ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ಮನದೊಳಗಿನ ಕಿಟಿಕಿಯದು ಮುಚ್ಚಿಹುದು

ಹೃದಯದಲ್ಲಿನ ಬಾಗಿಲೊಳು ರೊಚ್ಚಿಹುದು

 

ವಿಷವೇರಿದ ಕಣ್ಣುಗಳು ನೀಲಿಗಟ್ಟಿವೆಯೇಕೆ

ಸುಡದಿರುವಂತ ಬಿಸಿಲದುವು ಚುಚ್ಚಿಹುದು

 

ರಾತ್ರಿಯೊಳಗಿನ ಕನಸುಗಳಲ್ಲಿ ನನಸಿಲ್ಲವು

ಮಲಗಿರುವಾಗಲೇ ಹಾಸಿಗೆಯು ಕಚ್ಚಿಹುದು

 

ತಂಪಾಗಿರುವ ಕೋಣೆಯೊಳಗೂ ಬೆವರುತ್ತಿದೆ

ಬಯಕೆಯಿರದಿರುವ  ಬಂಧನವು ಬಿಚ್ಚಿಹುದು

 

ಮನದಾಳವೆಲ್ಲವೂ ಚಂಚಲವೆಂದೆನಿಸಿದೆ ಈಶಾ

ರೂಪವಿಲ್ಲದಿರುವಂತಹ ಆತ್ಮವಿಂದು ಬೆಚ್ಚಿಹುದು

***

ಗಝಲ್ ೨

ಮನವನದ ತುಂಬೆಲ್ಲವೂ ನಿನ್ನೆದೆಯ ಉಸಿರು ಸಖಿ

ತನುವದುವು ಬಯಸಿದರೆ ಅಪ್ಪುಗೆಯೆ ಬಸಿರು ಸಖಿ

 

ಮೋಹಮದ ಅರಳದೆಯೇ ದಾಹ ತೀರುವುದೆ ಹೇಳು

ಕಹಿಯೆನಿಸುವ ಒಗರಿದ್ದೊಡೆ ಸುಖವಿರದೆ ಕೆಸರು ಸಖಿ

 

ತಪ್ಪುಗಳಾಗುವ ನಡುವೆಯೇ ಕೆರಳಿ ಅರಳುವುದೆ ಪ್ರೀತಿ

ಒಪ್ಪುಗಳ ಬದುಕಿನೊಳಗಿಲ್ಲಿ ಉಳಿಯಿವುದೆ ಹೆಸರು ಸಖಿ

 

ಜೇನಿರುವ ಗೂಡಿನೊಳಗೆ ಸವಿಯೊಂದು ಇದ್ದರೇನು ಫಲ

ಬಾನು ಮಳೆಯನ್ನು ಸುರಿಸಿತೊ ಬುವಿಯೊಳಗೆ ಒಸರು ಸಖಿ 

 

ಸೇರಿರುವ ಹೃದಯಗಳಲ್ಲಿನ ಭಾವನೆಯನ್ನು ಅರಿತೆಯಾ ಈಶಾ

ಕನಸುಗಳ ಜೊತೆಯಲ್ಲಿರುವ ನನಸುಗಳೆಂದೆಂದು ಹಸಿರು ಸಖಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್