ಎರಡು ಗಝಲ್ ಗಳು.....
ಗಝಲ್ ೧
ಎನ್ನ ಮನದ ಗುಡಿಯ ಒಳಗೆ ನೀನು ಬಂದು ನೆಲೆಸೆಯಾ
ಮೌನ ಬಿಡುತ ಸೆಡವು ಮರೆತು ದ್ವೇಷ ಕೊಂದು ನೆಲೆಸೆಯಾ
ಎಲ್ಲೊ ಇದ್ದ ನನ್ನನಾಗ ಕರೆದು ಸನಿಹ ಕೂರಿಸಿದೆ
ಬಿಟ್ಟ ಭಾವ ನೂರು ಇರಲಿ ದೋಷ ಬೆಂದು ನೆಲೆಸೆಯಾ
ಹೊಸತು ಜನುಮ ಬೇಡವೆಂದು ದೂರ ಹೋಗಿ ಕುಳಿತೆಯೊ
ಹಳತಿನೊಳಗೆ ಹರೆಯವಿರಲು ಮದದ ಮುಂದು ನೆಲೆಸೆಯಾ
ಪ್ರಕೃತಿ ಒಳಗೆ ಪ್ರೇಮ ಇಹುದು ಅರಿತು ಇರದೆ ನಡೆದೆಯ
ಜೀವ ನಯನ ಮೋಹದೊಳಗೆ ಸೇರಿ ಇಂದು ನೆಲೆಸೆಯಾ
ಕತೆಯ ಹಿಂದೆ ಒಲವ ಮುಂದೆ ಸಾಗುತಿರುವ ಈಶಾ
ಜತನದಿಂದ ಕಾಯ್ದ ಮನವ ಹಾಗೆ ತಂದು ನೆಲೆಸೆಯಾ
***
ಗಝಲ್ ೨
ಕತೆ ಕತೆಯೆ ಹೆಣೆದರು ವ್ಯಥೆಯಾಯಿತು
ಕೊತ ಕೊತನೆ ಕುದಿದರು ಚಿತೆಯಾಯಿತು
ದಿನ ದಿನವು ಹಾಡಿದರು ಕಹಿಯಾಯಿತು
ಜನ ಜನವು ಸೇರಿದರು ಕುರುಡಾಯಿತು
ಮಳೆ ಮಳೆಯು ಬಂದಿರಲು ಕೆಸರಾಯಿತು
ಗುಳೆ ಗುಳೆಯು ಹೊರಟಿರಲು ಹೊಲಸಾಯಿತು
ಸೆಳೆ ಸೆಳೆಯು ಕಂಡಿರಲು ಬಿಲವಾಯಿತು
ಕಳೆ ಕಳೆಯು ತುಂಬಿರಲು ಮುಳ್ಳಾಯಿತು
ಪರಿ ಪರಿಯ ಮಾತಿನಲು ಮುನಿಸಾಯಿತು
ಕರಿ ಕರಿಯ ಸೊಬಗಿನಲು ಸೋಲಾಯಿತು
ಕಿರಿ ಕಿರಿಯ ಮಂದೆಯಲು ಬಿಸಿಯಾಯಿತು
ಗರಿ ಗರಿಯ ಕಾವಿಯಲು ಹುಸಿಯಾಯಿತು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