ಕಾರಂತಜ್ಜನ ನೆನಪಿನಲ್ಲಿ ಗಝಲ್
ಕವನ
ಕಡಲ ತೀರದ ಭಾರ್ಗವರೆಂದು ಹೆಸರು ಪಡೆದಿರಾ ಮಹಾನ್
ಒಡಲು ಪ್ರೀತಿಯಲಿ ತುಂಬಿದ ಜ್ಞಾನದ ಕೋಶವಾದಿರಾ ಮಹಾನ್
ಹತ್ತೂರು ಸುತ್ತಿದರೂ ಕಾಣಸಿಗರು ಮೇರು ವ್ಯಕ್ತಿತ್ವ ಹೊಂದಿದವರಲ್ಲವೆ
ಪುತ್ತೂರಿನಲಿ ಸಾಹಿತ್ಯ ರಸಗಂಗೆಯ ಛಾಪನ್ನು ಮೂಡಿಸಿದಿರಾ ಮಹಾನ್
ಕಾಲಿಗೆ ಗೆಜ್ಜೆ ಕಟ್ಟಿ ಥಕತೈ ಕುಣಿದು ವಿಜೃಂಭಿಸಿದೆಯ
ಸೋಲಿಗೆ ಹೆದರದೆ ತಲೆಯೆತ್ತಿ ಎದೆಯೊಡ್ಡಿ ಹೋರಾಡಿದಿರಾ ಮಹಾನ್
ಸಪ್ತ ಸಾಗರದಾಚೆ ಬಣ್ಣ ಹಚ್ಚಿ ಚತುರತೆಯ ಪ್ರದರ್ಶಿಸಿದಿರಂದು
ತೃಪ್ತ ಮನದಿಂದ ಬದುಕಿನ ಹಾದಿಯನು ಕ್ರಮಿಸಿದಿರಾ ಮಹಾನ್
ಆಳ ಶರಧಿಯ ಮುತ್ತುಗಳ ಬೆಲೆಯ ಅರಿವು ರತ್ನಳಿಗಿದೆ
ಬಾಲ ಬಿಚ್ಚಿ ಬೀಗಿದವರ ಮಾತಿನಲಿ ತುಂಡರಿಸಿದಿರಾ ಮಹಾನ್
(ಡಾ ಶಿವರಾಮ ಕಾರಂತರ ಜನ್ಮ ದಿನ ಅಕ್ಟೋಬರ್ ೧೦)
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ್