ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 22, 2024
ಗಝಲ್ ೧
ಎನ್ನ ಮನದ ಗುಡಿಯ ಒಳಗೆ ನೀನು ಬಂದು ನೆಲೆಸೆಯಾ
ಮೌನ ಬಿಡುತ ಸೆಡವು ಮರೆತು ದ್ವೇಷ ಕೊಂದು ನೆಲೆಸೆಯಾ
ಎಲ್ಲೊ ಇದ್ದ ನನ್ನನಾಗ ಕರೆದು ಸನಿಹ ಕೂರಿಸಿದೆ
ಬಿಟ್ಟ ಭಾವ ನೂರು ಇರಲಿ ದೋಷ ಬೆಂದು ನೆಲೆಸೆಯಾ
ಹೊಸತು ಜನುಮ ಬೇಡವೆಂದು ದೂರ ಹೋಗಿ ಕುಳಿತೆಯೊ
ಹಳತಿನೊಳಗೆ ಹರೆಯವಿರಲು ಮದದ ಮುಂದು ನೆಲೆಸೆಯಾ
ಪ್ರಕೃತಿ ಒಳಗೆ ಪ್ರೇಮ ಇಹುದು ಅರಿತು ಇರದೆ ನಡೆದೆಯ
ಜೀವ ನಯನ ಮೋಹದೊಳಗೆ ಸೇರಿ ಇಂದು ನೆಲೆಸೆಯಾ
ಕತೆಯ ಹಿಂದೆ ಒಲವ ಮುಂದೆ ಸಾಗುತಿರುವ ಈಶಾ
ಜತನದಿಂದ ಕಾಯ್ದ ಮನವ ಹಾಗೆ ತಂದು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 21, 2024
ಸವಿಯಿರುವ ಬದುಕಲ್ಲಿ ಮುನ್ನುಗ್ಗಲರಿತೆನು
ಕವಿದಿರುವ ಮೋಡವದು ಕರಗಿರುವ ಹಾಗೆ
ಜೀವನದಿ ಪಾಠಗಳ ಕಲಿಯುತಿರುವೆ ಹೀಗೆ
ಪಾವನವು ಈ ಜೀವ ಎಂಬುವುದ ತಿಳಿದಿಹೆನು
ಏತರದ ಹವ್ಯಾಸವೊ ಈಜಿ ದಡ ಸೇರಿರಲು
ಕಾರಣವ ಅರಿಯುತ್ತ ಮುನ್ನಡೆಯುತಿರಬೇಕು
ಕನಸುಗಳ ತೀರದಲಿ ಕುಳಿತುಬಿಡಬೇಕು
ಭಾವನೆಯ ಮಡಿಲಲ್ಲಿ ನನಸುಗಳು ಸಿಗಲು
ಯಾವ ತೆರದಲಿ ಗಂಧವದು ಹೇಗಿದ್ದರೇನಿಂದು
ಚೈತ್ರದುದಯಕೆ ಅದುವೆ ಸಾಕಲ್ಲ ತಿಳಿಯಿಂದು
ದಾರಿ ಸಾಗಲೆ ಬೇಕೆ ನಡೆಯುತಿರು ತಲೆಬಾಗಿ
ತೇರನೆಳೆವ ಸಮಯ ಸನಿಹದಲೆಯಿರಲು
ಸಂಘರ್ಷವೆ ಜೀವನದ ಅಂತರ್ಯ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 20, 2024
ನನ್ನ ನಾಲಿಗೆಗೆ ಬರಲಿ
ನಿಂತಾಗ ನಲಿವಾಗ
ಕುಣಿವಾಗ ಪದವಾಗ
ಮನಸ್ಸು ನಿನ್ನಲ್ಲೇ ಇರಲಿ
ಊರಲ್ಲಿ ಇರುವಾಗ
ಕಾಯಕವ ಗೈದಾಗ
ನಿನ್ನೊಳಗೆ ನಾನೇ ಇರಲಿ
ತಿರುಗಾಟ ಇರುವಾಗ
ಹಸಿವಿದ್ದು ಉಣುವಾಗ
ನೀಯೆನ್ನ ಬಳಿಯಲ್ಲೆ ಇರಲಿ
ಕಷ್ಟದಲಿ ಇರುವಾಗ
ನಷ್ಟದಲಿ ಕುಳಿತಾಗ
ಮನದಲ್ಲಿ ನೀನೇ ಇರಲಿ
ಜ್ವರ ಬಂದು ಇದ್ದಾಗ
ನಡುಗುತ್ತಾ ಕುಳಿತಾಗ
ಮೈದಡವಿ ಬಳಿಯಲ್ಲೆ ಇರಲಿ
ಎನ್ನ ಮೋಹನ ಹರಿಯೆ
ನನ್ನ ಜೊತೆಗೇ ಇದ್ದು
ಹರಸುತಲಿ ನೆಮ್ಮದಿಯ ತರಲಿ
-ಹಾ ಮ ಸತೀಶ ಬೆಂಗಳೂರು
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 19, 2024
ಪ್ರೀತಿಯೊಲವಿನ ಕರೆಯು ಮರೀಚಿಕೆಯಾಗದಂತಿರಲಿ ಗೆಳೆಯ
ಮೌನದೊಲವಿನ ಸವಿಯು ಮಾಸಿಹೋಗದಂತಿರಲಿ ಗೆಳೆಯ
ಮಧುರದೊಲವಿನ ಸೃಷ್ಟಿಯು ಹುಸಿಯಾಗದಂತಿರಲಿ ಗೆಳೆಯ
ಸವಿಯೊಲವಿನ ತಾರೆಯು ಕೊಳೆಯಾಗದಂತಿರಲಿ ಗೆಳೆಯ
ತಾಳಿಯೊಲವಿನ ತೆಕ್ಕೆಯದುಯೆಂದೂ ಚಿತೆಯಾಗದಂತಿರಲಿ ಗೆಳೆಯ
ಹೂವಿನೊಲವಿನ ದುಂಬಿಯು ಮುನಿಯಾಗದಂತಿರಲಿ ಗೆಳೆಯ
ಎದೆಯೊಲವಿನ ಕತೆಯು ಸಮಸ್ಯೆಯಾಗದಂತಿರಲಿ ಗೆಳೆಯ
ಸ್ವಾತಿಯೊಲವಿನ ಇಳೆಯು ಅಗ್ನಿಯಾಗದಂತಿರಲಿ ಗೆಳೆಯ
ಈಶನೊಲವಿನ ಪ್ರೇಮವದು ಅಲೆಯಾಗದಂತಿರಲಿ ಗೆಳೆಯ
ಸರಸದೊಲವಿನ ರತಿಯು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 18, 2024
ಕಲಿತವರ ನಡುವೆ
ಕಲಿತವರು ಇರಬಾರದು
ಕಲಿತವರು ಕಳೆಯಬಾರದು
ಕಲಿತವರ ನಡು ನಡುವೆಯೆ
ಕಲಿತು ಕಳೆದು ಹೋಗಬಾರದು
ಕಲಿತವರೆಲ್ಲರೂ ಕಲೆಗಾರರಲ್ಲ
ಕಲಿತವರ ಕೊರಳಲ್ಲಿ ಬಿರುದುಗಳಿಲ್ಲ
ಕಲಿತ ಹಲವರ ತಲೆಯೊಳಗೆ
ಕಲಿತಿರುವ ಮಿದುಳುಗಳೇ ಇಲ್ಲ
ಕಲಿತಿರುವ ವಿದ್ಯೆ ಪರಬ್ರಹ್ಮನಿಗೇ ಗೊತ್ತು
ಕಲಿತ ಬುದ್ಧಿಗೆ ಬೆಲೆಯೇ ಇಲ್ಲವಿಲ್ಲಿ
ಕಲಿತ ಬುದ್ದುಗಳಿಗೇ ಹೂ ಮಾಲೆ ಸನ್ಮಾನ
ಕಲಿತರೆ ಸಾಕು ಮತ್ತೆ ಕಲಿಯುವುದು ಬೇಡ
ಕಲಿತವರ ತಲೆಯೊಳಗೆ ಇರುವ ಸಗಣಿ
ಕಲಿತು ಹೇಳುತ್ತಿದೆ ಕೊಳೆತು ನಾರುತ್ತಿದೆ
ಕಲಿತವರಲ್ಲಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 17, 2024
ಎಚ್ಚರಾ...
