ಒಂದಾನೊಂದು ಕಾಲದಲ್ಲಿ ಜಪಾನಿನಲ್ಲಿ ಗೆನ್‌ಗೊರೊ ಎಂಬ ಹೆಸರಿನವನೊಬ್ಬನಿದ್ದ . ಅವನ ಬಳಿ ಇತ್ತೊಂದು ಮ್ಯಾಜಿಕ್ ಮದ್ದಳೆ.
ಅವನು ಅದರ ಬಲಬದಿ ಬಡಿಯುತ್ತಾ “ಮೂಗು ಉದ್ದವಾಗಲಿ” ಎಂದು ಹೇಳುತ್ತಿದ್ದರೆ ಮೂಗು ಉದ್ದವಾಗುತ್ತಿತ್ತು. ಅದರ ಎಡಬದಿ…
ಚಿಟ್ಟೆಗಳು ವಿಭಿನ್ನವಾದ ದೇಹ ರಚನೆಯಿಂದಾಗಿ ತುಂಬಾ ಆಕರ್ಷಣೀಯ ವಾಗಿರುತ್ತವೆ. ಪ್ರಾಣಿಜಗತ್ತಿನ ಅಪೂರ್ವ ಜೀವಿಗಳಿವು. ಹೂವಿಗೂ ಚಿಟ್ಟೆಗೂ ಪ್ರಕೃತಿಯಲ್ಲಿ ಅವಿನಾಭಾವ ಸಂಬಂಧ. ಹತ್ತಾರು ವಿಧದ ಹೂಗಳನ್ನು ಮನೆಯ ಸುತ್ತ ನೆಟ್ಟು ಬೆಳೆಸಿದರೆ…
ಸಂಭಾಜಿ ನೆಹರ್‍ಕರ್ ಅವರ ಜಮೀನು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿದೆ. ಬರಗಾಲದಿಂದಾಗಿ ಅವರು ಬವಣೆ ಪಟ್ಟಿದ್ದ ವರುಷಗಳು ಹಲವು. ಯಾಕೆಂದರೆ, ಅಲ್ಲಿನ ಸರಾಸರಿ ವಾರ್ಷಿಕ ಮಳೆ ಕೇವಲ ೬೬೬ ಮಿಮೀ. ೨೦೧೪-೧೫ರಲ್ಲಿ ಮರಾಠವಾಡ ಪ್ರದೇಶದಲ್ಲಿ ದಿನನಿತ್ಯದ…
ಗುಂಡನ ಮಗ ಪರೀಕ್ಷೆಯಲ್ಲಿ ಫೈಲಾದ. ಮಗನನ್ನು ಹಿಗ್ಗಾಮುಗ್ಗ ಬಡಿದು ಹಾಕಿದ ಗುಂಡ. ಮಗ ಸಿಕ್ಕಾಬಟ್ಟೆ ಅತ್ತ. ಆಗಲೇ ಮಗ ನಿರ್ಧರಿಸಿದ: ಇನ್ನು ಮುಂದೆ ಚೆನ್ನಾಗಿ ಕಲಿಯುತ್ತೇನೆಂದು.
ಮುಂದಿನ ವರುಷ ಗುಂಡನ ಮಗ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ.…
ಇದೇನು ಹೊಸ ಕೀಟವೆಂದುಕೊಂಡಿರಾ? ತೋಟದ ನಡುವೆ ಅಂಗಿ ಹಾಕದೆ ಹೋದಾಗ ಮೈಗೆ ಏನೋ ಶಾಕ್ ತಗುಲಿದಂತ ಅನುಭವ ಸಾಮಾನ್ಯವಾಗಿ ಎಲ್ಲಾ ಕೃಷಿಕರಿಗೂ ಆಗಿರುತ್ತದೆ. ಮಾವು, ಕೊಕ್ಕೋ ಬೆಳೆಗಳ ಎಲೆಯ ಅಡಿ ಭಾಗದಲ್ಲಿ ಈ ಕೀಟ ಇರುತ್ತದೆ. ಕೆಲವು ಹಸುರು, ಮತ್ತೆ…
ಕರ್ನಾಟಕದ ಕರಾವಳಿಯ ಜಿಲ್ಲೆ ದಕ್ಷಿಣ ಕನ್ನಡ. ಇಲ್ಲಿರುವ ಪದವಿಪೂರ್ವ ಕಾಲೇಜುಗಳು ೧೫೦. ಈ ಕಾಲೇಜುಗಳು ಮಳೆಕೊಯ್ಲಿನ ಹಾಗೂ ಮಳೆನೀರಿಂಗಿಸುವ ರಚನೆಗಳನ್ನು ನಿರ್ಮಿಸಿದರೆ ಅದುವೇ ಜಲಜಾಗೃತಿ ಹಬ್ಬಿಸಬಲ್ಲ ಅಭಿಯಾನ.
