ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಗೌರಿ ಗಣಪನ ಹಬ್ಬ 

ಹೆಂಗಳೆಯರಲ್ಲಿ

ಹರ್ಷ

ಮೂಡಿಸಿದ-

ಬಾಗಿನದ

ಗೌರಿಯ

ಸಂಭ್ರಮದ ಹಬ್ಬ....

 

ನಾವೇನು

ಕಡಿಮೆ

ಎಂದು ಬಾಗಿ-

ಗಂಡಸರೂ

ಆಚರಿಸುತಿಹರಿಂದು

ಗಣಪತೀ ಹಬ್ಬ!

***

ಮಹಾನ್! 

ವೃದ್ಧಾಪ್ಯ

ಬೇಡ;

ಔಷಧಿ

ಕಂಡುಹಿಡಿಯಿರೋ-

ರಷ್ಯಾಧಿಪತಿ

ಪುಟಿನ್...

 

ಅಯ್ಯೋ

ಪೆದ್ದೇ-

ಪ್ರಕೃತಿಯನು ಗೆದ್ದು

ಬೀಗಿದವರಾರು

ಇಲ್ಲವೋ

ಮಹಾನ್!

***

ಕಚ್ಚಾಟ-ಹುಚ್ಚಾಟ 

ಖಾಲಿ

ಇಲ್ಲದ

ಕುರ್ಚಿಗೆ-

ರಾಜ್ಯ

ಕಾಂಗ್ರೆಸ್ನಲ್ಲಿ

ಕಚ್ಚಾಟ...

 

ಸುಳಿವು

ಸಿಕ್ಕು

ನಡೆದಿರಬಹುದೇ...?

ಅಧಿಕಾರದಾಸೆ

ರಾಜಕಾರಣಿಗಳ

ಹುಚ್ಚಾಟ!

***

ವಿರಾಟ್ ದರ್ಶನ! 

ಜಗದಲಿ ನಡೆಯುತಿಹ

ಘನಘೋರ

ಯುದ್ಧಾತಿಯುದ್ಧಗಳ

ವರದಿಗಳೇ

ಅಷ್ಟು ವಿಸೃತವಲ್ಲ

ಓ ಹರಿಯೇ....

 

ಟಿವಿ ಮಾಧ್ಯಮದಲಿ

ಕಂಡದ್ದು- 

ಬರೀ ಅತಿರಂಜಿತ

ವಿರಾಟ್ ದರ್ಶನವೋ!

ನಾವೇನು ಕನ್ನಡ ಚಾನಲ್ಗಳ

ಹರಕೆಯ ಕುರಿಯೇ?

***

ಹಗರಣ-ವಿಚಾರಣಾ

ಮಾಜಿ

ಸಿ ಎಂ ಕುಟುಂಬಕ್ಕೆ

ಸಂಕಷ್ಟ-

ರಾಮಲಿಂಗಂ

ಲಂಚ

ಪ್ರಕರಣಾ..

 

ಅಯ್ಯೋ

ಕರ್ಮವೇ-

ನಾವಿವರನಾರಿಸಿ

ಕಳುಹಿಸಿರುವದು

ಬರೀ ಹಗರಣಗಳ

ವಿಚಾರಣೆಗಾ?

***

ದುಶ್ಮನ್ ಕಹಾಂ ಹೈ...? 

ನಾನೂ

ಸಿ ಎಂ ಹುದ್ದೆಯ

ಆಕಾಂಕ್ಷಿ...

ಸಿ ಎಂ ಬದಲಾವಣೆ ಇಲ್ಲ

ಕೈ ನಾಯಕರ 

ಸ್ಪಷ್ಟೋಕ್ತಿ...

 

ಇದು ಸಾಮಾನ್ಯ

ಜನರ ಆಶೋಕ್ತಿ ಅಲ್ಲ

ಮುಖ್ಯಮಂತ್ರಿಗಳೇ-

ನಿಮ್ಮ ಹೆಗಲ ಮೇಲೇ

ಕೈ ಹಾಕುವವರ

ಕುಯುಕ್ತಿ!

***

ಮಂಗಳಾರತಿ 

ಆರೆಸ್ಸೆಸ್

ರಾಷ್ಟ್ರೋತ್ಥಾನ

ಕೇಂದ್ರದ

ಸಭೆಯಲ್ಲಿ

ವಿಜಯೇಂದ್ರಗೆ

ಮಂಗಳಾರತಿ...

 

ಎಲ್ಲಿದ್ದರೂ-

ಅತೃಪ್ತ

ಮನಗಳು ಮಾತ್ರ

ತಡೆಯಲಾರವು

ಯಾರದೇ

ದಿಢೀರ್ ಕೀರುತಿ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್