ಕಾಶ್ಮೀರ ರಾಷ್ಟ್ರೀಯ
ಜಲ ವಿದ್ಯುತ್
ಉತ್ಪಾದನಾ
ಘಟಕಕ್ಕೆ
ದೊಡ್ಡ ಗೌಡರ
ಭೇಟಿ ಏಕೇ...?
ರಾಜ್ಯದ-
ಯಾರ ಬುಡಕ್ಕೋ
ಕರೆಂಟ್ ಶಾಕ್
ಕೊಡುವ ಸಿದ್ಧತೆ
ಇರಬಹುದು
ಜೋಕೇ!
***
ಹಗರಣದ ಹಾವು...
ಅವರದ್ದನ್ನು
ನೀವು;
ನಿಮ್ಮದ್ದನ್ನು
ಅವರು-
ಸದಾ
ಕೆದಕಿಬಿಡಿ.....
ಅದೆಷ್ಟು ತರತರ
ಹಗರಣದ
ಹಾವುಗಳಿವೆಯೋ
ಅವುಗಳೆನ್ನೆಲ್ಲಾ
ಹೊರಗೆಳೆದು
ತೋರಿಸಿಬಿಡಿ!
***
ಲಡ್ಡು ಉಂಡೆ?
ಸಿದ್ದರಾಮಯ್ಯ
ಅನುಮತಿ
ಕೊಟ್ರೆ
ನಾನೇ ಸಿಎಂ
ಆಗುವೆ-
ದೇಶಪಾಂಡೆ....
ಅನುಮತಿಯ
ಅಗತ್ಯವೇ ಇಲ್ಲ
ಮಾಡಿ ಬಿಡಿ …
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 16, 2024
ಗಝಲ್ ೧
ಹೊಸನಗುವು ಮುಖದಲ್ಲಿ ಚೆಂದ ಉಳಿವುದೇ ಗೆಳತಿ
ಹಳೆಯದಕೆ ಖುಷಿಯಿದೆಯೆ ರೂಪ ಅಳಿವುದೇ ಗೆಳತಿ
ಸಾಗರದ ಅಲೆಯಲ್ಲಿ ಉಬ್ಬರದ ಕೋಪವೇತಕೆ ಇಂದು
ಜೀವನದ ಕನಸನಿನಲ್ಲಿ ಮನವಿಂದು ಇರುವುದೇ ಗೆಳತಿ
ನನಸಿನಲಿ ಸಾಗದಿರೆ ಬಾಳಿನಲೆಯ ಒಲುಮೆಯು ಬೇಕೆ
ಧನವೆಲ್ಲವೂ ಬರಿದಾಗುತಿರೆ ಗೆಲುವು ಬರುವುದೇ ಗೆಳತಿ
ಬಾಡಿರುವ ಹೃದಯದೊಳು ಮೋಹವು ಕಂಡಿತೇ ಹೇಳು
ನಡುಗುತಿಹ ತನುವಿಂದ ಪ್ರೀತಿಯಿಂದು ಸಿಗುವುದೇ ಗೆಳತಿ
ನೊಂದಿರುವ ಆತ್ಮದಲಿ ಸಖಿಯವಳು ಎಲ್ಲಿಹಳೋ ಈಶಾ
ಕಾರಣವದು ಇಲ್ಲದಿರಲು ಉಸಿರೆಂದೂ ನಿಲುವುದೇ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 15, 2024
ತವಕವು ತುಂಬಿದ ಮನದಲಿ ಬರೆಯುವ
ಕವನವನೋದುವ ಜನರಿಲ್ಲ
ಕವಿಮನ ಕಲ್ಪಿಸಿ ಬರಹಕೆ ಇಳಿಸಿದ
ಕವಿತೆಯ ಓದುವ ಮನವಿಲ್ಲ
ಕರದಲಿ ಹಿಡಿಯುತ ಪುಸ್ತಕ ಲೇಖನಿ
ಬರಹವು ಅರ್ಧದೆ ಅದು ನಿಂತು
ಭರವಸೆ ತೊರೆಯುತ ಬರೆವುದ ಮರೆತರೆ
ಗುರಿಯನು ತಲಪುವ ಬಗೆಯೆಂತು
ಬಿಸಿಲಿನ ಬೇಗೆಗೆ ಚಿಗುರೆಲೆ ಬಾಡಲು
ಕಸಿವುದು ಬೆಳೆಯುವ ಉತ್ಸಾಹ
ಕುಸಿಯದೆ ಉಳಿಯಲು ದೊರೆವುದೆ ಆಶ್ರಯ
ಬಿಸಿಯನು ತಣಿಸುವ ಪ್ರೋತ್ಸಾಹ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ ಅಂತರ್ಜಾಲ)
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 14, 2024
ನಾನು; ನಾವು...