ಯಾಕೆಂದರೆ ಅಲ್ಲಿ ಪಿ.ಯು.ಸಿ.…
ಪ್ರತಿ ದಿನವು ತುಸು ವತ್ತು
ಹುಡುಕು ನೀ ಸಂಪತ್ತು
ಅಡಗಿಹುದು ಮನದಾಳದೊಳಗೆ
ಆ ಸಂಪತ್ತಿನಾ ಗಡುಗೆ
ಮನಸೊಂದು ತಿಳಿ ನೀರ ಕೊಳ
ತಲುಪ ಬೇಕಿದೆ ನೀನದರ ತಳ
ಕಲಕದಿರು ಕೊಳದ ನೀರ
ಸರಿಯಾಗಿ ಸಾಗಬೇಕಿದೆ ಬಲು ದೂರ
ನಿನ್ನೊಳಗಣ್ಣ ತೆರೆಯಬೇಕು ನೋಡಲು
ನಮ್…
ಮಹಾಭಾರತದಲ್ಲಿ ಏಕಲವ್ಯನ ಕಥೆ ತುಂಬಾ ಸಂಕ್ಷಿಪ್ತವಾಗಿದೆ. ಆತನ ಭವ್ಯ ಜೀವನದ ದರ್ಶನವನ್ನು ನಮಗೆ ಕೈಲಾಸಂ ತಮ್ಮ 'ಪರ್ಪಸ್' ಎಂಬ ಇಂಗ್ಲಿಷ್ ನಾಟಕದ ಮೂಲಕ ಮಾಡಿಸುತ್ತಾರೆ.
ನಾನು ಪರಿಚಯಿಸುತ್ತಿರುವ ಈ ಪುಸ್ತಕವು ಕೈಲಾಸಂ ಅವರು ಇಂಗ್ಲಿಷ್ನಲ್ಲಿ…
ಮಂಗಳೂರು – ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಣಂಬೂರು ಬಂದರು ದಾಟಿದ ನಂತರ ಸಿಗುವ ಊರು ಹೊಸಬೆಟ್ಟು. ಅಲ್ಲಿನ ಬಸ್‍ನಿಲ್ದಾಣದ ಪಕ್ಕದಲ್ಲಿ ಪೂರ್ವ ದಿಕ್ಕಿಗೆ ಕಾಂಕ್ರೀಟು ರಸ್ತೆಯಲ್ಲಿ ಸುಮಾರು ಅರ್ಧ ಕಿಮೀ ಸಾಗಿದರೆ ಸಿಗುತ್ತದೆ ಶ್ರೀನಗರ…
ಕನ್ನಡದ ಶ್ರೇಷ್ಠ ನಾಟಕಕಾರ ಕೈಲಾಸಂ ಅವರು ಕೆಲವು ನಾಟಕಗಳನ್ನು ಇಂಗ್ಲೀಷ್ನಲ್ಲಿ ಬರೆದಿದ್ದಾರೆ. ಒಂದು ನಾಟಕವನ್ನು ಕೀಚಕನ ಕುರಿತಾಗಿ ಇಂಗ್ಲೀಷಿನಲ್ಲಿ ಬರೆಯುವ ವಿಚಾರ ಇತ್ತು. ಅದರ ಕುರಿತು ಕೆಲವು ಸಂಗತಿಗಳನ್ನು ತಮ್ಮ ಆಪ್ತರೊಬ್ಬರಲ್ಲಿ…
ಗುಜರಾತಿನ ಕೆಲವು ರೈತರು, ಹಲವಾರು ವರುಷಗಳಿಂದ ಆಲೂಗಡ್ಡೆ ಬೆಳೆಯುತ್ತಿದ್ದಾರೆ. ಈ ಬಾರಿ ಮಾತ್ರ ಅವರಿಗೆ ಸಿಡಿಲು ಬಡಿದಂತಾಯಿತು. ಯಾಕೆಂದರೆ, ಅಮೇರಿಕಾದ ದೈತ್ಯ ಕಂಪೆನಿ ಪೆಪ್ಸಿಕೋ ೧೧ ರೈತರ ಮೇಲೆ ೮ ಮೊಕದ್ದಮೆ ಹೂಡಿತು – ತಮ್ಮ ಕಂಪೆನಿಯ…
ಮಂಗಳೂರಿನ ಪ್ರಸಿದ್ಧ ಕಾಲೇಜುಗಳು ಎಂದಾಗ ನೆನಪಿಗೆ ಬರುವ ಹೆಸರುಗಳಲ್ಲಿ ಮುಖ್ಯವಾದದ್ದು, ಇಲ್ಲಿನ ಕೇಂದ್ರಭಾಗವಾದ ಹಂಪನಕಟ್ಟೆಯಲ್ಲಿರುವ "ಗವರ್ನಮೆಂಟ್ ಕಾಲೇಜು". ಇದು ೧೯೯೩ರಲ್ಲಿ “ಯುನಿವರ್ಸಿಟಿ ಕಾಲೇಜ್” ಆಗಿ ಪರಿವರ್ತನೆಗೊಂಡಿದ್ದರೂ, ನನ್ನಂತಹ…
ಮೇಲಿನ ಶೀರ್ಷಿಕೆ ಓದಿದಾಗ ಈಗಿನ ಯುವಕರಿಗೆ ಆಶ್ಚರ್ಯವಾದೀತು. ಆದರೆ ಹಿಂದೆ ೭೦ರ ದಶಕದಲ್ಲಿ ನೀವು ರೇಡಿಯೋ ಬಳಸಬೇಕಾದಲ್ಲಿ ಲೈಸೆನ್ಸ್ ಮಾಡಿಸಕೊಳ್ಳ ಬೇಕಿತ್ತು.
