ಕವನಗಳು

ವಿಧ: ಕವನ
October 01, 2024
ಒದೆ ಕೊಡುವವರ ಕಾಲವದು ಹೋಗಿದೆ ಸ್ವಾತಂತ್ರ್ಯ ಸಿಕ್ಕಾಗಲೇ ಮರೆಯಲ್ಲಿ ನಿಂತಿದೆ! * ತಲೆನೋವು ಬಂದಾಗ ಝಂಡು ಬಾಂಬನು ಹಚ್ಚು ಪ್ರೀತಿಯು ಸಿಗದಾಗ ಮಂಡೆಯೊಳಗೇ ಹುಚ್ಚು ! * ಮೌನವದು ಮುರಿದರೆ ಶಾಪಗಳೇ ಮಾತುಗಳು ! * ಉರಿದು ಹೋದವರು ಮನೆ ಮನವನು ಮುರಿದೇ ಹೋದರು ! * ಹಗಲಲ್ಲೂ ಕೆಲವರು ಎಡವುತ್ತಾರೆ ಪಕ್ಕದವರು ಕಾಲು ಕೊಡುವುದರಿಂದ ! * ಬದಕಿಗೆ ಎಷ್ಟೇ ನೋವಾದರೂ ಬಾಳು ಸಾಗಬೇಕಿದೆ ಮನಸ್ಸಿಗೆ ಬೇನೆಯಾಗುತ ಎಷ್ಟೇ ಅತ್ತರೂ ನಗಬೇಕಿದೆ -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
September 30, 2024
ಗಝಲ್ ೧ ಮುತ್ತುಗಳು ಕತೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ ಮಾತುಗಳು ಮುನಿಸಾಗುತ್ತವೆ ಕೆಲವೊಮ್ಮೆ ಸುಮ್ಮನೆ   ಚಿತ್ರದಲಿ ಕಾಣುವ ಮೊಗವು ನಿಜಜೀವನದಲ್ಲಿದೆಯೆ ಸತ್ಯಗಳು ಕನಸಾಗುತ್ತವೆ ಕೆಲವೊಮ್ಮೆ ಸುಮ್ಮನೆ   ನನಸಿರದಿಹ ಜೀವನದಲೆಂದು ಆತುರವೇ ಕಾಣುವುದು ಮನಸುಗಳು ಬಲಿಯಾಗುತ್ತವೆ ಕೆಲವೊಮ್ಮೆ ಸುಮ್ಮನೆ   ಬೆಂದಿರದ ವಸ್ತುಗಳಿಂದ ಹೊಟ್ಟೆಯದು ತುಂಬುವುದೆ ಉತ್ತರಗಳು ಹೊರೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ   ಬರಡಾದ ಗುಡ್ಡದಲಿ ಹುಲ್ಲದುವು ಚಿಗುರಿತೇ ಈಶಾ ಪ್ರೀತಿಗಳು ಕಾಣೆಯಾಗುತ್ತವೆ ಕೆಲವೊಮ್ಮೆ…
ವಿಧ: ಕವನ
September 29, 2024
