ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 03, 2024
ಶತಕದ ಪರಿಧಿಯ ಮಿತಿಯನು ನೆನೆಯದೆ
ಮತಿಯಲಿ ಯೌವನ ಹುರುಪಿನಲಿ
ಸತಿಯನು ನಗಿಸುತ ಪತಿಯವ ನಿಂತಿಹ
ಚ್ಯುತಿಯನು ತಾರದೆ ಒಲವಿನಲಿ
ಹಿಂದಿನ ಬದುಕಿನ ಸುಂದರ ಕ್ಷಣಗಳ
ಚಂದವ ಬಣ್ಣಿಸಿ ಪತಿರಾಯ
ಬಂಧದ ಖುಷಿಯನು ಹೊಂದುತ ಮಡದಿಯು
ಕುಂದದೆ ಬೀರಲು ನಸುನಗೆಯ
ಗಂಡನ ನುಡಿಗಳ ಹೆಂಡತಿ ಆಲಿಸಿ
ತಂದಿರೆ ಲಜ್ಜೆಯ ಮನದಲ್ಲಿ
ಚಂದದ ಒಲವಿನ ನಂದದ ಬೆಳಕಲಿ
ಕಂಡಿತು ಕೆಂಪದು ಮೊಗದಲ್ಲಿ
ಬಳಗವು ಸನಿಹಕೆ ಸುಳಿಯದೆ ಹೋದರು
ಕಳೆದಿರೆ ನೋವಿನ ದಿನದಲ್ಲಿ
ಗೆಲುವನು ತಂದಿದೆ ಬಳುವಳಿ ನೀಡಿದೆ
ಗೆಳೆತನ ಸತಿ ಪತಿ ನಡುವಲ್ಲಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 01, 2024
ಶರಣು ಹರಿಹರ ತನಯಾ
ಮಣಿಕಂಠ ಜ್ಯೋತಿ ಸ್ವರೂಪ
ಕಲಿಯುಗ ವರದಾ ದಯೆ ತೋರೋ
ಅಯ್ಯಪ್ಪ ಕಾಯೊ ತಂದೆ
ನಾ ನಿನ್ನ ನೋಡಲೆಂದೆ
ಇರುಮುಡಿಯ ಹೊತ್ತು ಬಂದೆ
ಬೇಡಿ ದರ್ಶನ ||ಅಯ್ಯಪ್ಪ||
ಉದಯದಲ್ಲಿ ಎದ್ದು ಬೇಗ ಶುದ್ಧನಾಗುವೆ
ಅನ್ನದಾನ ಪ್ರಭುವೆ ನಿನ್ನ ನಿತ್ಯ ನೆನೆಯುವೆ
ನಿನ್ನ ಒಲುಮೆ ದೊರೆತರಾಗ ಬಾಳು ಸಾರ್ಥಕ
ಬಾಳ ನಡತೆ ಶುದ್ಧವಿರಿಸೆ ನೀನು ಪ್ರೇರಕ
ಕಪ್ಪು ಉಡುಗೆ ತೊಟ್ಟು ಕಠಿಣ ವ್ರತವ ಮಾಡಿದೇ
ನಿನ್ನ ಚರಣ ಸೇವೆ ಗೈವ ಆಸೆಯೊಂದಿಗೆ
ಹಗಲು ಇರುಳು ನಿನ್ನ ನಾಮ ಮನದೆ ಪಠಿಸಿದೆ
ಭಕ್ತ ಬಂಧು ದೇವ ನೀನು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 31, 2024
ಮೌನಗಳ ನಡುವೆ
ಮುತ್ತನ್ನು ಬಿತ್ತುವರ
ಕತ್ತು ಕೊಯ್ಯಲು ಬೇಡಿ ಓ ಮನುಜರೆ
ಹತ್ತು ಜನ ಬದುಕುವರೆ
ಸುತ್ತ ಊರಿನಲಿ ಸುಖದಿ
ಮತ್ತೆ ಬೈಯುವಿರಿ ಏಕೆ ಓ ಮನುಜರೆ
ಆ ಪಕ್ಷ ಈ ಪಕ್ಷ ಯಾವುದಾದರೆ ಏನು
