ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
October 12, 2024
ಮೈಸೂರು ದಸರಾ
ಸಾಂಸ್ಕೃತಿಕ
ಮೇರು
ಪರಂಪರೆಯ
ಬೇರು;
ನಾಡ ಹಬ್ಬ
ಓ ದಸರಾ...
ಬನ್ನಿ
ನಾವೆಲ್ಲ ಸೇರಿ
ಎಳೆಯೋಣ
ಕನ್ನಡನಾಡಿನ
ಭವ್ಯತೆಯ
ಈ ತೇರಾ!
***
ರಾಜಕಾರಣಿಗಳಿಗೆ ಎಲ್ ಟಿ ಸಿ...!
ಕಚ್ಚಾಡುತಿರುವ
ಕರ್ನಾಟಕದ ಮಂತ್ರೀ
ಮಹೋದಯರೇ-
ನಿಮ್ಮ ಕಚ್ಛಾಟಕೆ
ಕೆಡುತಿದೆ
ನಮ್ಮ ನೆಮ್ಮದಿ...
'ರಷ್ಯಾ-ಉಕ್ರೇನ್
ಇಸ್ರೇಲ್-ಇರಾನ್'
ಪ್ರವಾಸವಾದರೂ
ಹೋಗಿ ಬನ್ನೀ-
ಕಡಿಮೆಯಾದೀತು
ನಿಮ್ಮ ಬೇಗುದಿ!
***
ಜೀವನ ಮೌಲ್ಯ
ಕೇವಲ ಹಣ
ಸಂಪತ್ತಿನ
ಹಿಂದೆ
ಹೋದರೆ
ಮೆಚ್ಚದೋ
ಈ ಲೋಕ...
ಜೀವನ
ಮೌಲ್ಯಗಳ
ಹಿಂದೆ
ಓಡಿದರೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
October 11, 2024
ಕಡಲ ತೀರದ ಭಾರ್ಗವರೆಂದು ಹೆಸರು ಪಡೆದಿರಾ ಮಹಾನ್
ಒಡಲು ಪ್ರೀತಿಯಲಿ ತುಂಬಿದ ಜ್ಞಾನದ ಕೋಶವಾದಿರಾ ಮಹಾನ್
ಹತ್ತೂರು ಸುತ್ತಿದರೂ ಕಾಣಸಿಗರು ಮೇರು ವ್ಯಕ್ತಿತ್ವ ಹೊಂದಿದವರಲ್ಲವೆ
ಪುತ್ತೂರಿನಲಿ ಸಾಹಿತ್ಯ ರಸಗಂಗೆಯ ಛಾಪನ್ನು ಮೂಡಿಸಿದಿರಾ ಮಹಾನ್
ಕಾಲಿಗೆ ಗೆಜ್ಜೆ ಕಟ್ಟಿ ಥಕತೈ ಕುಣಿದು ವಿಜೃಂಭಿಸಿದೆಯ
ಸೋಲಿಗೆ ಹೆದರದೆ ತಲೆಯೆತ್ತಿ ಎದೆಯೊಡ್ಡಿ ಹೋರಾಡಿದಿರಾ ಮಹಾನ್
ಸಪ್ತ ಸಾಗರದಾಚೆ ಬಣ್ಣ ಹಚ್ಚಿ ಚತುರತೆಯ ಪ್ರದರ್ಶಿಸಿದಿರಂದು
ತೃಪ್ತ ಮನದಿಂದ ಬದುಕಿನ ಹಾದಿಯನು ಕ್ರಮಿಸಿದಿರಾ ಮಹಾನ್
…
ಲೇಖಕರು: ಬರಹಗಾರರ ಬಳಗ
ವಿಧ: ಕವನ
October 10, 2024
ಎಂತ ಆಯ್ದು ಹೇಳಿ ಹೇಳ್ತಾ ಇಲ್ಲೆಯೊ ಎನ್ನ ಮುದ್ದು ಕೂಸೆ
ಪ್ರೀತಿಲೆಂತ ಕೊರತೆ ಆತಾ ಮೌನ ಮುರಿದು ಹೇಳ್ತೆಯಾ
ಮೊನ್ನೆಂದಾ ನೋಡ್ತಾ ಇದ್ದೆ ಮೋರೆ ತಿರುಗಿಸಿ ಹೋದೆಯಲ್ಲದಾ
ಮೂಲೆಲೆಲ್ಲೋ ನೋಡ್ಯೊಂಡು ಬೆನ್ನು ಹಾಕಿ ಕೂದೆ ಅಲ್ಲದಾ
ಮಾತಿಲ್ಲೆ ಕತೆಯೂ ಇಲ್ಲೆ ಕಣ್ಣೀರು ಬತ್ತೀ ಹೋಯ್ದು
ಕಂತಿ ಹೋದ ಮೋರೆಯೋ ಚಪ್ಪೆ ಆಯ್ದು ನೋಡು
