ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

ಗಝಲ್ ೧

ಮುತ್ತುಗಳು ಕತೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ

ಮಾತುಗಳು ಮುನಿಸಾಗುತ್ತವೆ ಕೆಲವೊಮ್ಮೆ ಸುಮ್ಮನೆ

 

ಚಿತ್ರದಲಿ ಕಾಣುವ ಮೊಗವು ನಿಜಜೀವನದಲ್ಲಿದೆಯೆ

ಸತ್ಯಗಳು ಕನಸಾಗುತ್ತವೆ ಕೆಲವೊಮ್ಮೆ ಸುಮ್ಮನೆ

 

ನನಸಿರದಿಹ ಜೀವನದಲೆಂದು ಆತುರವೇ ಕಾಣುವುದು

ಮನಸುಗಳು ಬಲಿಯಾಗುತ್ತವೆ ಕೆಲವೊಮ್ಮೆ ಸುಮ್ಮನೆ

 

ಬೆಂದಿರದ ವಸ್ತುಗಳಿಂದ ಹೊಟ್ಟೆಯದು ತುಂಬುವುದೆ

ಉತ್ತರಗಳು ಹೊರೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ

 

ಬರಡಾದ ಗುಡ್ಡದಲಿ ಹುಲ್ಲದುವು ಚಿಗುರಿತೇ ಈಶಾ

ಪ್ರೀತಿಗಳು ಕಾಣೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ

***

ಗಝಲ್ ೨

ಪ್ರೀತಿಯ ನಡುವೆ ಬಾಳಿನಲಿ ದ್ವೇಷ ಹರಡದಿರು ಮನವೆ

ಪ್ರೇಮದ ಸಲುಗೆಯ ನಡೆಗೆ ವಿಷವನು ಕಾರದಿರು ಮನವೆ

 

ಬಂಧುಗಳು ಕೈಹಿಡಿಯಲು ಬಂದರಿಂದು ಓಡುವಿ ಏತಕೆ

ಕರುಣೆಯು ಇಲ್ಲದವರಲ್ಲಿ ಸ್ನೇಹವ ಮಾಡದಿರು ಮನವೆ

 

ಉರಿಬೇಗೆಯ ಹೃದಯದೊಳು ತಂಪದುವು ಇಲ್ಲವೇನು

ಬಾಳಿನಲ್ಲಿಯ ಕೆಸರೊಳಗೆ ಕಾಲುಗಳ ಊರದಿರು ಮನವೆ

 

ಲೋಭಿಯಾದವನ ಸಂಗಡ ಮತ್ತೊಮ್ಮೆ ಯಾಕೆ ಹೋಗುವೆ

ತಾಮಸ ಗುಣದವಿರುವನ ಮಾತಿಗೆಂದೂ ಬಾಡದಿರು ಮನವೆ

 

ಉಪದೇಶದ ನಡುವೆಯೇ ನೆಲವನು ಒದ್ದು ಹೋದನೇ ಈಶಾ

ನಿರ್ದಯ ಧ್ವನಿಯವರ ಜೊತೆಗೆ ನೀನೆಂದೂ ಸೇರದಿರು ಮನವೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್