ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ಮುತ್ತನು ಯಾವತ್ತಿದ್ದರೂ ಪಡೆಯಬಹುದು 

ಕಡಲಿನ ಆಳಕ್ಕಿಳಿದಾದರೂ ತೆಗೆಯಬಹುದು 

 

ಮತ್ಸರದ ಗೂಡುಗಳೆಲ್ಲ ಗಟ್ಟಿಯಾಗಿದೆಯೇಕೆ

ಮೊನಚಾದ ಮಾತಿನಿಂದಲೇ ಒಡೆಯಬಹುದು

 

ಜೀವನದ ಸಂಜೆಯಲಿರುವವರು ಸುಮ್ಮನಿರಲಿ

ದ್ವೇಷಗಳನು ಒಗ್ಗಟ್ಟಿನಿಂದಲೇ ತಡೆಯಬಹುದು

 

ಸವಿಯಾಗಿರುವ ಒಲುಮೆಗಳೆಲ್ಲ ಸಿಗದೆಲ್ಲಿವೆಯೊ

ಬಾಂದಣದಲಿದ್ದರೆ ಅಲ್ಲಿಗಲ್ಲಿಗೇ ನಡೆಯಬಹುದು

 

ರೂಪಗಳೆಲ್ಲ ವಿರೂಪವಾದರೆ ಈಶನೇನಾಗುವನೊ

ಕನಸುಗಳನ್ನೆಲ್ಲವನ್ನು ಒರಳಲ್ಲಿಟ್ಟು ಕಡೆಯಬಹುದು

***

ಗಝಲ್ ೨

ದೂರುವುದೇ ಅವರ ಚಟವಾದರೆ ದೂರ ಇದ್ದು ಬಿಡು

ಬೈಯುವುದೇ ಹಲವರ ದಿನವಾದರೆ ದೂರ ಇದ್ದು ಬಿಡು

 

ಕನಸಿಲ್ಲದವರ ಜೊತೆಗೇ ನೀವು ಹೀಗೆ ಸಾಗುವುದು ಏಕೊ

ತಾವೆನ್ನುವುದೇ ಅಂತಿಮ ದಿಟವಾದರೆ ದೂರ ಇದ್ದು ಬಿಡು

 

ಯಾತ್ರೆಗಳು ಜನರಿಗೆ ಏನನ್ನು ತಿಳಿಸಿ ಕೊಡುವುದೋ  ತಿಳಿಯೆ

ಹುಳಿಹಿಂಡಿದ್ದೇ ಮನದಾಳದಿ ಗೆಲುವಾದರೆ ದೂರ ಇದ್ದು ಬಿಡು

 

ತನ್ನ ನುಡಿಯೇ ವೇದವಾಕ್ಯವು ಎನ್ನುವವರಿಗೆ ಏನನ್ನಲಿ ಜಗದಲಿ

ನನ್ನಿಂದಲೇ ಎನ್ನುವ ರೀತಿಯಲ್ಲಿ ಹಟವಾದರೆ ದೂರ ಇದ್ದು ಬಿಡು

 

ನೆಮ್ಮದಿ ಹುಡುಕಿ ಹೋಗುವವರ ಕಡೆಗೊಮ್ಮೆ ನೋಡುತಿರು ಈಶಾ

ದ್ವೇಷದ ನೋವೇ ಬೇರೆಯವರಿಗೆ ಫಲವಾದರೆ ದೂರ ಇದ್ದು ಬಿಡು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್