ಕಾರಣವ ಹೇಳದೆ ಈಗ ದೂರ ಹೋದೆ ಎಂತಕೆ
ಮತ್ತೆ ಮತ್ತೆ ಕೇಳ್ತಾ ಇದ್ದೆ ರಗಳೆ ಬೇಡ ಓ ಕೂಸೆ
ನಿಲ್ಸು ಹೇಳಿ ಹೇಳ್ತಾ ಇದ್ದೆ ದೂರ್ವ ಕೆಲಸವ ಮಾಡೆಡ
ಕೈಯ ಹಿಡ್ಕೊಂಡು ಮತ್ತೇ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
October 09, 2024
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು
ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು
ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ
ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ ಬಹುಬಗೆಯಲೆ
ಕಾಸು ಎಸೆಯುವರ ಮುಂದೆ ಕೈಯೊಡ್ಡುವವರಿರುವವರೆಗೂ ಮಹಾತ್ಮರಿಗೆ ಬೆಲೆಯಿದೆಯೆ
ಸ್ವಾತಂತ್ರ್ಯ ಸ್ವ ಹಿತದ ತಂತ್ರವನು ದೇಶದ ಮಂದಿಗೆ ಕಲಿಸಿ ಹೋಗಿದ್ದು ವಿಶೇಷವೆ
ನಾಯಕರು ದೇಶ ಸುತ್ತಬೇಕು ಯಾಕೆಂದರೆ ಒಣಗಿದ ಭೂಮಿಯಲ್ಲೂ ಓಯಸೀಸ್ ಕಂಡುಬರುತ್ತದೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
October 07, 2024
ಮತ್ತೊಮ್ಮೆ ಗಾಂಧಿ
ನೆನಪಿಗೆ ಬಂದ
ಅಹಿಂಸೆಯೇ ಗೆಲುವೆಂದ;
ಬೆತ್ತಲಿನ ಮಡಿಯ ಅಚ್ಚ
ಬಿಳುಪಿನ ವಸ್ತ್ರದಿ ನೊಡೋಕೆ ಚಂದ;
ದಟ್ಟ ದರಿದ್ರರ ಬಾಳಿಗೆ
ಹೊಸ ಆಶಾಕಿರಣ ತಂದ
ನಾವೆಲ್ಲರೂ ಸಮಾನರೆಂದ;
ಸಕಲರನ್ನು ಗೌರವಿಸಿ ಶತೃಗಳನ್ನು
ಕ್ಷಮಿಸಿ ಸಹೃದತೆಯ ಮೆರೆಯಿರೆಂದ;
ದೀನ ದಲಿತರ ಅಸೂಯಗೆ
ಕೊನೆಯೇ ಇಲ್ಲವೆಂದು
ಅಸ್ಪೃಶ್ಯತೆ ಶಾಪವೆಂದ;
ನಾವೆಲ್ಲರೂ ಭಾರತೀಯರು
ಧರ್ಮ ಜಾತಿ ಮೇಲು ಕೀಳು
ಕೊನೆಗಾಣಿಸಬೇಕೆಂದ:
ಬುದ್ಧ- ಬಸವಣ್ಣ, ಗಾಂಧಿ- ಅಂಬೇಡ್ಕರ್
ಸಮಾನತೆಯ ಹರಿಕಾರರೆಂದ,
ಹರಿದು ಹಂಚಿ ಹೋದ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
October 06, 2024
ನಾವು ಗಂಡಸರು ಸ್ವಾಮಿ,
ಕನಸು ವಾಸ್ತವಗಳ ಹಾವು ಏಣಿ ಆಟದಲ್ಲಿ
ಕಾಲವೆಂಬ ದಾಳಕ್ಕೆ ಟೋಕನ್ನುಗಳಷ್ಟೇ.
