ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ವಯಸ್ಸಾದಂತೆ ದ್ವೇಷವು ಹುಟ್ಟುತ್ತವೆ

ಕನಸು ನನಸಾಗದೆ ಕರಗಿ ಹೋಗುತ್ತವೆ

ಬಣ್ಣದ ಲೋಕದಲ್ಲಿ ಗಿಡುಗ ಸೇರುತ್ತಲಿ

ಸುಣ್ಣದ ನೀರಲ್ಲಿ ಮಿಂದಂತೆ ಬದುಕುತ್ತವೆ

***

ಉರಗ ಬುಸ್ಸ್ ಅಂದಂತೆ ನಾವಿರಬೇಕು

ಜಾಸ್ತಿ ತಂಟೆಯನು ಮಾಡಿದರೆ ಕಚ್ಚಬೇಕು

ಮಾನವೀಯತೆಯ ಜೊತೆಗೆ ಪ್ರೀತಿಯಿರಲಿ

ದ್ವೇಷವು ಯಾವತ್ತಿದ್ದರೂ ಕೊನೆಯಾಗಬೇಕು

***

ಕವಿ ದ್ವೇಷವಿರದೆ

ಇದ್ದರದು ಮಾತ್ರವೆ

ಬರಹದ ಬಂಡಿಯು

ಸರಿಯಾಗಿ ಸಾಗೀತು !

***

ಉಪಯೋಗಕ್ಕೆ ಬಾರದ ವಿಚಾರಗಳ ಬದಿಗೊತ್ತಿ ಸಾಗಬೇಕು

ಪ್ರೀತಿ ಹೀನ ಹೃದಯಿಗಳ ಯಾವತ್ತೂ ದೂರ ಮಾಡಬೇಕು

****

ಪ್ರೀತಿ ಅರಳಿದ ಗುಲಾಬಿಯಂತೆ ಸದಾ ಇರಲಿ

ಬಿಸಿಲ ಬೇಗೆಗೆ ಮುದುಡಿದ ಎಸಳಾಗದಿರಲಿ 

***

ಹೊತ್ತುಗಳು ಕಳೆದಷ್ಟೂ ಪ್ರೀತಿಗೆ ವಯಸ್ಸು ಕಡಿಮೆಯಾಗುತ್ತದೆ

ಕತ್ತಿಗಳು ಝಳಪಿಸಿದಷ್ಟೂ ನೆತ್ತರಿನ ಹೊಳೆಯು ಹರಿಯುತ್ತದೆ

***

ಚರ್ಚೆಗಳ ಆರಂಭವೇ ಹುಡುಕಾಟ ಸರಿ

ಅದರೆ ಕೊನೆಯ ಪದ ಪೇಚಾಟ ಆಗಬಾರದು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್