ಸಿರಿದೇವತೆಗೆ ಸುಪ್ರಭಾತ
ಕವನ
ಹಾಲಿನ ಕಡಲಿನ ಮಥನದ ವೇಳೆ
ಭಾಗ್ಯದ ದೇವತೆ ಉದಿಸಿದೆಯಂತೆ
ಜಗದೋದ್ದಾರಕ ಶ್ರೀ ಹರಿ ಹೃದಯದೆ
ಒಲವಲಿ ನೀನು ನೆಲೆಸಿದೆಯಂತೆ
ತಾವರೆ ಹೂವನು ಕರದಲಿ ಹಿಡಿದು
ಪೂಜಿಸೆ ನಿಂತರು ಭಕ್ತರು ಬಂದು
ಮಾತೆಗೆ ಬಯಸುತ ಸುಪ್ರಭಾತಾ
ಒಲವಲಿ ನೋಡೆಯ ಭಕ್ತಜನರತ್ತ
ಕೋಗಿಲೆ ಹಾಡಿದೆ ಸ್ವಾಗತ ಕೋರಿ
ಹೂಗಳು ಅರಳಿವೆ ಗಂಧವ ಬೀರಿ
ಭಕ್ತಿಯ ವಂದನೆ ಸಲಿಸುವೆ ಮಾತೆ
ಬಾಳನು ಬೆಳಗೂ ಭಾಗ್ಯವಿಧಾತೆ
ಹಸಿವಿನ ಕೂಗದು ತೊರೆಯಲಿ ಧರೆಯ
ಎಲ್ಲರ ಬದುಕಿಗೆ ನೀಡುತ ಭಾಗ್ಯ
ಹೊನ್ನಿನ ಗೆಜ್ಜೆಯ ಸದ್ದನು ಮಾಡುತ
ದರ್ಶನ ನೀಡೆಯ ಓ ಸಿರಿ ಮಾತಾ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್