ಕೊನೆಯ ಪಕ್ಷ ನಾಡು ಬೆಳಗುತಿರಲೀ ಸಾಕು
ಸ್ವಾರ್ಥಕ್ಕೆ ದುಡಿಯುವವರ ದೂರವಿರಿಸಿರಿ ಇಂದು
ಸಾಮಾನ್ಯರೊಳು ಬೆರೆವವರ ಕೈ ಹಿಡಿಯಿರಿಂದು
ಬಡಜನರ ತೆರಿಗೆಗಳು ಬಡಜನಕೆ ಸೇರಲಿ
ಉಪವಾಸ ಗಿಪವಾಸ ದೂರವಯ್ಯಾ
ಜತನದಿಂ ಕಾಪಿಟ್ಟ ಮಾನಗಳು ಉಳಿಯಲಿ
ಸನ್ಮಾನ ದಾರಿಯೊಳು ಸಾಗಲಯ್ಯಾ
ಯಾರೊ ಹೇಳಿದರೆಂದು ತಲೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 30, 2024
ಗಝಲ್ ೧
ತಾನೇ ಎನ್ನದಿರು ಹಿಂದೆ ಇನ್ನೂ ದೊಡ್ಡವರಿದ್ದಾರೆ
ಗಟ್ಟಿಯಾಗಿ ಇರದಿದ್ದರೆ ಮೆತ್ತಗೆ ತಟ್ಟುವರಿದ್ದಾರೆ
ಮುಖ ಸಡಿಲಿಸಿ ಮಾತನಾಡುವುದ ಕಲಿಯಲಿಲ್ಲವೆ
ಬೆಣ್ಣೆ ಸವರಿದಂತೆ ಇರುವರ ಜೊತೆ ಬಾಗುವರಿದ್ದಾರೆ
ಗುಂಡು ಕಲ್ಲಿನಂತೆ ಯಾವತ್ತೂ ಇರುವೆನೆಂದೆನಬೇಡ
ಕಟ್ಟಿರುವ ಮನವನ್ನು ಹೀಗೆಯೇ ಬೀಳಿಸುವರಿದ್ದಾರೆ
ವಿವಿಧತೆಯಲ್ಲಿ ಏಕತೆಯೆನ್ನುವವರು ಕುರುಡಾಗಿಹರು
ಬರವಣಿಗೆಯಲ್ಲಿನ ಅಂತರಂಗವನ್ನು ಅಳಿಸುವರಿದ್ದಾರೆ
ಜಾಣರಿಂದು ತಮ್ಮದೆನುವ ಮೋಹದಲ್ಲಿದ್ದಾರೆ ಈಶಾ
ಅಶುದ್ಧದ ನಡುವೆಯೂ ನಾವು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 29, 2024
ಹಾಲಿನ ಕಡಲಿನ ಮಥನದ ವೇಳೆ
ಭಾಗ್ಯದ ದೇವತೆ ಉದಿಸಿದೆಯಂತೆ
ಜಗದೋದ್ದಾರಕ ಶ್ರೀ ಹರಿ ಹೃದಯದೆ
ಒಲವಲಿ ನೀನು ನೆಲೆಸಿದೆಯಂತೆ
ತಾವರೆ ಹೂವನು ಕರದಲಿ ಹಿಡಿದು
ಪೂಜಿಸೆ ನಿಂತರು ಭಕ್ತರು ಬಂದು
ಮಾತೆಗೆ ಬಯಸುತ ಸುಪ್ರಭಾತಾ
ಒಲವಲಿ ನೋಡೆಯ ಭಕ್ತಜನರತ್ತ
ಕೋಗಿಲೆ ಹಾಡಿದೆ ಸ್ವಾಗತ ಕೋರಿ
ಹೂಗಳು ಅರಳಿವೆ ಗಂಧವ ಬೀರಿ
ಭಕ್ತಿಯ ವಂದನೆ ಸಲಿಸುವೆ ಮಾತೆ
ಬಾಳನು ಬೆಳಗೂ ಭಾಗ್ಯವಿಧಾತೆ
ಹಸಿವಿನ ಕೂಗದು ತೊರೆಯಲಿ ಧರೆಯ
ಎಲ್ಲರ ಬದುಕಿಗೆ ನೀಡುತ ಭಾಗ್ಯ
ಹೊನ್ನಿನ ಗೆಜ್ಜೆಯ ಸದ್ದನು ಮಾಡುತ
