ಕವನಗಳು

ವಿಧ: ಕವನ
September 12, 2024
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು   ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ  ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ    ಕಾಸು ಎಸೆಯುವರ ಮುಂದೆ ಕೈಯೊಡ್ಡುವವರಿರುವವರೆಗೂ ಮಹಾತ್ಮರಿಗೆ ಬೆಲೆಯಿದೆಯೆ ಸ್ವಾತಂತ್ರ್ಯ ಸ್ವ ಹಿತದ ತಂತ್ರವನು ದೇಶದ ಮಂದಿಗೆ ಕಲಿಸಿ ಹೋಗಿದ್ದು ವಿಶೇಷವೆ   ನಾಯಕರು ದೇಶ ಸುತ್ತಬೇಕು ಯಾಕೆಂದರೆ ಒಣಗಿದ ಭೂಮಿಯಲ್ಲೂ ಓಯಸೀಸ್ ಕಂಡುಬರುತ್ತದೆ…
ವಿಧ: ಕವನ
September 11, 2024
ನಾನು ಒಪ್ಪಲೇನಿದೆ ಈ ಭೂಮಿಯ ? ನಾ ಬುವಿಗೆ ಬಂದಾಗಲೇ ಈನ ನೆಲ ನನ್ನ ಬಿಗಿದಪ್ಪಿ ಮುದ್ದಿಸಿದೆ ಹರಸಿ ಸಲಹಿದೆ ಜೀವನದ ದಾರಿಯ ತೋರಿಸಿ ತಾನು ಮರೆಯಲ್ಲಿ ನಿಂತಿದೆ !   ನನ್ನ ತಪ್ಪುಗಳ ಹೇಳುತ್ತಾ ಒಪ್ಪ ದಾರಿಯಲ್ಲಿ ನಡೆಸಿದೆ ಬೆಪ್ಪನಂತ್ತಿದ್ದ ನನಗೆ ಮರುಜನುಮ ನೀಡಿದೆ ಕನಸುಗಳ ಕಳಕೊಂಡ ನನಗೆ ಮತ್ತೆ ಕನಸಿನ ಜೊತೆಗೆ ನನಸುಗಳ ಕೊಟ್ಟಿದೆ !   ಎಡರು ತೊಡರುಗಳ ಎಡೆಯೆ ಸರಿ ದಾರಿಯನು ತೋರಿಸಿದೆ ಹಿಂಸೆಯ ದಾರಿಯ ತುಳಿದವಗೆ ಅಹಿಂಸೆಯ ಮಾರ್ಗವ ಅರುಹಿದೆ ಕಷ್ಟವ ಅರಿತು ಬಾಳುವುದರ ಮನದಾಳಕೆ ಕಲಿಸಿದೆ…
ವಿಧ: ಕವನ
September 10, 2024
ಜೀವದೊಳಗಿನ ಮೊಗ್ಗು ಹೂವಾಗಿ ಅರಳಿರಲು ಸೌಗಂಧ ಸೂಸುತಲೆ ಪ್ರೇಮಿಯಾದೆ ನಗುವಿನಲೆಗಳ ನಡುವೆ ಕಣ್ಣ ನೋಟದ ಬಗೆಗೆ ಹತ್ತಿರಕೆ ಸೇರುತಲೆ ಬೆಸುಗೆಯಾದೆ   ನಿನ್ನ ಪ್ರೇಮದ ನೆಲದಿ ಬಸುರ ಬೀಜವ ಬಿತ್ತಿ ಮೊಳಕೆ ಬರೆ ಪ್ರೀತಿಯಲಿ ಬಿಗಿದಪ್ಪಿದೆ ಸಸಿಯಾಗಿ ಗಿಡವಾಗಿ ಮರವಾಗಿ ಬೆಳೆದಿರಲು ನನ್ನೆದೆಯ ಗುಡಿಯೊಳಗೆ ನೀ ಸೇರಿದೆ   ಚೆಲುವಿನೊಳು ಸತಿಯಾದೆ ಸುಧೆಯ ಹರಿಸುತ ಹೋದೆ ನನ್ನೊಲವ ತನುವಿನೊಳು ಬಂಧಿಯಾದೆ ಮನಸ್ಸಿನೊಳಗಿನ ಮುತ್ತು  ಸೇರುತಲೆ ಸವಿ ಸಮಯ ಸಾಗುತಲೆ ಬದುಕಿನೊಳು ತೃಪ್ತನಾದೆ    -ಹಾ ಮ ಸತೀಶ…
ವಿಧ: ಕವನ
September 09, 2024
ಗಝಲ್ ೧ ಆದಿಪೂಜಿತ ವಂದಿತ ಮೊರೆಯ ಲಾಲಿಸು ಗಣಪನೆ ಮೋದದಿ ಸಲಹುತ ಕಷ್ಟವ ನೀಗಿಸು ಗಣಪನೆ   ಒಲಿದಿರಲು ವಿನಾಯಕನು ವಿಘ್ನಗಳು ಬಲು ದೂರವಾಯಿತಲ್ಲವೆ ಫಲಿಸಲು ಅನವರತ ನಾಲಿಗೆಯಲಿ ಹಾಡಿಸು ಗಣಪನೆ   ಗರಿಕೆಯನು ಅರ್ಪಿಸಿ ಬೇಡುವೆನು ಶ್ರದ್ಧೆಯಲಿ ಏಕದಂತನೆ ಅರಿಯದೆ ಎಸಗಿದ ತಪ್ಪುಗಳ ಸರಿಸು ಗಣಪನೆ   ಆಕಳ ಕ್ಷೀರವನು ನಿನಗೆ ನೈವೇದ್ಯ ಮಾಡುವೆನು ಸಕಲ ಪಾಪಂಗಳ ಕ್ಷಮಿಸುತ ಪಾಲಿಸು ಗಣಪನೆ   ಮೋದಕ ಲಡ್ಡು ಪ್ರಿಯ ಗಣಾಧ್ಯಕ್ಷ ಶಿವೆಯಕಂದ ಸಾಧಕ ಬಾಧಕಗಳ ತೂಗಿ ದಯೆ ತೋರಿಸು ಗಣಪನೆ   ಕಷ್ಟಗಳ ಚಾಪೆಯದು…
ವಿಧ: ಕವನ
September 08, 2024
ಮನದ ಮೂಲೆಯಲಿಂದು ನಿನ್ನ ಕೂರಿಸಿ ನಗುವೆ ನೀ ಸೇರು ನನ್ನೊಳಗೆ ನನ್ನ ಒಲವೆ ಜೀವನದ ದಾರಿಯಲಿ ನಿನ್ನ ನೆನಪಲೆ ಬಂದೆ ಓ ಚೆಲುವೆ ಎಲ್ಲಿರುವೆ ನನ್ನ ಬಲವೆ   ಕನಸುಗಳು ನೂರಾರು ನನ್ನ ಒಡಲಲಿ ಬೆರೆತು ನಿನ್ನ ಒಡಲಿನ ಸುಖಕೆ ಕಾಯುತಿರುವೆ ಪ್ರೀತಿ ಉಸಿರಿನ ಬೆಂಕಿ ಸುತ್ತೆಲ್ಲ ಹರಡಿರಲು ಒಲವ ಸವಿಯುವ ತವಕ ಬೆಯುತಿರುವೆ   ಮೋಸ ಎಲ್ಲಿಯು ಇಲ್ಲ ಮೋಹದಾಟವೆ ಸಖಿಯೆ ಕಾತರದಿ ಕಾದಿರುವೆ ಬಾರೆ ಸವಿಯೆ ಒಡನಾಟ ಹೂನೋಟ ಕಣ್ಣ ಸೆಳೆತದ ಕೂಟ ಸುತ್ತ ಮದನನ ಸೊಬಗು ಕೈಯ ಹಿಡಿಯೆ   ನೀ ಹೊರಟ ಪಥದಲ್ಲೆ ನಾನು…
ಲೇಖಕರು: kavitha@ramesh
ವಿಧ: ಕವನ
