊರಗದೆ?

 

(ವಿಶ್ವಚೇತನ ವ್ಯಕ್ತರೂಪವಾದ 

ನಿಸರ್ಗವು ಮನುಷ್ಯನ ಆನಂದಮಯ ಜೀವನಕ್ಕೆ ಬೇಕಾದ ಎಲ್ಲವನ್ನೂ ಧಾರಾಳವಾಗಿ ನೀಡಿದೆ.ಆದರೆ ಅವನ ಆಸೆಯು ತೆರೆಮರೆಯ ಆ ಚೇತನದ ಪ್ರೀತಿಯ ಮುಖವನ್ನು ಕಾಣದೆ ಒಂದೇ ಸವನೆ ನಿಸರ್ಗವನ್ನು (ತಾಯ ಸೆರಗು) ಪೋಷಿಸುತ್ತಾ ಅನಾಥ ಪ್ರಜ್ಞೆಯಿಂದ ಸೊರಗುವ ಹಠಮಾರಿ ಶಿಶುವಿನಂತಾಗಿದ್ದಾನೆ.

ಚಿತ್ರ: ಶ್ರೀರಾಮ ದಿವಾಣ, ಉಡುಪಿ

ಚಿತ್ರ್