ಇತ್ತೀಚೆಗೆ ಮನೆಯನ್ನು ನವೀಕರಣ ಸಲುವಾಗಿ ಸ್ವಚ್ಛಗೊಳಿಸುತ್ತಿರುವಾಗ ರೇಡಿಯೋ…
ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಜನರ ಉಪಯೋಗಕ್ಕಾಗಿ ಸ್ಥಳವನ್ನು ಗುರುತಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ರಸ್ತೆಗಳ ಮತ್ತು ಸ್ಥಳಗಳ ಹೆಸರನ್ನು ಸುಂದರವಾಗಿ ಬರೆಯಿಸಿ ಹಾಕಿರುತ್ತಾರೆ. ಇದರಿಂದ ಹೊರ ಊರಿನಿಂದ ಬಂದವರಿಗೆ ತುಂಬಾ ಅನುಕೂಲ. ನಮ್ಮ…
"ನಮ್ ಕಡೆ ಹಿಂದಿನ್ ವರ್ಷ ಮಳೇನೇ ಆಗಿಲ್ಲ. ನಿಮ್ ಕಡೆ ಸ್ವಲ್ಪನಾದ್ರೂ ಮಳೆ ಆಗೈತಿ. ನಿಮ್ ತೋಟದಾಗೆ ಮಣ್ ಅಗೆದ್ರೆ ಎಷ್ಟಡಿ ಆಳ ನೀರಿನ್ ಪಸೆ ಇರ್ತದೆ?" ಎಂಬ ಪ್ರಶ್ನೆ ವಿಠಲಾಪುರದ ವೀರಪ್ಪ ಅವರದು.
ನನ್ನೊಂದಿಗಿದ್ದ ಚಿಕ್ಕಮಗಳೂರು ತಾಲೂಕಿನ…
ಮಂಗಳೂರಿನ ಸುಪ್ರಸಿದ್ಧ ವಾರ್ಷಿಕ ಉತ್ಸವ ಕೊಡಿಯಾಲ ತೇರು ಅಥವಾ ಮಂಗಳೂರು ರಥೋತ್ಸವ. ಇದು ಗೌಡಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು (ಕೊಂಕಣಿಗರು) ವರುಷವಿಡೀ ನಿರೀಕ್ಷಿಸುವ ಸಂಭ್ರಮದ ಆಚರಣೆ.
ಇತ್ತೀಚೆಗೆ, ೧ ಫೆಬ್ರವರಿ ೨೦೨೦ರಂದು ಜರಗಿದ ಮಂಗಳೂರು…
ಉತ್ಸವ್ ರಾಕ್ ಗಾರ್ಡನಿಗೆ ೧೧ ಜನವರಿ ೨೦೧೪ರ ಪೂರ್ವಾಹ್ನ ಭೇಟಿಯಿತ್ತಾಗ, ಅದು ಶೈಕ್ಷಣಿಕ ಸಾಂಸ್ಕೃತಿಕ ಪ್ರವಾಸಿ ಕೇಂದ್ರವಾಗಿ ಬೆಳೆದು ಬಂದ ಬಗೆಯನ್ನು ವಿವರಿಸಿದ್ದರು ಅದರ ಸ್ಥಾಪಕ ತಿಪ್ಪಣ್ಣ ಬಸವಣ್ಯೆಪ್ಪ ಸೊಲಬಕ್ಕನವರ್ (ಭಾಗ ೧ ಓದಿ).
ಅಂದು…
ಅಲ್ಲಿ ಎತ್ತಕಂಡರತ್ತ ಆಳೆತ್ತರದ ಮಣ್ಣಿನ ಶಿಲ್ಪಗಳು. ಹಳ್ಳಿ ಬದುಕಿನ ಕಾಯಕಗಳು, ಬೇಸಾಯದ ಕೆಲಸಗಳು, ವಿವಿಧ ಗುಡಿಕೈಗಾರಿಕೆಗಳು, ಹತ್ತಾರು ಜಾನಪದ ಕಲಾಭಂಗಿಗಳು - ಇವೆಲ್ಲದರಲ್ಲಿ ನಿರತರಾಗಿರುವ ವ್ಯಕ್ತಿಗಳ ಶಿಲ್ಪಗಳು. ಪ್ರತಿಯೊಂದು ಶಿಲ್ಪವೂ…