September 07, 2024
ನಸುಕು ಚೆಲುವಲಿ  ಲಸಿತ ಬೆಡಗಿದೆ  ಹಸಿರು ಕಂಗಳ ಸೆಳೆದಿದೆ  ಹೊಸತು ಬದುಕಿಗೆ  ಹೊಸೆದ ಕನಸಿಗೆ  ಮುಸುಕು ತೆರೆಸುತ ನಲಿಸಿದೆ  ತಂಪನೆರೆಯುತ   ಕಂಪು ಸೂಸುತ  ಸೊಂಪು ತುಂಬಿದೆ ಬುವಿಯಲಿ  ಇಂಪು ದನಿಯಲಿ  ರಂಪ ಮಾಡುತ   ಪೆಂಪು ತಂದಿದೆ ಹನಿಗಳು ವಿಕಳವಿಲ್ಲದೆ ನಿಖರ ಮನದಲಿ ವಕುಲ ಮರದಡಿ ಚೆಲುವೆಯು  ಅಖಿಲ ವಲ್ಲಭ    ಸಕಲ ಗುಣದವ       ನಿಕಟವಾಗುವ ಕನಸಲಿ  ಸುರಿವ ಮಳೆಯಲಿ  ತರುಣಿ ನೆನೆಯುತ  ಮರದ ಬುಡದಲಿ ಕುಳಿತಿರೆ  ಹರೆಯ ಬಯಸಿದೆ  ಕರವ ಹಿಡಿಯಲು   ವರನ ನೆನಪಿಸಿ ಚಳಿಯಲಿ -ಕಾ ವಿ ರಮೇಶ್…
ವಿಧ: ಕವನ
September 07, 2024
ಭಾದ್ರಪದ ಶುಕ್ಲದ ಚೌತಿ ದಿನವು ಗಣೇಶ ಚತುರ್ಥಿ ಪೂಜೆ ಸಂಭ್ರಮವು ಪೀಠದಲಿ ಕುಳ್ಳಿರಿಸಿ ಆರತಿ ಬೆಳಗುವೆವು ಮೋದಕ ಕಡುಬು ಪಾಯಸ ನೀಡುವೆವು   ಪಾರ್ವತಿಯ ಮೈಕೊಳೆಯ ಸೃಷ್ಟಿ ಕಂದ ಪರಮೇಶ ಸುಕುಮಾರ ಬಹಳ ಅಂದ ಕರಿಮುಖನೆ ಗಣಪನೆ ಮಹದಾನಂದ ಗಜವದನ ಸುಮುಖನೆ ದೇವ ಚಂದ   ಇಡಗುಂಜಿಯಲಿ ನೆಲೆಸಿದ ಬಾಲಗಣಪ ಇಷ್ಟಾರ್ಥ ನೀಡುವ ಹೃದಯವಂತ ಚಂದಗುಳಿ ವಾಸ ಘಂಟೆ ಗಣೇಶ ಸಂತಾನ ಭಾಗ್ಯವನು ನೀಡಿ ಪೊರೆವ   ಆತ್ಮಲಿಂಗವನು ಪ್ರತಿಷ್ಠಾಪಿಸಿದ ವಟುರೂಪಿ  ಅಭಯಹಸ್ತ ಸ್ವರೂಪಿ ಗೋಕರ್ಣ ಮೂರುತಿ ಬಯಲು ಆಲಯದ ಸೌತಡ್ಕ ಸ್ವಾಮಿ…
ವಿಧ: ಕವನ
September 06, 2024
ಒಂದೇ ಬಳ್ಳಿಯಲರಳಿದ ಹೂಗಳು ಒಂದೆಡೆ ಸೇರಿದ ಖುಷಿಗೆ ಅಂದದ ನಸುನಗು ಹೊಮ್ಮಿದೆ ಮೊಗದಲಿ ಚಂದದೆ ನಿಂತರು ನುಡಿಗೆ   ನೀಲಿಯ ಬಣ್ಣದ ಸೀರೆಯನುಟ್ಟರು ಹೋಲುವ ಬಣ್ಣದ ರವಿಕೆ ಬಾಲೆಯರೀರ್ವರ ಶಿರದಲಿ ಗಿಳಿಗಳು ನೀಲಿಯ ವರ್ಣವು ಅವಕೆ   ಹಿರಿಯಳು