ಮನದ ಮೂಲೆಯಲಿಂದು…

ಮನದ ಮೂಲೆಯಲಿಂದು…

ಕವನ

ಮನದ ಮೂಲೆಯಲಿಂದು ನಿನ್ನ ಕೂರಿಸಿ ನಗುವೆ

ನೀ ಸೇರು ನನ್ನೊಳಗೆ ನನ್ನ ಒಲವೆ

ಜೀವನದ ದಾರಿಯಲಿ ನಿನ್ನ ನೆನಪಲೆ ಬಂದೆ

ಓ ಚೆಲುವೆ ಎಲ್ಲಿರುವೆ ನನ್ನ ಬಲವೆ

 

ಕನಸುಗಳು ನೂರಾರು ನನ್ನ ಒಡಲಲಿ ಬೆರೆತು

ನಿನ್ನ ಒಡಲಿನ ಸುಖಕೆ ಕಾಯುತಿರುವೆ

ಪ್ರೀತಿ ಉಸಿರಿನ ಬೆಂಕಿ ಸುತ್ತೆಲ್ಲ ಹರಡಿರಲು

ಒಲವ ಸವಿಯುವ ತವಕ ಬೆಯುತಿರುವೆ

 

ಮೋಸ ಎಲ್ಲಿಯು ಇಲ್ಲ ಮೋಹದಾಟವೆ ಸಖಿಯೆ

ಕಾತರದಿ ಕಾದಿರುವೆ ಬಾರೆ ಸವಿಯೆ

ಒಡನಾಟ ಹೂನೋಟ ಕಣ್ಣ ಸೆಳೆತದ ಕೂಟ

ಸುತ್ತ ಮದನನ ಸೊಬಗು ಕೈಯ ಹಿಡಿಯೆ

 

ನೀ ಹೊರಟ ಪಥದಲ್ಲೆ ನಾನು ಹೊರಟಿಹೆನಿಂದು

ಕೊನೆಯ ಕೋಣೆಯಲಿಂದು ಗೆಜ್ಜೆ ದನಿಯು

ಅಲ್ಲೆ ಪಕ್ಕದಲಿರುವೆ ಪಿಸು ಮಾತ ಆಲಿಸಲು

ನಾ ಬಂದು ಸೇರುವೆನು ನಿನ್ನ ಚೆಲುವೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್