'ನಾನು,ನಾನು'
ಎಂದರೆ ನಲುಗಿ
ಹೋಗುವಿರಿ;
'ನಾವು,ನಾವು'
ಎಂದರೆ ಮೇಲೆದ್ದು
ವಿಜೃಂಭಿಸುವಿರಿ....
ಈ ಸತ್ಯವನರಿತ
ರಾಜಕಾರಣಿಗಳೇ-
ಹಣ ಹೊಡೆಯುವಾಗ-
'ನಾನು'
ಮತಗಳಿಸುವಾಗ
'ನಾವು' ಎಂದುಬಿಡುವಿರಿ!
***
ಭಾಗ್ಯಾದಾ ಲಕ್ಷ್ಮೀ...
ಭಾಗ್ಯಾದ ಲಕ್ಷ್ಮೀ
ಬಾರಮ್ಮಾ...
ನಮ್ಮ ಮನೆಯನು
ಬಿಟ್ಟು ಎಲ್ಲಿಗೂ
ಹೋಗದೇ
ಇರಮ್ಮಾ...
ಎಂದೊಕ್ಕೊರಲಿನಲಿ
ಎಲ್ಲಾ ಭಕ್ತರೂ
ಭಜಿಸಿದರೂ
ಆಕೆ ಚಂಚಲೆ;
ಜಗತ್ತನ್ನೇ
ಸುತ್ತುತಿರುವಳಮ್ಮಾ!
***
ದುರಂತ
ಜೀವ
ಉಳಿಸುವ
ಆಸ್ಪತ್ರೆಯಲ್ಲೇ-
ಜೀವ
ಕಾಪಾಡುವವರ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
September 13, 2024
ಗಝಲ್ ೧
ಮನದೊಳಗಿನ ಕಿಟಿಕಿಯದು ಮುಚ್ಚಿಹುದು
ಹೃದಯದಲ್ಲಿನ ಬಾಗಿಲೊಳು ರೊಚ್ಚಿಹುದು
ವಿಷವೇರಿದ ಕಣ್ಣುಗಳು ನೀಲಿಗಟ್ಟಿವೆಯೇಕೆ
ಸುಡದಿರುವಂತ ಬಿಸಿಲದುವು ಚುಚ್ಚಿಹುದು
ರಾತ್ರಿಯೊಳಗಿನ ಕನಸುಗಳಲ್ಲಿ ನನಸಿಲ್ಲವು
ಮಲಗಿರುವಾಗಲೇ ಹಾಸಿಗೆಯು ಕಚ್ಚಿಹುದು
ತಂಪಾಗಿರುವ ಕೋಣೆಯೊಳಗೂ ಬೆವರುತ್ತಿದೆ
ಬಯಕೆಯಿರದಿರುವ ಬಂಧನವು ಬಿಚ್ಚಿಹುದು
ಮನದಾಳವೆಲ್ಲವೂ ಚಂಚಲವೆಂದೆನಿಸಿದೆ ಈಶಾ
ರೂಪವಿಲ್ಲದಿರುವಂತಹ ಆತ್ಮವಿಂದು ಬೆಚ್ಚಿಹುದು
***
ಗಝಲ್ ೨
ಮನವನದ ತುಂಬೆಲ್ಲವೂ ನಿನ್ನೆದೆಯ ಉಸಿರು ಸಖಿ
ತನುವದುವು…