ಪುಸ್ತಕ ನಿಧಿ - 'ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಓದು- ಸೀತಾ ಪರಿತ್ಯಾಗ ಪ್ರಸಂಗ'
ಇತ್ತೀಚೆಗೆ ಸಿ ಪಿ ನಾಗರಾಜ್ ಅವರು ಬರೆದ 'ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಓದು- ಸೀತಾ ಪರಿತ್ಯಾಗ ಪ್ರಸಂಗ' ಎಂಬ ಪುಸ್ತಕವು Archive.org ತಾಣದಲ್ಲಿ ಪುಕ್ಕಟೆಯಾಗಿ ಸಿಕ್ಕಿತು. ಅದನ್ನು ಪುಟ ತಿರುಗಿ ಹಾಕಿದೆನು.
ಈ ಪುಸ್ತಕದಲ್ಲಿ ಸೀತಾ ಪರಿತ್ಯಾಗ ಪ್ರಸಂಗದ ಪಠ್ಯವು ಲಕ್ಷ್ಮೀಶ ಕವಿಯ ಜೈಮಿನಿಭಾರತ ಕಾವ್ಯದಲ್ಲಿ ಇದ್ದಂತೆ ಇದ್ದು ಅದನ್ನು ಆಧಾರಿಸಿದ ನಾಟಕವನ್ನು ಈ ಲೇಖಕರು ಬರೆದಿದ್ದು ಅದರ ಪಠ್ಯವೂ ಅದರ ಪದ ವಿಂಗಡಣೆ ಮತ್ತು ತಿರುಳು ಈ ಪುಸ್ತಕದಲ್ಲಿ ಇದೆ
ಜೈಮಿನಿ ಭಾರತ ಎಂದರೆ ಲಕ್ಷ್ಮೀಶ ಕವಿಯ ಕನ್ನಡ ಮಹಾಭಾರತವು. ಇದು ಹಳೆಗನ್ನಡದಲ್ಲಿದೆ. ಹೆಚ್ಚಿನ ವಿವರ ಈ ಮುಂದೆ ಇದೆ.
ಸಂಸ್ಕೃತ ನುಡಿಯಲ್ಲಿ ಜೈಮಿನಿ ಎಂಬ ಹೆಸರಿನ ಕವಿಯು ರಚಿಸಿದ್ದ `ಜೈಮಿನಿಭಾರತ’ ಕಾವ್ಯದ ವಸ್ತುವನ್ನು ಆಧಾರವಾಗಿಟ್ಟುಕೊಂಡು ಲಕ್ಷ್ಮೀಶ ಕವಿಯು
ಕನ್ನಡದಲ್ಲಿ `ಜೈಮಿನಿ ಭಾರತಕಾವ್ಯವನ್ನು ರಚಿಸಿದ್ದಾನೆ.
ಹಸ್ತಿನಾಪುರದ ರಾಜನಾಗಿದ್ದ ಜನಮೇಜಯನು ಜೈಮಿನಿ ಮುನಿಯನ್ನು
ಕುರಿತು `ಕೌರವರನ್ನು ಜಯಿಸಿ ಪಟ್ಟಕ್ಕೆ ಬಂದ ನಂತರ ಪಾಂಡವರು ಹಸ್ತಿನಾವತಿಯಲ್ಲಿ
ಹೇಗೆ ರಾಜ್ಯವನ್ನು ಆಳಿದರು’ ಎಂಬುದನ್ನು ತಿಳಿಸಿ ಎಂದು ಕೋರಿಕೊಂಡಾಗ,
ಜೈಮಿನಿ ಮುನಿಯು ರಾಜನಾದ ಧರ್ಮರಾಯನು ಅಶ್ವಮೇಧವನ್ನು ಮಾಡಿ,
ಜಗತ್ತೆಲ್ಲವನ್ನೂ ಗೆದ್ದ ಪರಿಯನ್ನು ವಿವರಿಸುತ್ತಾರೆ.
ಇದರಲ್ಲಿ ರಾಮಾಯಣದ ಸೀತಾ ಪರಿತ್ಯಾಗ ಪ್ರಸಂಗವು ಲವಕುಶರೊಡನೆ ಯುದ್ಧದ ಸಂಗತಿ ಏಕೆ ಬರುತ್ತದೆ? ಎಂದರೆ ಧರ್ಮರಾಯನು ಒಂದು ಅಶ್ವಮೇಧಯಾಗವನ್ನು ಮಾಡುವನು. ಅದರ ಅಂಗವಾಗಿ ಅರ್ಜುನನು ತನ್ನ ಮಗನಾದ ಬಬ್ರುವಾಹನನ ಜತೆ ಯುದ್ಧ ಮಾಡಬೇಕಾಗಿ ಬರುತ್ತದೆ. ಆಗ ಸೀತಾ ಪರಿತ್ಯಾಗದ ಸಂಗತಿ ಮತ್ತು ಲವಕುಶರೊಡನೆ ರಾಮನು ಯುದ್ಧ ಮಾಡಿದ ಸಂಗತಿ ಬರುತ್ತವೆ.