ಹನಿಗಳು ಸರ್ ಹನಿಗಳು !
ಕವನ
ಧಮನಿಸುವ
ಕೈಗಳು ಇರುವಲ್ಲಿ
ರಕ್ಷೆಯಿದೆಯೇ !
*
ಬರೆದಿರುವ
ಸಾಹಿತ್ಯದಲೆಂದೆಂದೂ
ತಿರುಳಿರಲಿ !
*
ಕೊಪ್ಪರಿಗೆಲಿ
ಹೊನ್ನ ಕೊಟ್ಟೆ , ಆದರೆ
ಪ್ರೀತಿಯ ಬಿಟ್ಟೆ !
*
ತಿಳುವಳಿಕೆ
ಕಸಂಟು ರೂಪದಲ್ಲಿ
ಬೇಡ ಕವಿಯೆ !
*
ತಾನೇ ಕಪಿಯು
ಎನ್ನುವ ಹೊತ್ತಲ್ಲಿಯೆ
ಬಂದ ಕವಿಯು !
*
ಕೆಡದಿರುವ
ಮನದಿಂದ ಕಾವ್ಯ
ಬರೆಯೋ ಕವಿ !
*
ಕಡೆದಿರುವ
ವಿಗ್ರಹದಂತೆ ನೀನು
ಚೆಲುವನಾಗು !
*
ಸೂರ್ಯನಲ್ಲಿಯ
ಬೆಳಕಿನಂತೆ ಜಗ ,
ಬೆಳಗು ಕವಿ !
*
ಯಾವುದೇ ಸಾಹಿತ್ಯ ಕಲಿಯುತ್ತಾ ಹೋಗು
ಕಲಿತ ಕೂಡಲೆ ಎಂದಿಗೂ ಖಳನಾಗಬೇಡ
ಕಲಿತೆನೆಂಬ ಅಹಂಕಾರ ಬೇಡವೇ ಬೇಡ
ಇದರಿಂದಾಗಿ ಜನರಿಗೆ ಬೇಡ ಆಗ ಬೇಡ !
*
ಜಾರಿಕೊಳ್ಳುವವರ ನಡುವೆ ಏನನ್ನೂ ಹೇಳಬೇಡ
ಮತ್ತೆ ಜನರೆದುರಲ್ಲಿ ಮರ್ಯಾದೆ ಕಳಕೊಳ್ಳಬೇಡ
*
ಮಾತು ಬದಲಾಯಿಸುವ ಜನರನ್ನು ದೂರವಿಡು
ಅಂಥವರ ಸಹವಾಸ ಬೇಡವೆಂದು ಮರೆತುಬಿಡು
*
ನನ್ನ ಜೀವನ ಕತೆಯಲ್ಲೇ ನೂರಾರು ಸಮಸ್ಯೆಗಳಿವೆ
ಪರಿಹಾರ ಕಂಡುಕೊಂಡರೆ ಬಾಳಿಗೆ ನೆಮ್ಮದಿಗಳಿವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್