ದರ್ಶನ ನೀಡೆಯ ಓ ಸಿರಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 28, 2024
ಮೇಘವರ್ಣನೆ ಏಕೆ ಈತರ
ಕಾಡುತಿರುವೆಯೊ ಕಂದನೇ
ನಾರಿಮಣಿಗಳು ದೂರು ತಂದಿರೆ
ಹೇಗೆ ಇರುವುದು ಸುಮ್ಮನೆ
ಗಡಿಗೆ ಒಡೆಯುವೆ ಬೆಣ್ಣೆ ಕದಿಯುವೆ
ಎಂಬ ಮಾತನು ನುಡಿವರು
ಜಳಕಕಿಳಿದಿರೆ ತರುಣಿ ನದಿಯಲಿ
ಸೀರೆ ಕದಿಯುವೆ ಎನುವರು
ವಿಷದ ಉರಗವ ಹಿಡಿದು ಬಾಗಿಸಿ
ಶಿರದಿ ಮಾಡಿದೆ ನರ್ತನ
ಒಂದು ಬೆರಳಲಿ ಗಿರಿಯನೆತ್ತಿದೆ
ಎಂದು ಕೊಟ್ಟರು ದೂರನಾ
ಎತ್ತಿಕೊಳ್ಳುತ ಮೊಲೆಯನುಣಿಸಿರೆ
ಸತ್ತು ಬಿದ್ದಳು ಪೂತನಿ
ಮರದ ಕಾಂಡಕೆ ಕಟ್ಟಿ ಬಿಗಿದರೆ
ಸರಿಸಿ ಬಿಟ್ಟೆಯ ಮರವನೇ
ಮಾತೆ ಮಾತಿಗೆ ನುಡಿಯನಾಡದೆ
ಮನದೆ ನಗುವನು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 27, 2024
ಒಲಿದು ಬಾ ಕೃಷ್ಣಯ್ಯಾ
ಎನ್ನ ಕಷ್ಟಕ್ಕಯ್ಯಾ
ಒಡಲ ಬೇಗೆಯ ತಣಿಸು ಬಾರೋ ಎನ್ನಯ್ಯಾ
ಮನದೊಳಗೆ ಹಸಿವಿಲ್ಲ
ನಿನ್ನ ಬಜಿಪಲು ಇಲ್ಲ
ಸೋತು ಹೋಗಿಹೆನಿಂದು ಬಾರೋ ಎನ್ನಯ್ಯಾ
ಸೇವೆಗೈಯಲು ಬಂದೆ
ಮಧ್ಯವರ್ತಿಗಳೆಲ್ಲ
ಒಲುಮೆಯೊಳು ಮನೆಗೆ ಬಾರೋ ಎನ್ನಯ್ಯಾ
ಅಲೆಯುತಿಹೆ ಗುಡ್ಡದಲಿ
ಕಲ್ಲು ಮುಳ್ಳುಗಳೆಡೆಯೆ
ತನುವದುವು ಸೋಲಲು ಬಾರೋ ಎನ್ನಯ್ಯಾ
ಲಾಲಿಸೈ ಪಾಲಿಸೈ
ಮುದ್ದು ಮುರಳೀ ಲೋಲ
ಉಡುಪಿಯೊಳು ಸೇರಿದೆ ಬಾರೋ ಎನ್ನಯ್ಯಾ
ದೀನನಾಗಿಹೆನಿಂದು
ಕಾಪಾಡು ಜಗಬಂಧು
ನೀಲಮೇಘ ಶ್ಯಾಮ ಬಾರೋ ಎನ್ನಯ್ಯಾ
-ಹಾ ಮ ಸತೀಶ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 27, 2024
ಹಗಲಿರುಳೆನ್ನದೆ ಸುರಿದಿಹ ಮಳೆಯದು
ಈದಿನ ಏತಕೊ ಸುರಿದಿಲ್ಲ
ಆಡುವ ವಯಸ್ಸಿನ ಚಿಣ್ಣರ ಮನದಲಿ
ಆಡುವ ಆಸೆಗೆ ಕೊನೆಯಿಲ್ಲ
ವಾರದ ನಂತರ ಒಟ್ಟಿಗೆ ಸೇರಿತು
ಗೆಳೆಯರ ಗುಂಪದು ಸಂತಸದಿ
ಊರಿನ ನಡುವಿನ ಬಯಲಿಗೆ ಬಂದರು