ಜನ್ಮವಿದ್ದರೆ ನನಸಾಗುವಿರೇನು ಕನಸುಗಳೆ ! * ತಪ್ಪುಗಳನ್ನು ಮಾಡದಿರಿ ಜನರೆ ಕ್ಷಣಿಕವದು ! * ಮುತ್ತುಗಳಲ್ಲಿ ಮನ ತೆರೆಯುವಂಥ ಗುಣವಿಹುದು ! * ಚಿಂತೆಯಿರದ ಮನದೊಳಗೆಯೆಲ್ಲ ಸಾಂತ್ವನವಿದೆ ! * ದೊಡ್ಡ ಮನುಷ್ಯರ ಸಹವಾಸ ಮಾಡುವಾಗ ನಾವು ದಡ್ಡ ಮನಸ್ಸಿನಲ್ಲಿ ಇರಬೇಕು ! * ಪ್ರಯೋಗಗಳ ನಡುವೆಯೇ ಚಿಗುರಿ ಹೆಮ್ಮರವಾಗು ! * ಪ್ರಯೋಗವದು ಇರದೊಡೆ ಸಾಹಿತ್ಯ ನಿಂತ ನೀರದು ! * ಬರೆದಂತೆಯೇ ಕವಿಯಾಗಲಾರನು ಕಲಿಯಬೇಕು ! * ಮೀಟರ್ ಬೇಕು ಎಂದವರ ಸಾಹಿತ್ಯ ಸೊರಗಿಹುದು ! * ಗುಲ್ ಮೊಹರಿನ ನಡುವೆ ಕನ್ನಡವು ಕಾಣೆ…
ವಿಧ: ಕವನ
September 28, 2024
ಗಝಲ್ ೧ ಹರೆಯ ತುಂಬಿ ಬಂದ ಗಳಿಗೆ ನಿನದೆ ಚೆಲುವು ನನ್ನೊಳು ಮಾತು ಕತೆಯ ಒಡಲ ದನಿಗೆ ಹೀಗೆ ಒಲವು ನನ್ನೊಳು   ಗಿಡವು ಚಿಗುರಿದಾಗ ಪಕಳೆ ತೂಗಿ ಹಾಡಿ ನಲಿಯಿತು ಮಧುರ ಭಾವ ಚಿಮ್ಮಿದಾಗ ನಿನ್ನ ಛಲವು ನನ್ನೊಳು   ಕನಸು ಬರಲು ನನಸು ಇಹುದು ತಿಳಿದೆ ನಾನು ಎನ್ನಲೆ ತಿಳಿವಿನೊಳಗೆ ಸವಿಯು ಬರಲು ಬದುಕ ಫಲವು ನನ್ನೊಳು   ಗಾಳಿ ಬೀಸಿ ಹಾಡುತಿಹುದು ಹೆಸರ ಕರೆದು ಬೀಗಲೆ ನಿನ್ನ ಚೆಂದ ನವಿರು ಭಾವ ತುಂಬಿ ಬಲವು ನನ್ನೊಳು   ಹೊತ್ತು ಕಂತಿದಂತೆ ನೆನಪು ಮೂಡಿತಾಗ ಈಶನೆ ಒನಪಿನೊಳಗೆ ಹೊಳಪು ಕಂಡು ಮತ್ತೆ ಗೆಲುವು…
ವಿಧ: ಕವನ
September 27, 2024
ಎಲೆಕ್ಷನ್ ಆಟ?  ಕೇಜ್ರಿವಾಲ್- ಮತ್ತೆ ಜನಾದೇಶದ ನಂತರವೇ ಸಿ ಎಂ ಕುರ್ಚಿ ಮೇಲೆ ಕೂರುವೆ...   ನೀವೇನೋ ಕೂರ್ತೀರಾ; ಏನ್ ಎಲೆಕ್ಷನ್ ಖರ್ಚನು ಮಾತ್ರ ಜನರ ತಲೇ ಮೇಲೆ ಎಳೆದು ಬಿಡ್ತೀರಾ? *** ಮಾಡಿದ್ದುಣ್ಣೋ.... ರಾಜಕೀಯಕ್ಕಿಳಿದು ರಾಜಕಾರಣದ ಎಲ್ಲಾ ಸವಲತ್ತುಗಳ ಸವಿ ಉಣ್ಣುವ ರಾಜಕಾರಣಿಗಳೇ...   ನೀವು ಕೊನೆಗೊಮ್ಮೆ ಈ ಎಲ್ಲಾ ರಾಜಕೀಯ ವಿಕೃತಿಗಳನೂ ಉಣ್ಣಲು ಸಿದ್ಧರಾಗಿ ಓ ಬಲಿಪಶುಗಳೇ! *** ವರ್ಣಬೇಧ ನೀತಿ...  ಮುನಿಯಾಗಿರ ಬೇಕಿದ್ದ- ಮುನಿರತ್ನ ವಿರುದ್ಧ ಒಕ್ಕಲಿಗರ ಮುನಿಸು...   ರಾಜಕಾರಣಿಗಳೇ…