ಜವಾಬ್ದಾರಿಗಳ ಮೂಟೆಯನ್ನು ಹೆಗಲಿಗೇರಿಸಿ
ನೆಮ್ಮದಿಯೆಂಬ ಮಾಯಾಮೃಗದ ಬೇಟೆಗಾರರಷ್ಟೇ...
ಹುಟ್ಟಿದ ಮನೆಗೆ ಅತಿಥಿಯಾಗಿ
ದೂರದ ಊರಿಗೆ ಪ್ರವಾಸಿಯಾಗಿ
ಒತ್ತರಿಸಿ ಬರುವ ಕಂಬನಿಯನ್ನೂ
ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುವ ಆಸಾಮಿ...
ನಾವು ಗಂಡಸರು ಸ್ವಾಮಿ,
ನಮ್ಮ ನೂರೊಂದು ಕಲ್ಪನೆಯ
ಆಶಾಗೋಪುರವನ್ನು ನಿರ್ದಯಿಯಾಗಿ ಕೆಡವಿ
ಅದರ ಮೇಲೆಯೇ ನಿಂತು ನಗುವ ವಿಕೃತರು...
ಹೊಂದಾಣಿಕೆಯ ಆಳ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
October 05, 2024
ಧಮನಿಸುವ
ಕೈಗಳು ಇರುವಲ್ಲಿ
ರಕ್ಷೆಯಿದೆಯೇ !
*
ಬರೆದಿರುವ
ಸಾಹಿತ್ಯದಲೆಂದೆಂದೂ
ತಿರುಳಿರಲಿ !
*
ಕೊಪ್ಪರಿಗೆಲಿ
ಹೊನ್ನ ಕೊಟ್ಟೆ , ಆದರೆ
ಪ್ರೀತಿಯ ಬಿಟ್ಟೆ !
*
ತಿಳುವಳಿಕೆ
ಕಸಂಟು ರೂಪದಲ್ಲಿ
ಬೇಡ ಕವಿಯೆ !
*
ತಾನೇ ಕಪಿಯು
ಎನ್ನುವ ಹೊತ್ತಲ್ಲಿಯೆ
ಬಂದ ಕವಿಯು !
*
ಕೆಡದಿರುವ
ಮನದಿಂದ ಕಾವ್ಯ
ಬರೆಯೋ ಕವಿ !
*
ಕಡೆದಿರುವ
ವಿಗ್ರಹದಂತೆ ನೀನು
ಚೆಲುವನಾಗು !
*
ಸೂರ್ಯನಲ್ಲಿಯ
ಬೆಳಕಿನಂತೆ ಜಗ ,
ಬೆಳಗು ಕವಿ !
*
ಯಾವುದೇ ಸಾಹಿತ್ಯ ಕಲಿಯುತ್ತಾ ಹೋಗು
ಕಲಿತ ಕೂಡಲೆ ಎಂದಿಗೂ ಖಳನಾಗಬೇಡ
ಕಲಿತೆನೆಂಬ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
October 04, 2024
ಗಝಲ್ ೧
ಮುತ್ತನು ಯಾವತ್ತಿದ್ದರೂ ಪಡೆಯಬಹುದು
ಕಡಲಿನ ಆಳಕ್ಕಿಳಿದಾದರೂ ತೆಗೆಯಬಹುದು
ಮತ್ಸರದ ಗೂಡುಗಳೆಲ್ಲ ಗಟ್ಟಿಯಾಗಿದೆಯೇಕೆ
ಮೊನಚಾದ ಮಾತಿನಿಂದಲೇ ಒಡೆಯಬಹುದು
ಜೀವನದ ಸಂಜೆಯಲಿರುವವರು ಸುಮ್ಮನಿರಲಿ
ದ್ವೇಷಗಳನು ಒಗ್ಗಟ್ಟಿನಿಂದಲೇ ತಡೆಯಬಹುದು
ಸವಿಯಾಗಿರುವ ಒಲುಮೆಗಳೆಲ್ಲ ಸಿಗದೆಲ್ಲಿವೆಯೊ
ಬಾಂದಣದಲಿದ್ದರೆ ಅಲ್ಲಿಗಲ್ಲಿಗೇ ನಡೆಯಬಹುದು
ರೂಪಗಳೆಲ್ಲ ವಿರೂಪವಾದರೆ ಈಶನೇನಾಗುವನೊ
ಕನಸುಗಳನ್ನೆಲ್ಲವನ್ನು ಒರಳಲ್ಲಿಟ್ಟು ಕಡೆಯಬಹುದು
***
ಗಝಲ್ ೨
ದೂರುವುದೇ ಅವರ ಚಟವಾದರೆ ದೂರ ಇದ್ದು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
October 03, 2024
ಇತಿಹಾಸ ಮತ್ತೊಮ್ಮೆ
ಸುತ್ತುಹೊಡೆಯುತ್ತಿರುವ
ಈ ಹೊತ್ತಿನಲ್ಲಿ..
