ಒಂದಿಷ್ಟು ಹನಿಗಳು

ಒಂದಿಷ್ಟು ಹನಿಗಳು

ಕವನ

ಎಲೆಕ್ಷನ್ ಆಟ? 

ಕೇಜ್ರಿವಾಲ್-

ಮತ್ತೆ ಜನಾದೇಶದ

ನಂತರವೇ

ಸಿ ಎಂ ಕುರ್ಚಿ

ಮೇಲೆ

ಕೂರುವೆ...

 

ನೀವೇನೋ ಕೂರ್ತೀರಾ;

ಏನ್ ಎಲೆಕ್ಷನ್

ಖರ್ಚನು ಮಾತ್ರ

ಜನರ ತಲೇ

ಮೇಲೆ ಎಳೆದು

ಬಿಡ್ತೀರಾ?

***

ಮಾಡಿದ್ದುಣ್ಣೋ....

ರಾಜಕೀಯಕ್ಕಿಳಿದು

ರಾಜಕಾರಣದ

ಎಲ್ಲಾ

ಸವಲತ್ತುಗಳ ಸವಿ

ಉಣ್ಣುವ

ರಾಜಕಾರಣಿಗಳೇ...

 

ನೀವು ಕೊನೆಗೊಮ್ಮೆ

ಈ ಎಲ್ಲಾ

ರಾಜಕೀಯ

ವಿಕೃತಿಗಳನೂ

ಉಣ್ಣಲು ಸಿದ್ಧರಾಗಿ

ಓ ಬಲಿಪಶುಗಳೇ!

***

ವರ್ಣಬೇಧ ನೀತಿ... 

ಮುನಿಯಾಗಿರ

ಬೇಕಿದ್ದ-

ಮುನಿರತ್ನ

ವಿರುದ್ಧ

ಒಕ್ಕಲಿಗರ

ಮುನಿಸು...

 

ರಾಜಕಾರಣಿಗಳೇ

ನಿಮಗೇಕೀ

ವರ್ಣ ಸಂಕರಾ...?

ಜೊತೆಗೂಡಿ

ತಿಂದುಬಿಡಿ

ಸವಿಯಾದ ತಿನಿಸು!

***

ಶಾಪ 

ಜನರ

ದುಡ್ಡಲಿ

ಜಾತ್ರೆ

ಮಾಡಿ

ಮೆರೆದವರ

ಕಥೆಯ ಕೇಳಿ....

 

ಆ ಹಾಳು 

ದುಡ್ಡಲಿ 

ಅವರ

ಪೀಳಿಗೆಗೆ

ಕಪ್ಪುಮಸಿ

ಬಳಿಯದಿದ್ದರೆ ಹೇಳಿ!

***

ಸಂಬಂಧಗಳು 

ನಾವು

ತಿನ್ನುವ

ಅನ್ನಾಹಾರ

ವಸ್ತುಗಳು

ಹಳಸುತ್ತವೆ

ಓ ಕೆ...

 

ಮನುಷ್ಯರ

ಈ ಭಾವ

ಸಂಬಂಧಗಳೂ

ಹಳಸಿ

ದೂರಾಗುತ್ತವಲ್ಲ

ಏಕೆ...?

***

ಎತ್ತ ಸಾಗುತಿದೆ ಜಗ? 

ಅಲ್ಲೆಲ್ಲೋ

ಯುದ್ಧದ

ಗುಂಡುಗಳ

ಶಬ್ದಗಳ

ಭೋರ್ಗರೆವ

ಮೊರೆತ...

 

ಇಲ್ಲೆಲ್ಲೋ

ರಾಜಕೀಯ

ಹಗರಣಗಳ ಸಿಡಿತ;

ತಪ್ಪುತಿದೆಯಾ

ಜಗದ ನ್ಯಾಯದ

ಹಿಡಿತ...?

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್