ವಿಧ: ಕವನ
September 26, 2024
ನನ್ನ ನೀ ಹೊಗಳು ನಿನ್ನ ನಾ ಹೊಗಳುವೆ ಇಷ್ಟೇ ನಮ್ಮ ಬರಹದ ಬದುಕು ಮುಂದೆ ಕನಸಲ್ಲೇ ನಾವು ಕುವೆಂಪು ದ ರಾ ಬೇಂದ್ರೆ !   ನೀ ಬರೆದಿರುವುದ ನಾ ವಿಮರ್ಶಿಸುವೆ ನಾ ಬರೆದಿರುವುದ ನೀ ವಿಮರ್ಶಿಸು ಮುಂದೆ ಕನಸಲ್ಲೇ ನಾವು ಖ್ಯಾತ ವಿಮರ್ಶಕರು !   ನನಗೆ ನೀ ಗುರುವಾಗು ನಿನಗೆ ನಾ ಗುರುವಾಗುವೆ ಗರ್ವದಲೇ ಹೀಗೇ ತಿರುಗುವ ಮುಂದೆ ಕನಸಲ್ಲೇ  ನಾವು ಮಹಾನ್ ಗುರುಗಳು !   ನನಗೆ ನಾನೇ ಷಟ್ಪದಿ ರಾಜ ನಿನಗೆ ನೀನೇ ಛಂದಸ್ಸು ರೋಜಾ ಉಳಿದವರೆಲ್ಲಾ ಲಟಾರಿಗಳು ಮುಂದೆ ಕನಸಲ್ಲೇ ನಾವು ಪಂಪ ಮಹಾರನ್ನರು !   ನಾನೇ…
ವಿಧ: ಕವನ
September 25, 2024
ಹೊತ್ತು ಹೋಗದು ಎನುತ ಸನಿಹ ಏತಕೆ ಬಂದೆ ಸತ್ತ ಒಲವಿನ ನಡುವೆ ಸ್ನೇಹವೆಂತು ಕತ್ತು ತಿರುಗಿಸಿ ನೋಡೆ ಮುಖದೊಳಗೆ ಗೆಲುವಿಹುದೆ ಒಡಲು ಬೆಂದಿದೆ ನೋಡು ಮೋಹವೆಂತು   ಚೈತ್ರ ಚಿಗುರದೆ ಇರಲು ಮುತ್ತು ಬರುವುದೆ ಹೇಳು ಮತ್ತಿನಲಿ ಚೆಲುವಿಹುದೆ ಕೇಳಲೆಂತು ಬಾನ ಬಯಲಿನ ಒಳಗೆ ಮೋಡ ಮುಸುಕಿದ ಹಾಗೆ ನನಸೆಲ್ಲ ಬಾಡಿರಲು ಅರಳಲೆಂತು   ಉಪ್ಪು ಖಾರದ ನಡುವೆ ಸವಿ ಹುಳಿಯ ಸಮ್ಮಿಲನ ಜೊತೆ ಸೇರಿ ಬಾಳಿದರು ಪ್ರೀತಿಯೆಂತು ರಾತ್ರಿ ಕತ್ತಲೆ ಕಳೆದು ಬೆಳಕು ಬಂದರು ಜಗಕೆ ನನಗಿನ್ನು ಬರಲಿಲ್ಲ ಸೌಖ್ಯವೆಂತು   -ಹಾ .ಮ…
ವಿಧ: ಕವನ
September 24, 2024
ವಯಸ್ಸಾದಂತೆ ದ್ವೇಷವು ಹುಟ್ಟುತ್ತವೆ ಕನಸು ನನಸಾಗದೆ ಕರಗಿ ಹೋಗುತ್ತವೆ ಬಣ್ಣದ ಲೋಕದಲ್ಲಿ ಗಿಡುಗ ಸೇರುತ್ತಲಿ ಸುಣ್ಣದ ನೀರಲ್ಲಿ ಮಿಂದಂತೆ ಬದುಕುತ್ತವೆ *** ಉರಗ ಬುಸ್ಸ್ ಅಂದಂತೆ ನಾವಿರಬೇಕು ಜಾಸ್ತಿ ತಂಟೆಯನು