ಚಂದದಿ ಬಾಚಿದ ತನ್ನಯ ತುರುಬನು ಬಿಗಿದಳು ಮೇಲೆ ಕಿರಿಯವಳೇತಕೊ ಹೆಣೆದಳು ಜಡೆಯನು ಹಿರಿಹಿರಿ ಹಿಗ್ಗುವ ಬಾಲೆ   ಬೇರೆಯೆ ಲೋಕದ ವಾಸಿಗಳಾತರ ತೋರುವರೀರ್ವರು ನಮಗೆ ನಾರೀಯರೀರ್ವರು ಬಂದಿಹರಿಲ್ಲಿಗೆ ದಾರಿಯ ಮರೆಯುತ ಇಳೆಗೆ   ಚಿನ್ನದ ನಗರಿಯು ತವರಾಗಿಹುದೇ…
ವಿಧ: ಕವನ
September 05, 2024
ಗುಡಿ ಗುಡಿಯ ಗಂಟೆ ಢಣ ಢಣನೆ ಢಣಿಸಿ ಮುಂಜಾನೆ ನಗುತ ಬಂತು ಹೊದ್ದಿರುವ ರಾತ್ರಿ ಸುತ್ತೆಲ್ಲ ಕರಗಿ ಹೊಸತನಕೆ ಬೆಳಕ ತಂತು   ಕತ್ತಲೆಯ ಒಳಕೆ ಚಿನ್ನಾಟವಾಡಿ ಹೂಗಳಲಿ ಜೀವ ಬಂತು ಮೃದುವಾದ ಕೈಗೆ  ದಾಟುತಲೆ ಆಗ ಮುಡಿಗಳಿಗೆ  ಹರುಷ ತಂತು    ಸೊಗಸಾಗಿ ಇಂದು ಹಸು ಕರುಗಳೆಲ್ಲ ಬಯಲೀಗೆ ನಲಿದು ಬಂತು ಹಸಿ ಚಿಗುರ ತಿಂದು ನೀರನ್ನು ಕುಡಿದು ತೃಪ್ತಿಯಲಿ ತೇಗ ತಂತು   ಜೀವನದ ಆಟ ಸೊಗಸಾದ ನೋಟ ಪ್ರಕೃತಿಯೊಳು ಹಸಿರು ಬಂತು ರಮಣೀಯ ಹೊಳಪು ಸೃಷ್ಟಿಯಲೆ ಇರಲು ಸೊಬಗಿನೊಳು ಖುಷಿಯ ತಂತು *** ಹನಿ ನಾವು ಭಾರತೀಯರು…
ವಿಧ: ಕವನ
September 04, 2024
ಗಝಲ್ ೧ ಮುಂದೆಯೇ ಹೊಗಳಿ ಸುಮ್ಮನೆ ಹಿಂದಿನಿಂದ ತೆಗಳಬೇಡಿ ಎಲ್ಲವೂ ಸರಿಯಿದ್ದರು ನೀವು ಎದುರಿನಿಂದ ತೆಗಳಬೇಡಿ   ನನ್ನ ಕತ್ತೆಗೆ ಮೂರೇ ಕಾಲೆಂದು ಯಾಕಾಗಿ ಹೇಳುತ್ತೀರೊ ಮಾತುಗಳ ಮೌನದೊಂದಿಗೆ ಒಳಗಿನಿಂದ ತೆಗಳಬೇಡಿ   ನಿಷ್ಠೂರ ನಡೆ ನುಡಿಯಲ್ಲಿ ವ್ಯಂಗ್ಯ ಭರಿತ ಹಾಡುಗಳು ಕಾಸಿನ ಬೆಲೆ ಇರದಿದ್ದರೂ ಹೊರಗಿನಿಂದ ತೆಗಳಬೇಡಿ   ಎಲ್ಲರೂ ದೂರದವರಾದರೆ ಹತ್ತಿರದವರು ಯಾರಯ್ಯ ಚಿತ್ತಾರ ಎಳೆಯುವವರೆಲ್ಲ ಹುರುಪಿನಿಂದ ತೆಗಳಬೇಡಿ   ಒಂದು ಹಂತದಲ್ಲಿ ಮಾತನಾಡು ಒಪ್ಪಿಕೊಳ್ಳುವೆ ಈಶಾ ಹೊಗಳುತ್ತಲೆ ನಿಮ್ಮೊಳಗಿನ…