ಯುದ್ದವೆಂದರೇನೆಂದು..
ಬೆರೆತುಬಾಳಲು ಅಡ್ಡಿಯಾಗಿದ್ದ
ಗೋಡೆಗಳನ್ನು ಕೆಡವಿದ
ಜರ್ಮನ್ನರನ್ನು ಕೇಳು..
ಕೆಂಪುಚೌಕವನ್ನು ತಲುಪಿದರೂ
ಕೊರೆವ ಚಳಿಯಲ್ಲಿ ಕೊರಡಾಗಿ
ಅಸುನೀಗಿದವರ
ಮಕ್ಕಳನ್ನು ಕೇಳು
ಯುದ್ಧವೆಂದರೆ ಏನೆಂದು ..
ಇಟಲಿಯನ್ನು ಕೇಳು ,
ಪೋಲೆಂಡನ್ನು ಕೇಳು
ಕೊನೆಗೊಮ್ಮೆ ಯುದ್ಧದಲ್ಲಿ ಗೆದ್ದ
ಬ್ರಿಟನ್ನನ್ನೇ ಕೇಳಿಬಿಡು
ಯುದ್ಧವೆಂದರೆ ಏನೆಂದು !
ಸೂರ್ಯ ಉದಯಯಿಸುವ ನಾಡಾದರೂ
ಬೆಳಗಾಗುವುದರೊಳಗೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
October 02, 2024
ತೆರೆದ ಪುಸ್ತಕ!
'ನಾನು ತೆರೆದ
ಪುಸ್ತಕ' ಎಂದು
ಪದೇಪದೇ ಹೇಳಿ-
ಪುಸ್ತಕಕ್ಕೇಕೆ
ಮಾಡುವಿರಿ
ಅವಮಾನ...?
ನೀವು ಪಾಪಗಳ
ಮಾಡುವಾಗ-
ಮುಚ್ಚಿದ ಪುಸ್ತಕ;
ಹಗರಣ
ಬಯಲಾದ ಮೇಲೆ-
ಅಸ್ತಮಾನ!
***
ಎಚ್ಚರಾ
ರಾಜಕಾರಣಿಗಳೇ-
ನೀವ್ಯಾರೂ
ನ್ಯಾಯದ
ದೋಣಿಯಲ್ಲಿ
ಪಯಣಿಸುತ್ತಿಲ್ಲ
ಬೆಪ್ಪರಾ...
ಅನ್ಯಾಯದ
ದೋಣಿಗೆ
ತೂತುಗಳು
ನೂರಾರು-
ಮುಳುಗಿ ಹೋದೀರಿ
ಎಚ್ಚರಾ!
***
ತೆಂಗಿನ ಕಾಯಿ ಬೆಲೆ ಏರಿಕೆ?
ತೆಂಗು-
ಎಳನೀರಿಗೆ
ಬಲಿ-
ದರ
ಏರಿದ
ಕೊಬ್ಬರಿ...
ಈಗ
ಅದರ
ಇಳುವರಿ
ಕಡಿಮೆ ಆಗಿ-
ರೈತನ
ಬೊಬ್ಬಿರಿ!
***…