ತೊಡಗಿದರಾಟಕೆ ಖುಷಿಯಲ್ಲಿ
ಬಾನಿನ ಸೂರ್ಯನು ಪಡುವಣ ಕಡಲಿಗೆ
ಇಳಿಯಲು ತೊಡಗಿದ ಸಂಜೆಯಲಿ
ಕತ್ತಲ ಭಯದಲಿ ಆಟವ ನಿಲ್ಲಿಸಿ
ತೆರಳುವ ವೇದನೆ ಮಕ್ಕಳಲಿ
ಆಟವ ಅರ್ಧಕೆ ನಿಲ್ಲಿಸಬೇಕಿದೆ
ಮುಂದಿಹ ತಂಡವು ನೋವಿನಲಿ
ಅರ್ಧವ ನಾಳೆಗೆ ಆಡುವ ಎಂದರು
ಗೆಲ್ಲುವ ಹಂಬಲ ತಂಡದಲಿ||
-ಪೆರ್ಮುಖ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 26, 2024
ಇವನು ಭೃಷ್ಟ ಎನುವನಾತ
ಅವನು ಭೃಷ್ಟ ಎನುವನೀತ
ಯಾರ ಮಾತು ಸತ್ಯವೆಂದು ಅರಿಯದಾಗಿದೆ
ಇಬ್ಬರಲ್ಲು ಹುಳುಕು ಇದ್ದು
ಹೊಡೆದುದೆಲ್ಲ ಜನರ ದುಡ್ಡು
ಯಾರು ಎಷ್ಟು ಹೊಡೆದರೆಂದು ಅರಿಯಬೇಕಿದೆ
ಮುಷ್ಟಿಯೊಳಗೆ ಗುಟ್ಟನಿಟ್ಟು
ವೈರಿಕಡೆಗೆ ನೋಟ ನೆಟ್ಟು
ತನ್ನ ಹೊಲಸು ಕಾರ್ಯಕೆಲ್ಲ ಮಾಡಿ ಸೇತುವೆ
ಇವನಲುಂಟು ಅವನ ಗುಟ್ಟು
ಅವನಲುಂಟು ಇವನ ಜುಟ್ಟು
ಇಬ್ಬರೂನು ಬಿಟ್ಟುಕೊಡರು ಬರಿದೆ ನಾಟಕ
ದೊರೆವ ಹಣದ ಗಂಟಿಗಾಗಿ
ಇವರ ಹಿಂದೆ ಜನರು ಹೋಗಿ
ಅರ್ಥವಿರದ ಮಾತಿಗೆಲ್ಲ ಕರದ ತಾಡನ
ಎಷ್ಟು ಮಾಡಿಕೊಂಡರೇನು
ಕಡೆಗೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 25, 2024
ಕಪ್ಪು ಬಿಳುಪಿನ ಕಾಲ ಸಂದಿದೆ
ಈಗ ಬಣ್ಣದ ಜಗವಿದು
ನೀನು ಏತಕೆ ರೂಪ ಬದಲದೆ
ಹಿಂದಿನಂತೆಯೆ ಉಳಿದುದು
ಹೊಸತು ಕಂಡರೆ ಹಳತು ಮೂಲೆಗೆ
ಸರಿಸಿ ಬಿಡುವರು ಈ ಜನ
ಸೊಗಸಿನೆಲ್ಲವು ತನ್ನದೆನ್ನುತ
ಬಳಸಿ ಎಸೆಯುವ ದುರ್ಗುಣ
ನಿನ್ನ ಸ್ವಂತಿಕೆ ಉಳಿಸಿಕೊಂಡಿಹೆ
ಅದುವೆ ಶ್ರೇಷ್ಠವು ಎನಿಸಿತೆ
ಮನುಜನಂತೆಯೆ ಬಣ್ಣ ಬದಲಿಪ
ಗೀಳು ಬಾರದೆ ಹೋಯಿತೆ?
ಸುತ್ತ ಹಸಿರಿನ ಸಸ್ಯ ತುಂಬಿದೆ
ಹೂವನರಸುತ ಬಂದೆಯಾ
ದಣಿವನಾರಿಸೆ ಕೊಂಚ ಸಮಯಕೆ
ಪಡೆದ ಎಲೆಗಳ ಆಶ್ರಯಾ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ:…