ಮಾಡಿದರೆ ಕಚ್ಚಬೇಕು ಮಾನವೀಯತೆಯ ಜೊತೆಗೆ ಪ್ರೀತಿಯಿರಲಿ ದ್ವೇಷವು ಯಾವತ್ತಿದ್ದರೂ ಕೊನೆಯಾಗಬೇಕು *** ಕವಿ ದ್ವೇಷವಿರದೆ ಇದ್ದರದು ಮಾತ್ರವೆ ಬರಹದ ಬಂಡಿಯು ಸರಿಯಾಗಿ ಸಾಗೀತು ! *** ಉಪಯೋಗಕ್ಕೆ ಬಾರದ ವಿಚಾರಗಳ ಬದಿಗೊತ್ತಿ ಸಾಗಬೇಕು ಪ್ರೀತಿ ಹೀನ ಹೃದಯಿಗಳ ಯಾವತ್ತೂ ದೂರ ಮಾಡಬೇಕು…
ವಿಧ: ಕವನ
September 23, 2024
ಗೌರಿ ಗಣಪನ ಹಬ್ಬ  ಹೆಂಗಳೆಯರಲ್ಲಿ ಹರ್ಷ ಮೂಡಿಸಿದ- ಬಾಗಿನದ ಗೌರಿಯ ಸಂಭ್ರಮದ ಹಬ್ಬ....   ನಾವೇನು ಕಡಿಮೆ ಎಂದು ಬಾಗಿ- ಗಂಡಸರೂ ಆಚರಿಸುತಿಹರಿಂದು ಗಣಪತೀ ಹಬ್ಬ! *** ಮಹಾನ್!  ವೃದ್ಧಾಪ್ಯ ಬೇಡ; ಔಷಧಿ ಕಂಡುಹಿಡಿಯಿರೋ- ರಷ್ಯಾಧಿಪತಿ ಪುಟಿನ್...   ಅಯ್ಯೋ ಪೆದ್ದೇ- ಪ್ರಕೃತಿಯನು ಗೆದ್ದು ಬೀಗಿದವರಾರು ಇಲ್ಲವೋ ಮಹಾನ್! *** ಕಚ್ಚಾಟ-ಹುಚ್ಚಾಟ  ಖಾಲಿ ಇಲ್ಲದ ಕುರ್ಚಿಗೆ- ರಾಜ್ಯ ಕಾಂಗ್ರೆಸ್ನಲ್ಲಿ ಕಚ್ಚಾಟ...   ಸುಳಿವು ಸಿಕ್ಕು ನಡೆದಿರಬಹುದೇ...? ಅಧಿಕಾರದಾಸೆ ರಾಜಕಾರಣಿಗಳ ಹುಚ್ಚಾಟ! ***…
ವಿಧ: ಕವನ
September 22, 2024
ಗಝಲ್ ೧ ಎನ್ನ ಮನದ ಗುಡಿಯ ಒಳಗೆ ನೀನು ಬಂದು ನೆಲೆಸೆಯಾ ಮೌನ ಬಿಡುತ ಸೆಡವು ಮರೆತು ದ್ವೇಷ ಕೊಂದು ನೆಲೆಸೆಯಾ   ಎಲ್ಲೊ ಇದ್ದ ನನ್ನನಾಗ ಕರೆದು ಸನಿಹ ಕೂರಿಸಿದೆ ಬಿಟ್ಟ ಭಾವ ನೂರು ಇರಲಿ ದೋಷ ಬೆಂದು ನೆಲೆಸೆಯಾ   ಹೊಸತು ಜನುಮ ಬೇಡವೆಂದು ದೂರ ಹೋಗಿ ಕುಳಿತೆಯೊ ಹಳತಿನೊಳಗೆ ಹರೆಯವಿರಲು ಮದದ ಮುಂದು ನೆಲೆಸೆಯಾ   ಪ್ರಕೃತಿ ಒಳಗೆ ಪ್ರೇಮ ಇಹುದು ಅರಿತು ಇರದೆ ನಡೆದೆಯ ಜೀವ ನಯನ ಮೋಹದೊಳಗೆ ಸೇರಿ ಇಂದು ನೆಲೆಸೆಯಾ   ಕತೆಯ ಹಿಂದೆ ಒಲವ ಮುಂದೆ ಸಾಗುತಿರುವ ಈಶಾ ಜತನದಿಂದ ಕಾಯ್ದ ಮನವ ಹಾಗೆ ತಂದು…