ದೊರೆಯಲಿ ಪ್ರೋತ್ಸಾಹ
ಕವನ
ತವಕವು ತುಂಬಿದ ಮನದಲಿ ಬರೆಯುವ
ಕವನವನೋದುವ ಜನರಿಲ್ಲ
ಕವಿಮನ ಕಲ್ಪಿಸಿ ಬರಹಕೆ ಇಳಿಸಿದ
ಕವಿತೆಯ ಓದುವ ಮನವಿಲ್ಲ
ಕರದಲಿ ಹಿಡಿಯುತ ಪುಸ್ತಕ ಲೇಖನಿ
ಬರಹವು ಅರ್ಧದೆ ಅದು ನಿಂತು
ಭರವಸೆ ತೊರೆಯುತ ಬರೆವುದ ಮರೆತರೆ
ಗುರಿಯನು ತಲಪುವ ಬಗೆಯೆಂತು
ಬಿಸಿಲಿನ ಬೇಗೆಗೆ ಚಿಗುರೆಲೆ ಬಾಡಲು
ಕಸಿವುದು ಬೆಳೆಯುವ ಉತ್ಸಾಹ
ಕುಸಿಯದೆ ಉಳಿಯಲು ದೊರೆವುದೆ ಆಶ್ರಯ
ಬಿಸಿಯನು ತಣಿಸುವ ಪ್ರೋತ್ಸಾಹ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ ಅಂತರ್ಜಾಲ)
ಚಿತ್ರ್